Saturday, 23 January 2021

ಮಹಾರಾಷ್ಟ್ರ: ಖಾಡ್ಕಿ ಘಾಟ್‌ ನಲ್ಲಿ ಪ್ರಪಾತಕ್ಕೆ ಬಿದ್ದ ವಾಹನ: 6 ಸಾವು, 18 ಮಂದಿ ಗಾಯ


ಮಹಾರಾಷ್ಟ್ರ: ಖಾಡ್ಕಿ ಘಾಟ್‌ ನಲ್ಲಿ ಪ್ರಪಾತಕ್ಕೆ ಬಿದ್ದ ವಾಹನ: 6 ಸಾವು, 18 ಮಂದಿ ಗಾಯ


ಮುಂಬೈ: ಮಹಾರಾಷ್ಟ್ರದ ನಂದರ್‌ಬಾರ್‌ ಜಿಲ್ಲೆಯಲ್ಲಿ ಪ್ರಯಾಣಿಕ ವಾಹನವೊಂದು 400 ಅಡಿ ಆಳದ ಕಮರಿಗೆ ಉರುಳಿಬಿದ್ದ ಪರಿಣಾಮ, 6 ಮಂದಿ ಮೃತಪಟ್ಟು, 18 ಮಂದಿ ಗಾಯಗೊಂಡಿದ್ದಾರೆ.


ಗಾಯಾಳುಗಳ ಪೈಕಿ 7 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಖಾಡ್ಕಿ ಘಾಟ್‌ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ 10.30ರ ವೇಳೆಗೆ ಈ ಘಟನೆ ನಡೆದಿದೆ.


ಮೃತರೆಲ್ಲರೂ ಝಾಪಿ ಫ‌ಲಾಯಿ ಗ್ರಾಮದ ನಿವಾಸಿಗಳಾಗಿದ್ದಾರೆ. ಸುಮಾರು 24 ಮಂದಿ (ಬಹುತೇಕ ಕಾರ್ಮಿಕರು) ಮಹೀಂದ್ರಾ ಮ್ಯಾಕ್ಸ್‌ ವಾಹನದಲ್ಲಿ ತೋರನ್ಮಾಲ್‌ಗೆ ತೆರಳುತ್ತಿದ್ದರು.


ಏಕಾಏಕಿ ವಾಹನವು ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಉರುಳಿದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.SHARE THIS

Author:

0 التعليقات: