Saturday, 16 January 2021

ಇನ್ಮುಂದೆ ಬೈಕ್ʼ​ನಲ್ಲಿ ʼಸೈಡ್​ ಮಿರರ್ʼ​ ಇರದಿದ್ರೆ ರೂ500 ದಂಡ ತೆರಬೇಕಾಗುತ್ತೆ ಎಚ್ಚರ..!


ಇನ್ಮುಂದೆ ಬೈಕ್ʼ​ನಲ್ಲಿ ʼಸೈಡ್​ ಮಿರರ್ʼ​ ಇರದಿದ್ರೆ ರೂ500 ದಂಡ ತೆರಬೇಕಾಗುತ್ತೆ ಎಚ್ಚರ..!

ನವದೆಹಲಿ: ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೊಸದೊಂದು ನಿಯಮ ಜಾರಿಯಾಗಿದೆ. ಈ ಹೊಸ ನಿಯಮದ ಅನುಸಾರ ಬೈಕ್​ನಲ್ಲಿ ಸೈಡ್​ ಮಿರರ್​ ಇರದಿದ್ದರೆ ರೂ500 ಮತ್ತು ಕಾರಿನಲ್ಲಿ ಹಿಂಬದಿ ಕುಳಿತವರು ಸೀಟ್​ ಬೆಲ್ಟ್​ ಧರಿಸದಿದ್ದರೆ ರೂ1000 ದಂಡ ತೆರಬೇಕಾಗುತ್ತೆ.

ಈ ಕುರಿತು ಅಧಿಕೃತ ಹೇಳಿಕೆ ನೀಡಿರುವ ದೆಹಲಿ ಸಂಚಾರ ಪೊಲೀಸರು, 'ಈ ನಿಯಮಗಳನ್ನೇನು ಹೊಸದಾಗಿ ರೂಪುಗೊಂಡಿಲ್ಲ. ಮೋಟಾರು ವಾಹನ ಕಾಯ್ದೆ 1988 ಮತ್ತು ಕೇಂದ್ರೀಯ ಮೋಟಾರು ವಾಹನ ಕಾಯ್ದೆ 1989 ಎರಡರಲ್ಲೂ ಈ ನಿಯಮಗಳನ್ನ ಉಲ್ಲೇಖಿಸಲಾಗಿದೆ. ಆದರೆ, ಅವುಗಳ ಪಾಲನೆಯಾಗುತ್ತಿಲ್ಲವಷ್ಟೇ. ಇನ್ಮುಂದೆ ಇದನ್ನ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಮತ್ತು ನಿಯಮ ಪಾಲಿಸದವರಿಗೆ ದಂಡ ವಿಧಿಸಲಾಗುವುದು ಎಂದಿದ್ದಾರೆ.



SHARE THIS

Author:

0 التعليقات: