Wednesday, 6 January 2021

ಭಾರತದ ಗಡಿ ನುಸುಳಲು 400 ಕ್ಕೂ ಹೆಚ್ಚು ಉಗ್ರರು ಎಲ್‌ಒಸಿ ಬಳಿ ಸಜ್ಜು


ಭಾರತದ ಗಡಿ ನುಸುಳಲು 400 ಕ್ಕೂ ಹೆಚ್ಚು ಉಗ್ರರು ಎಲ್‌ಒಸಿ ಬಳಿ ಸಜ್ಜು

ಶ್ರೀನಗರ: ಜಮ್ಮು ಕಾಶ್ಮೀರದ ಗಡಿಯಲ್ಲಿ ಭಾರತೀಯ ಸೇನೆ ಉಗ್ರ ನಿಗ್ರಹದ ಕಾರ್ಯಾಚರಣೆಯಲ್ಲಿ ಯಶಸ್ಸು ಕಂಡಿತ್ತು, ಇದರ ನಡುವೆಯೇ ಪಾಕಿಸ್ತಾನ ಸೇನೆ 2020 ರಲ್ಲಿ ಬರೊಬ್ಬರಿ 5,100 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿತ್ತು ಎಂದು ವರದಿ ತಿಳಿಸಿದೆ.

ಭಾರತದ ಕಾರ್ಯಾಚರಣೆಯಿಂದ ಒಳನುಸುಳುವುದಕ್ಕೆ ಸಾಧ್ಯವಾಗದೇ 300-415 ಭಯೋತ್ಪಾದಕರು ಜಮ್ಮು-ಕಾಶ್ಮೀರದ ಎಲ್‌ಒಸಿ ಬಳಿ ಇರುವ ಲಾಂಚ್ ಪ್ಯಾಡ್ ಗಳಲ್ಲೇ ಕಾಯುತ್ತಿದ್ದಾರೆ ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಶಾಂತಿ, ಸಹಜ ಸ್ಥಿತಿಯನ್ನು ಕದಡುವುದಕ್ಕಾಗಿ ಪಾಕಿಸ್ತಾನದ ಬೆಂಬಲ ಹೊಂದಿರುವ ಉಗ್ರರು ಒಳನುಸುಳುವುದಕ್ಕಾಗಿ ಲಾಂಚ್ ಪ್ಯಾಡ್ ಗಳ ಬಳಿಯೇ ಕಾಯುತ್ತಿದ್ದಾರೆ.

ಕಾಶ್ಮೀರದ ಕಣಿವೆ (ಉತ್ತರ ಪಿರ್ ಪಂಜಾಲ್)ಯ ಎಲ್‌ಒಸಿ ಯ ಆಚೆ ಬದಿಯಲ್ಲಿ 175-210 ಭಯೋತ್ಪಾದಕರು ಕಾಯುತ್ತಿದ್ದರೆ ಜಮ್ಮು ಪ್ರದೇಶದ ಪಿರ್ ಪಂಜಾಲ್ ಬಳಿ 119-216 ಮಂದಿ ಭಯೋತ್ಪಾದಕರು ಹೊಂಚು ಹಾಕಿ ಕುಳಿತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.SHARE THIS

Author:

0 التعليقات: