Friday, 15 January 2021

6.24 ಕ್ವಿಂಟಾಲ್‌ ಪಡಿತರ ಅಕ್ಕಿ ವಶ


6.24 ಕ್ವಿಂಟಾಲ್‌ ಪಡಿತರ ಅಕ್ಕಿ ವಶ


ಹೊಸಪೇಟೆ: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 6.24 ಕ್ವಿಂಟಾಲ್‌ ಪಡಿತರ ಅಕ್ಕಿಯನ್ನು ಆಹಾರ ಇಲಾಖೆಯ ಅಧಿಕಾರಿಗಳು ಗುರುವಾರ ರಾತ್ರಿ ಚಿತ್ತವಾಡ್ಗಿಯ ನರೇಗಲ್‌ ಆಸ್ಪತ್ರೆ ಕ್ರಾಸ್‌ ಬಳಿ ವಶಪಡಿಸಿಕೊಂಡಿದ್ದಾರೆ.


ಚಲುವಾದಿಕೇರಿಯ ಆಟೊ ಚಾಲಕ ಸಿ. ಮೂರ್ತಿ, ತಾಯಿ ಮಂತಮ್ಮ ಹಾಗೂ ಕೃತ್ಯಕ್ಕೆ ಬಳಸಿದ ಆಟೊ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕರ್ನಾಟಕ ಅಗತ್ಯ ವಸ್ತುಗಳ ಕಾಯ್ದೆ ಅಡಿ ಚಿತ್ತವಾಡ್ಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಆಹಾರ ಇಲಾಖೆಯ ಇನ್‌ಸ್ಪೆಕ್ಟರ್‌ ಆರ್‌. ಅಜಿತ್‌ ಕುಮಾರ್‌, ಪಿಎಸ್‌ಐ ಸರೋಜಮ್ಮ, ಕಾನ್‌ಸ್ಟೆಬಲ್‌ಗಳಾದ ರಾಜೇಶ್‌, ಎಚ್‌.ಸಿ.ನಾಗರಾಜ, ರವಿಕುಮಾರ ದಾಳಿಯಲ್ಲಿ ಪಾಲ್ಗೊಂಡಿದ್ದರು.SHARE THIS

Author:

0 التعليقات: