Wednesday, 27 January 2021

ರೈತ ಹೋರಾಟ ಬೆಂಬಲಿಸಿ ರ‍್ಯಾಣದ ಐ.ಎನ್.ಎಲ್.ಡಿ ಶಾಸಕ ಅಭಯ್ ಸಿಂಗ್ ಚೌಟಾಲ ರಾಜೀನಾಮೆ


ರೈತ ಹೋರಾಟ ಬೆಂಬಲಿಸಿ ರ‍್ಯಾಣದ ಐ.ಎನ್.ಎಲ್.ಡಿ ಶಾಸಕ ಅಭಯ್ ಸಿಂಗ್ ಚೌಟಾಲ ರಾಜೀನಾಮೆ

ನವದೆಹಲಿ : ಕೇಂದ್ರದ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ರ‍್ಯಾಣದ ಭಾರತೀಯ ರಾಷ್ಟ್ರೀಯ ಲೋಕ ದಳ (ಐಎನ್ ಎಲ್ ಡಿ) ಶಾಸಕ ಅಭಯ ಸಿಂಗ್ ಚೌಟಾಲ ಬುಧವಾರ ರಾಜೀನಾಮೆ ನೀಡಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸಕ್ರಿಯವಾಗಿರುವ ಅಭಯ್ ಸಿಂಗ್ ಮೂರು ದಿನಗಳ ಹಿಂದೆಯೇ ರಾಜೀನಾಮೆ ಸಲ್ಲಿಸಿದ್ದು, ಗಣರಾಜ್ಯೋತ್ಸವ ದಿನದಂದು ರೈತರ ಬೇಡಿಕೆ ಕೇಂದ್ರ ಸರಕಾರ ಒಪ್ಪದಿದ್ದಲ್ಲಿ ರಾಜೀನಾಮೆ ಅಂಗೀಕಾರ ಮಾಡುವಂತೆ ಮನವಿ ಮಾಡಿದ್ದರು. ಆ ಪ್ರಕಾರ, ಇಂದು ಸ್ಪೀಕರ್ ಜಿಯಾನ್ ಚಡ್ ಗುಪ್ತಾ ಶಾಸಕರ ರಾಜೀನಾಮೆ ಸ್ವೀಕರಿಸಿದ್ದಾರೆ.

ಮೂರು ಬಾರಿ ಶಾಸಕರಾಗಿರುವ ಅಭಯ್ ಸಿಂಗ್ ಗೆ ರೈತ ಮತಗಳೇ ಆಧಾರವಾಗಿರುವುದರಿಂದ ರೈತರ ಹೋರಾಟದಲ್ಲಿ ಅವರ ಪಕ್ಷ ಸಕ್ರಿಯವಾಗಿದೆ.SHARE THIS

Author:

0 التعليقات: