Thursday, 21 January 2021

ಬೆಳ್ಳಿಪ್ಪಾಡಿ ಅಬ್ದುಲ್ಲಾ ಮುಸ್ಲಿಯಾರ್ ವಫಾತಾದರು. ಧಫನ ಶುಕ್ರವಾರ ಬೆಳಗ್ಗೆ 7:30 ಕ್ಕೆ ಮುಹಿಮ್ಮಾತಿನಲ್ಲಿ


 ಬೆಳ್ಳಿಪ್ಪಾಡಿ ಅಬ್ದುಲ್ಲಾ ಮುಸ್ಲಿಯಾರ್ ವಫಾತಾದರು 
ಧಫನ ಶುಕ್ರವಾರ ಬೆಳಗ್ಗೆ 7:30 ಕ್ಕೆ ಮುಹಿಮ್ಮಾತಿನಲ್ಲಿ 

ಕಾಸರಗೋಡು: ಪ್ರಮುಖ ಪಂಡಿತ ಮತ್ತು ಮುಹಿಮ್ಮಾತ್ ಸೀನಿಯರ್ ಮುದರ್ರಿಸ್,  ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾಸರಗೋಡು  ಜಿಲ್ಲಾ ಉಪಾಧ್ಯಕ್ಷರೂ ಆಗಿರುವ ಬೆಳ್ಳಿಪ್ಪಾಡಿ ಅಬ್ದುಲ್ಲಾ ಮುಸ್ಲಿಯಾರ್ (77) ವಫಾತಾದರು. 

ಮುಳಿಯಾರ್ ಪಂಚಾಯತಿನ ಬೆಳ್ಳಿಪ್ಪಾಡಿ ಸ್ವದೇಶಿ ಆಗಿರುವ ಅಬ್ದುಲ್ಲಾ ಮುಸ್ಲಿಯಾರ್ ಆದೂರಿನಲ್ಲಿ ವಾಸವಾಗಿದ್ದರು. ತಂದೆ ಮರ್ಹೂಮ್ ಮುಹಮ್ಮದ್ ಹಾಜಿ. ಬೇರ್ಕ ಅಬ್ದುಲ್ಲಾ ಮುಸ್ಲಿಯಾರ್ ರವರಿಂದ ಧಾರ್ಮಿಕ ವಿದ್ಯೆ ಕಲಿಯಲು ಪ್ರಾರಂಭಿಸಿದರು. ಸಂಶುಲ್ ಉಲಮ ಇ.ಕೆ ಅಬೂಬಕರ್ ಮುಸ್ಲಿಯಾರ್, ಕೋಟುಮಲ ಅಬೂಬಕರ್ ಮುಸ್ಲಿಯಾರ್, ತಾಜುಶ್ಶರೀಅ ಎಂ ಅಲಿಕುಞ್ಞಿ ಮುಸ್ಲಿಯಾರ್, ಬಾಲನಡುಕ್ಕ ಅಬ್ದುರ್ರಹ್ಮಾನ್ ಮುಸ್ಲಿಯಾರ್, ಮುಹ್ಯಿದ್ದೀನ್ ಮುಸ್ಲಿಯಾರ್, ಪಝಯಙ್ಙಾಡಿ ಅವರಾನ್ ಕುಟ್ಟಿ ಮುಸ್ಲಿಯಾರ್, ಮಂಜೇರಿ ಅಬ್ದುಲ್ಲಾ ಮುಸ್ಲಿಯಾರ್, ಶರ್ಕಾವಿ ಅಬ್ದುಲ್ ಖಾದರ್ ಮುಸ್ಲಿಯಾರ್ ಮುಂತಾದವರು ಗುರುಗಳು.  ಪಟ್ಟಿಕಾಡ್ ಜಾಮಿಅ ನೂರಿಯ್ಯಾದಿಂದ 1971 ರಲ್ಲಿ ಫೈಝಿ ಬಿರುದು ಪಡೆದರು. 

ಉಪ್ಪಿನಂಗಡಿ ಟೌನ್ ಮಸ್ಜಿದ್,  ಸುಳ್ಯ ಟೌನ್ ಮಸ್ಜಿದ್, ಪೆರ್ಲ ಮರ್ತ್ಯಾ ಜುಮಾ ಮಸ್ಜಿದ್, ಕುಂಬೋಲ್ ಬದ್ರಿಯ್ಯಾ ಮಸ್ಜಿದ್ ಪಾಪಂ ಕೋಯ ನಗರ್ ಮುಂತಾದ ಸ್ಥಳಗಳಲ್ಲಿ ಸೇವೆ ಸಲ್ಲಿಸಿದ ನಂತರ 2008 ರಿಂದ ಮುಹಿಮ್ಮಾತಿನಲ್ಲಿ ಮುದರ್ರಿಸ್ ಆಗಿ ಸೇವೆ ಸಲ್ಲಿಸುತ್ತಿದ್ದರು.

ಕೇರಳ ಮತ್ತು ಕರ್ನಾಟಕದ ಮತ ಪ್ರಭಾಷಣ ಮಾಡುತ್ತಾ ಬೆಳ್ಳಿಪ್ಪಾಡಿ ಅಬ್ದುಲ್ಲಾ ಮುಸ್ಲಿಯಾರ್ ಪ್ರಸಿದ್ಧಿ ಪಡೆದಿದ್ದರು. ಉಸ್ತಾದರ ತಾಯಿ ಝುಲೈಖ. 

ಪತ್ನಿ: ನಫೀಸ 

ಮಕ್ಕಳು: ಮುಹಮ್ಮದ್, ಸಿದ್ದೀಕ್, ಉಮರುಲ್ ಫಾರೂಕ್, ಹಂಝ, ಉಸ್ಮಾನ್, 

ಮುಹಮ್ಮದ್ ಅಲಿ ಹಿಮಮಿ ಸಖಾಫಿ, ಯೂಸುಫ್, ಸೌದ

ಸಹೋದರರು: ಅಬ್ದುರ್ರಹ್ಮಾನ್ ಹಾಜಿ, ಮೊಯ್ದೀನ್ ಹಾಜಿ, ಅಬೂಬಕರ್ ಹಾಜಿ, ಇಬ್ರಾಹೀಂ ಹಾಜಿ, ಖದೀಜ, ಆಯಿಷ, ನಬೀಸ

ದಫನ ಶುಕ್ರವಾರ ಬೆಳಗ್ಗೆ 7.30 ಕ್ಕೆ ಮುಹಿಮ್ಮಾತಿನಲ್ಲಿ ನಡೆಯಲಿದೆ.


SHARE THIS

Author:

0 التعليقات: