ಭಾರತೀಯ ವಾಯುಪಡೆಗೆ ಆನೆಬಲ : ಫ್ರಾನ್ಸ್ ನಿಂದ ಭಾರತದತ್ತ ಪ್ರಯಾಣ ಬೆಳೆಸಿದ 3 ರಫೇಲ್ ಯುದ್ಧವಿಮಾನಗಳು
ನವದೆಹಲಿ : ಫ್ರಾನ್ಸ್ ಜೊತೆಗಿನ ಯುದ್ದ ವಿಮಾನಗಳ ಒಪ್ಪಂದದ ಪ್ರಕಾರ ಈ ಹಿಂದೆ ಭಾರತಕ್ಕೆ ಎರಡು ಹಂತಗಳಲ್ಲಿ 8 ರಫೇಲ್ ಯುದ್ಧ ವಿಮಾನಗಳು ಬಂದಿಳಿದ್ದವು. ಇದೀಗ ಮತ್ತೆ 3 ವಿಮಾನಗಳು ಫ್ರಾನ್ಸ್ ನಿಂದ ಭಾರತಕ್ಕೆ ಬರಲಿದೆ.
ಹೌದು, ಈ ಹಿಂದೆ ಮೊದಲ ಹಂತದಲ್ಲಿ 5 ರಫೇಲ್ ಯುದ್ಧ ವಿಮಾನಗಳು ಬಂದಿಳಿದ್ದವು. ನಂತರದ ಹಂತದಲ್ಲಿ 3 ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬಂದಿಳಿದಿದೆ. ಇದೀಗ ಮತ್ತೆ ಮೂರು ಯುದ್ಧ ವಿಮಾನಗಳು ಭಾರತಕ್ಕೆ ಪ್ರಯಾಣ ಬೆಳೆಸಿದೆ. ಈ ವಿಮಾನಗಳು ನಾಳೆ ಭಾರತಕ್ಕೆ ಬಂದಿಳಿಯಲಿದೆ ಎಂದು ಮೂಲಗಳು ಮಾಹಿತಿ ನೀಡಿದ. ಈ ಮೂಲಕ ಭಾರತೀಯ ಸೇನೆಗೆ ಮತ್ತಷ್ಟು ಆನೆಬಲ ಬರಲಿದೆ.
0 التعليقات: