Sunday, 31 January 2021

ಒಡಿಶಾದ ಕೊರಪುಟ್ ನಲ್ಲಿ ಭೀಕರ ಅಪಘಾತ: 9 ಪ್ರಯಾಣಿಕರು ಸಾವು, 11 ಮಂದಿಗೆ ಗಾಯ


ಒಡಿಶಾದ ಕೊರಪುಟ್ ನಲ್ಲಿ ಭೀಕರ ಅಪಘಾತ: 9 ಪ್ರಯಾಣಿಕರು ಸಾವು, 11 ಮಂದಿಗೆ ಗಾಯ


ಜೇಪೋರ್: ವ್ಯಕ್ತಿ ನಿಧನವಾಗಿ 10 ದಿನ ಬಳಿಕ ನಡೆಯುವ ಧಾರ್ಮಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಲು ಛತ್ತೀಸ್ ಗಢದಿಂದ ಹೊರಟಿದ್ದ ಜನರ ಬದುಕು ದಾರುಣ ಅಂತ್ಯವಾಗಿದೆ. ಪಿಕ್ ಅಪ್ ವ್ಯಾನ್ ರಸ್ತೆಬದಿಯ ಮರಕ್ಕೆ ಢಿಕ್ಕಿ ಹೊಡೆದು ಮಗುಚಿಬಿದ್ದು 9 ಮಂದಿ ಮೃತಪಟ್ಟು 11 ಮಂದಿಗೆ ಗಾಯವಾದ ಘಟನೆ ಒಡಿಶಾದ ಜೇಪೋರ್ ನ ಮುರ್ತಹಂಡಿ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ.


7 ಮಂದಿ ಸ್ಥಳದಲ್ಲಿಯೇ ಮೃತಪಟ್ಟರೆ ಮತ್ತಿಬ್ಬರು ಸಮುದಾಯ ಕೇಂದ್ರದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಒಡಿಶಾದ ನೈರುತ್ಯ ವಲಯದ ಡಿಐಜಿ ರಾಜೇಶ್ ಪಂಡಿತ್ ತಿಳಿಸಿದ್ದಾರೆ.


ಗಾಯಗೊಂಡ 11 ಮಂದಿಯಲ್ಲಿ ನಾಲ್ವರು ಕೊಟ್ಪಾಡ್ ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದಾರೆ. ಮತ್ತೆ 7 ಮಂದಿ ಜಗ್ದಾಲ್ ಪುರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ರಾತ್ರಿ 8.45ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ.


ಅಪಘಾತದ ನಂತರ ಚಾಲಕ ತಲೆಮರೆಸಿಕೊಂಡಿದ್ದಾರೆ. ರೈಲ್ವೆ ಹಳಿಯ ಸ್ವಲ್ಪ ಮೊದಲು ಪಿಕ್ ಅಪ್ ವ್ಯಾನ್ ಮಗುಚಿ ಬಿದ್ದು ಈ ಅಪಘಾತ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ವಾಹನದೊಳಗೆ ಸುಮಾರು 30 ಮಂದಿ ಪ್ರಯಾಣಿಕರಿದ್ದರು ಎಂದು ಒಡಿಶಾ ಅಗ್ನಿಶಾಮಕ ಸೇವೆಯ ಅಧಿಕಾರಿ ತಿಳಿಸಿದ್ದಾರೆ.SHARE THIS

Author:

0 التعليقات: