Monday, 11 January 2021

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ನಾನೇ ಕಾರಣ: ಹೆಚ್.‌ ನಾಗೇಶ್‌


 ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ನಾನೇ ಕಾರಣ: ಹೆಚ್.‌ ನಾಗೇಶ್‌

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ನಾನೇ ಪ್ರಮುಖ ಕಾರಣ. ನನಗೆ ಯಡಿಯೂರಪ್ಪ ಅವ್ರ ಮೇಲೆ ನೂರಕ್ಕೆ ನೂರರಷ್ಟು ನಂಬಿಕೆಯಿದ್ದು, ನನ್ನನ್ನ ಸಂಪುಟದಿಂದ ಕೈಬಿಡುವುದಿಲ್ಲ ಎನ್ನುವ ವಿಶ್ವಾಸ ನನಗಿದೆ ಎಂದು ಅಬಕಾರಿ ಸಚಿವ ಹೆಚ್.‌ ನಾಗೇಶ್‌ ಹೇಳಿದ್ದಾರೆ.

ಸಚಿವ ಸಂಪುಟದ ಸರ್ಜರಿ ಬಗ್ಗೆ ಮಾದ್ಯಮಗಳೊಂದಿಗೆ ಮಾತನಾಡಿದ ಸಚಿವರು, ' ಸಂಪುಟದಿಂದ ನನ್ನನ್ನ ಕೈಬಿಡುವ ವಿಚಾರ ಕೇಳಿ ನನಗೆ ಶಾಕ್‌ ಆಗಿದೆ. ಮಂತ್ರಿ ಸ್ಥಾನ ನೀಡಿದಾಗ ನೀನೂ ಇನ್ನು 3 ವರ್ಷಗಳ ಕಾಲ ಮಂತ್ರಿಯಾಗಿರ್ತೀಯಾ ಅಂತಾ ಸಿಎಂ ಹೇಳಿದ್ರು. ಹಾಗಾಗಿ ಸಿಎಂ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಎರಡುವರೆ ವರ್ಷಗಳ ಕಾಲ ನಾನೇ ಮಂತ್ರಿಯಾಗಿರ್ತೀನಿ. ಯಡಿಯೂರಪ್ಪರನ್ನೂ ಭೇಟಿಯಾಗಿ ಮಾತನಾಡ್ತೇನೆ ಎಂದರು.

ಇನ್ನು ನೂರಕ್ಕೆ ನೂರರಷ್ಟು ನನ್ನನ್ನ ಕೈಬಿಡುವುದಿಲ್ಲ ಎಂಬ ವಿಶ್ವಾಸ ನನಗಿದೆ. ಯಾಕಂದ್ರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ನಾನೇ ಪ್ರಮುಖ ಕಾರಣ. ಸಮ್ಮಿಶ್ರ ಸರ್ಕಾರವನ್ನ ತೊರೆದು ಮೊದಲು ರಾಜೀನಾಮೆ ಕೊಟ್ಟವನು ನಾನು. ನಂತರ ಎಲ್ಲರೂ ಧೈರ್ಯ ಮಾಡಿ ರಾಜೀನಾಮೆ ಕೊಟ್ಟರು ಎಂದು ವಿಕಾಸಸೌಧದಲ್ಲಿ ಅಬಕಾರಿ ಸಚಿವ ಹೆಚ್‌. ನಾಗೇಶ್‌ ಹೇಳಿದರು.


SHARE THIS

Author:

0 التعليقات: