Monday, 18 January 2021

ಕಾಂಗ್ರೆಸ್ ಸಂಕಲ್ಪ ಸಮಾವೇಶ: ತರಗತಿಯಲ್ಲಿ 'ಮಾನಿಟರ್' ಕೆಲಸ ನಿರ್ವಹಿಸಿದ ಶಿವಕುಮಾರ್


 ಕಾಂಗ್ರೆಸ್ ಸಂಕಲ್ಪ ಸಮಾವೇಶ: ತರಗತಿಯಲ್ಲಿ 'ಮಾನಿಟರ್' ಕೆಲಸ ನಿರ್ವಹಿಸಿದ ಶಿವಕುಮಾರ್

ಕಲಬುರಗಿ: ಕಲಬುರಗಿಯಲ್ಲಿ ನಡೆದ ಕಾಂಗ್ರೆಸ್ ವಿಭಾಗೀಯ ಮಟ್ಟದ ಸಂಕಲ್ಪ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತರಗತಿಯಲ್ಲಿ ಮಾನಿಟರ್ ರೀತಿ ಕೆಲಸ ಮಾಡಿದರು.

ಇದೊಂದು ವಿಭಿನ್ನ ರೀತಿಯ ಸಮಾವೇಶವಾಗಿತ್ತು. ವೇದಿಕೆ ಮೇಲೆ ಆರಂಭದಲ್ಲಿ ಯಾವೋಬ್ಬ ನಾಯಕರು ಇರಲಿಲ್ಲ, ಮಾಧ್ಯಮ ಸಮಿತಿಯ ಜಂಟಿ ಅಧ್ಯಕ್ಷ ವಿ ಆರ್ ಸುದರ್ಶನ್ ಅವರು ಮುಂದಿನ ಸಾಲಿನಲ್ಲಿ ಕುಳಿತಿದ್ದ ಗಣ್ಯರನ್ನು ಸಮಾವೇಶದ ಉದ್ಘಾಟನೆಗಾಗಿ ದೀಪ ಬೆಳಗಿಸಲು ವೇದಿಕೆಗೆ ಬರುವಂತೆ ಆಹ್ವಾನಿಸಿದರು. ದೀಪ ಬೆಳಗಿದ ಕೂಡಲೇ, ಶಿವಕುಮಾರ್ ಹೊರತುಪಡಿಸಿ ಎಲ್ಲಾ ಗಣ್ಯರು ವೇದಿಕೆಯಿಂದ ಇಳಿದು ತಮ್ಮ ಆಸನಗಳಿಗೆ ಮರಳಿದರು.

ಆರಂಭದಲ್ಲಿಯೇ ಅವರು ಸಮಾವೇಶದಲ್ಲಿ ಪಾಲ್ಗೊಳ್ಳುವ ನಾಯಕರಿಗೆ ಶಿಸ್ತು ಕಾಪಾಡುವಂತೆ ಸೂಚನೆ ನೀಡಿದರು. ಮೊಬೈಲ್‌ನಲ್ಲಿ ಮಾತನಾಡಬಾರದು, ಸಂದೇಶಗಳನ್ನು ಕಳುಹಿಸಬಾರದು, ಸಭಾಂಗಣದಲ್ಲಿ ಇತರ ನಾಯಕರೊಂದಿಗೆ ಚಾಟ್ ಮಾಡಬೇಡಿ. ಯಾರಾದರೂ ಶಿಸ್ತನ್ನು ಮೀರುತ್ತಾರೆಯೇ ಎಂದು ನೋಡಲು ಕೆಪಿಸಿಸಿ ಸಿಬ್ಬಂದಿಯನ್ನು ನಿಯೋಜಿಸಿತ್ತು.

ಬ್ಲಾಕ್ ಅಧ್ಯಕ್ಷರಿಗೆ ಮಾತನಾಡಲು ಮೂರು ನಿಮಿಷ ಸಮಯವಿರುತ್ತದೆ, 3 ನಿಮಿಷ ಆದ ಮೇಲೆ ಬೆಲ್ ಮಾಡಲಾಗುತ್ತದೆ, ಬೆಲ್ ಮಾಡಿದ ಕೂಡಲೇ ಮಾತನ ನಲ್ಲಿಸಬೇಕೆಂದು ಮಾನಿಟರ್ ಶಿವಕುಮಾರ್ ಸೂಚಿಸಿದರು. ನೇರವಾಗಿ ಸಮಸ್ಯೆಗಳ ಬಗ್ಗೆ ಹೇಳಬೇಕು, ಹಾಗೂ ಸಮಸ್ಯೆ ಪರಿಹಾರವನ್ನು ಸೂಚಿಸಬೇಕೆಂದು ತಿಳಿಸಿದರು.

ನಾನು ಅಧ್ಯಕ್ಷನಾದಾಗಿನಿಂದಲೂ, ಪಕ್ಷದಲ್ಲಿ ಎಲ್ಲರೂ ಸಮಾನರು ಎಂದು ತೋರಿಸಲು ನಾನು ಒಂದು ಪ್ರಯೋಗವನ್ನು ಪ್ರಾರಂಭಿಸಿದ್ದೇನೆ, ಪಕ್ಷ ಆಯೋಜಿಸುವ ಸಮಾವೇಶದಲ್ಲಿ ಯಾರೋಬ್ಬರು ವೇದಿಕೆ ಮೇಲೆ ಕೂರುವ ಆಗಿಲ್ಲ, ದಲಾಗಿ ಯಾರು ಮಾತನಾಡುವವರು ಇದ್ದಾರೋ ಅವರು ಮಾತ್ರ ವೇದಿಕೆಯ ಮೇಲೆ ತೆರಳಿ ತಮ್ಮ ಮಾತು ಮುಗಿದ ಬಳಿಕ ಕೆಳಗೆ ಬರಬೇಕು. ‍ಪಕ್ಷದ ರಾಷ್ಟ್ರೀಯ ಮುಖಂಡರು ಹಾಗೂ ರಾಜ್ಯದ 50 ಪ್ರಮುಖ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಈ ತೀರ್ಮಾನವನ್ನು ಕೈಗೊಂಡಿದ್ದೇನೆ' ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್ ಅಥವಾ ರಾಜ್ಯ ಕಾಂಗ್ರೆಸ್‌ನ ವಿವಿಧ ಸಮಿತಿಗಳಲ್ಲಿ ಒಬ್ಬ ಮುಖಂಡರು ಎರಡು ಮೂರು ಸಮಿತಿಗಳಲ್ಲಿ ಇರುವಂತಿಲ್ಲ. ಒಬ್ಬರಿಗೆ ಒಂದು ಸ್ಥಾನವನ್ನು ಮಾತ್ರ ನೀಡಲಾಗುವುದು. ಇದರಿಂದ ಪಕ್ಷಕ್ಕಾಗಿ ಕೆಲಸ ಮಾಡಿದವರಿಗೆ ಪ್ರಾತಿನಿಧ್ಯ ನೀಡಿದಂತಾಗುತ್ತದೆ ಎಂದು ಹೇಳಿದರು.


SHARE THIS

Author:

0 التعليقات: