ತೊಕ್ಕೊಟ್ಟು: ತಾತ್ಕಾಲಿಕ ಬೀಫ್ ಸ್ಟಾಲ್ ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಉಳ್ಳಾಲ: ತೊಕ್ಕೊಟ್ಟು ಒಳಪೇಟೆಯಲ್ಲಿ ತಾತ್ಕಾಲಿಕವಾಗಿ ಕಾರ್ಯಾಚರಿಸುತ್ತಿದ್ದ ಬೀಫ್ ಸ್ಟಾಲ್ ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ತಡರಾತ್ರಿ ನಡೆದಿದೆ.
ತೊಕ್ಕೊಟ್ಟು ಒಳಪೇಟೆಯ ಮಾರುಕಟ್ಟೆಯನ್ನು ನೂತನವಾಗಿ ನಿರ್ಮಿಸುವ ಉದ್ದೇಶದಿಂದ ಕೆಡವಲಾಗಿದ್ದು, ಮಾರುಕಟ್ಟೆಯ ಅಂಗಡಿಗಳಿಗೆ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗಿತ್ತು. ಇದರೊಂದಿಗೆ ಬೀಫ್ ಸ್ಟಾಲ್ ಗಳನ್ನು ರೈಲ್ವೇ ಹಲಕಿ ಬದಿಯಲ್ಲಿ ತೆರೆಯಲಾಗಿತ್ತು.
ಈ ಸ್ಟಾಲ್ ಗಳನ್ನು ಮುಚ್ಚುವಂತೆ ಕೆಲವು ಸಂಘಟನೆಗಳು ಉಳ್ಳಾಲ ನಗರಸಭೆಗೆ ಮನವಿ ಸಲ್ಲಿಸಿತ್ತು. ಈ ನಡುವೆ ಬೀಫ್ ಸ್ಟಾಲ್ ಗೆ ಬೆಂಕಿ ಹಚ್ಚಿದ್ದಾರೆ. ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
0 التعليقات: