ಮೈಸೂರು ವಿ.ವಿಯ ಬಿ.ಎಡ್ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ : ಪರೀಕ್ಷಾ ಶುಲ್ಕದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಿ ಆದೇಶ
ಮೈಸೂರು : ಮೈಸೂರು ವಿಶ್ವವಿದ್ಯಾಲಯ ಬಿಎಡ್ ಪದವಿ ಪರೀಕ್ಷೆಗಳ ಪರೀಕ್ಷಾ ಶುಲ್ಕದಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡಿ ಆದೇಶ ಹೊರಡಿಸಿದೆ. 2019-20 ನೇ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕ, ಸ್ನಾತಕೋತ್ತರ ಇಂಟರ್ ಮೀಡಿಯೇಟ್ ಸೆಮಿಸ್ಟರ್ ಪರೀಕ್ಷೆ ಜನವರಿಯಲ್ಲಿ ನಡೆಯಲಿದ್ದು, ಪರೀಕ್ಷಾ ಶುಲ್ಕದಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡಿದೆ.
ಜನವರಿ ತಿಂಗಳಲ್ಲಿ ಬಿ.ಎಡ್ ಪದವಿಯ ಎರಡನೇ ಹಾಗೂ ನಾಲ್ಕನೇ ಸೆಮಿಸ್ಟರ್ ಗಳ ಪರೀಕ್ಷೆ ನಡೆಯಲಿದ್ದು, ವಿವಿ ಆಡಳಿತ ಮಂಡಳಿ ಪರೀಕ್ಷಾ ಶುಲ್ಕವನ್ನು ಶೇ. 50 ರಷ್ಟು ಕಡಿಮೆ ಮಾಡಿದ್ದು, ಬಿಎಡ್ ಪರೀಕ್ಷಾ ಶುಲ್ಕ 1,300 ರೂ. ಇದ್ದು, ಇದೀಗ ರಿಯಾಯಿತಿ ನಂತರ 650 ರೂ. ಗೆ ಇಳಿದಿದೆ. ಒಂದು ವಿಷಯಕ್ಕೆ (ಪ್ರಾಯೋಗಿಕ ಪರೀಕ್ಷೆಯೊಂದಿಗೆ) 770 ರೂ. ಇದ್ದು, ರಿಯಾಯಿತಿ ಬಳಿಕ 385 ರೂ. ಒಂದು ವಿಷಯಕ್ಕೆ (ಪ್ರಾಯೋಗಿಕ ಪರೀಕ್ಷೆ ಇಲ್ಲದಿರುವ) 440 ರೂ. ಶುಲ್ಕವಿದ್ದು, ರಿಯಾಯಿತಿ ನಂತರ 220ಕ್ಕೆ ಇಳಿಸಲಾಗಿದೆ. ಈ ಶುಲ್ಕ ಇಳಿಕೆ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನ್ವಯವಾಗಲಿದೆ ಎಂದು ವಿವಿ ಮಾಹಿತಿ ನೀಡಿದೆ.
0 التعليقات: