ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಅವೈಜ್ಞಾನಿಕ : ಸಚಿವ ಬಿ.ಸಿ.ಪಾಟೀಲ್
ಕೋಲಾರ : ದೆಹಲಿಯಲ್ಲಿ ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ಅವೈಜ್ಞಾನಿಕ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಿ.ಸಿ. ಪಾಟೀಲ್, ಪಂಜಾಬ್, ಹರಿಯಾಣ ರೈತರು 2008 ರಲ್ಲಿ ಎಪಿಎಂಸಿ ಮಾರುಕಟ್ಟೆ ಬೇಡವೆಂದು ಹೋರಾಟ ಮಾಡಿದರು. 2013 ರಲ್ಲಿ ಶರತ್ ಪವಾರ್ ನೇತೃತ್ವದ ಯುಪಿ ಸರ್ಕಾರ 13 ರಾಜ್ಯಗಳ ಕೃಷಿ ಸಚಿವರ ಕಮಿಟಿ ಮಾಡಿದರು. 2014 ರಲ್ಲಿ 90 ಪುಟ ಗಳ ವರದಿ ನೀಡಿದ್ದರು. ಅದರ ವಿರುದ್ದವೇ ಇದೀಗ ಹೋರಾಟ ಮಾಡುತ್ತಿದ್ದಾರೆ ಎಂದರು.
ನರೇಂದ್ರ ಮೋದಿ ಸರ್ಕಾರ ರೈತರ ಪರವಾಗಿದೆ. ರೈತರು ತಮ್ಮ ಬೆಳೆಗೆ ತಾವೇ ವೈಜ್ಞಾನಿಕ ಬೆಲೆ ನಿಗದಿ ಮಾಡಬಹುದು. ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಅವೈಜ್ಞಾನಿಕವಾಗಿದ್ದು, ರೈತರು ಪ್ರತಿಭಟನೆ ಹಿಂಪಡೆಯುವುದು ಒಳ್ಳೆಯದು ಎಂದು ಹೇಳಿದರು.
0 التعليقات: