![]() |
ದೇಶದ 7 ರಾಜ್ಯಗಳಲ್ಲಿ ಹಕ್ಕಿಜ್ವರ : ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಸರ್ಕಾರ ಸೂಚನೆ
ನವದೆಹಲಿ: ಹರಿಯಾಣ, ಗುಜರಾತ್ ಮತ್ತು ರಾಜಸ್ಥಾನದಲ್ಲಿ ಹಕ್ಕಿ ಜ್ವರ ದಹೆಚ್ಚು ಪ್ರಕರಣಗಳು ದೃಢಪಟ್ಟಿರುವುದರಿಂದ, ಈ ರೋಗಹರಡುವಿಕೆಯನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಇತ್ತೀಚೆಗೆ ಹರಿಯಾಣದ ಪಂಚಕುಲಾ ಜಿಲ್ಲೆಯ ಎರಡು ಫಾರಂಗಳಲ್ಲಿ ಹಕ್ಕಿಜ್ವರದ ಪಾಸಿಟಿವ್ ಸ್ಯಾಂಪಲ್ ಗಳು ವರದಿಯಾಗಿದ್ದವು. ರಾಜ್ಯವು NINCE Rapid Response ತಂಡವನ್ನು ನಿಯೋಜಿಸಿದೆ ಮತ್ತು ನಿಯಂತ್ರಣ ಕಾರ್ಯಾಚರಣೆಯು ಎರಡೂ ಕೇಂದ್ರಗಳಲ್ಲಿ ನಡೆಯುತ್ತಿದೆ.ಗುಜರಾತ್ ನ ಸೂರತ್ ನಿಂದ ಮತ್ತು ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಹಕ್ಕಿಜ್ವರ (ಎಚ್ 5) ಕಾಗೆ/ಕಾಡು ಹಕ್ಕಿಗಳ ಮಾದರಿಗಳು ದೃಢಪಟ್ಟಿವೆ.
ಭಾರತದಲ್ಲಿ ಈಗ ಏಳು ರಾಜ್ಯಗಳಲ್ಲಿ ಹಕ್ಕಿ ಜ್ವರ ದೃಢಪಟ್ಟಿದೆ. ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಹರಿಯಾಣ ಮತ್ತು ಗುಜರಾತ್. ಜೀವಂತ ಪಕ್ಷಿ ಮಾರುಕಟ್ಟೆಗಳು, ಪ್ರಾಣಿ ಸಂಗ್ರಹಾಲಯಗಳು, ಕೋಳಿ ಫಾರಂಗಳು ಇತ್ಯಾದಿಗಳ ಮೇಲೆ ಕಣ್ಗಾವಲು ಹೆಚ್ಚಿಸಲು ಮತ್ತು ಕೋಳಿ ಫಾರಂಗಳಲ್ಲಿ ಜೈವಿಕ ಭದ್ರತೆಯನ್ನು ಬಲಪಡಿಸುವಂತೆ ರಾಜ್ಯಗಳಿಗೆ ಮನವಿ ಮಾಡಲಾಗಿದೆ.
0 التعليقات: