Wednesday, 13 January 2021

ಕೊಚ್ಚಿ ಮೆಟ್ರೋ ರೈಲು ಸಂಸ್ಥೆಗೆ ವಾರ್ಷಿಕ 310 ಕೋಟಿ ರು ನಷ್ಟ


 ಕೊಚ್ಚಿ ಮೆಟ್ರೋ ರೈಲು ಸಂಸ್ಥೆಗೆ ವಾರ್ಷಿಕ 310 ಕೋಟಿ ರು ನಷ್ಟ

ಕೊಚ್ಚಿ, ಜನವರಿ 13: ಕೇರಳದ ಬಹುದೊಡ್ಡ ಮೂಲ ಸೌಕರ್ಯ ಯೋಜನೆ ಎನಿಸಿದ ಮೆಟ್ರೋ ಸೇವೆ ಕಳೆದ ವರ್ಷ 281 ಕೋಟಿ ರು ನಿವ್ವಳ ನಷ್ಟ ದಾಖಲಿಸಿತ್ತು. ಈ ವರ್ಷ 381 ಕೋಟಿ ರು ನಷ್ಟ ಅನುಭವಿಸಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್, ದೆಹಲಿ ಮೆಟ್ರೋ ಸೇವೆಗಳಿಗೆ ಹೋಲಿಸಿದರೆ ಕೊಚ್ಚಿ ಮೆಟ್ರೋ ಸೇವೆ ವರ್ಷದಿಂದ ವರ್ಷಕ್ಕೆ ಭಾರಿ ನಷ್ಟ ಅನುಭವಿಸುತ್ತಿದೆ.

2017ರ ಜೂನ್ 19ರಂದು ಆಳುವಾದಿಂದ ಪಳರಿವಟ್ಟಂ, 2017ರ ಅಕ್ಟೋಬರ್ 03ರಂದು ಪಳರಿವಟ್ಟಂನಿಂದ ಮಹಾರಾಜಸ್ ತನಕ ರೈಲು ಮಾರ್ಗ ಆರಂಭವಾಗಿತ್ತು. ಜವಹಾರ ಲಾಲ್ ನೆಹರೂ ಸ್ಟೇಡಿಯಂನಿಂಡ ಕಾಕ್ಕನಾಡ್ ಇನ್ಫೋ ಪಾರ್ಕ್ ತನಕದ ಲೇನ್ ಗೆ ಕೇಂದ್ರ ಸರ್ಕಾರದ ಅನುಮತಿ ಸಿಕ್ಕಿಲ್ಲ.

ಸೆಪ್ಟೆಂಬರ್ 2019ರಂದು ಮಹಾರಾಜಸ್-ಥಿಕೂಡಂ ಲೇನ್ ಆರಂಭವಾದ ಬಳಿಕ ಸರಾಸರಿ ಪ್ರಯಾಣಿಕರ ಸಂಖ್ಯೆ ಪ್ರತಿ ದಿನಕ್ಕೆ 80, 000ಕ್ಕೇರಿತು. ಆದಾಯ ಕೂಡಾ 14.66 ಲಕ್ಷ ರುಗೇರಿದೆ. ಕೊಚ್ಚಿ ಮೆಟ್ರೋ ರೈಲ್ ನಿಯಮ ರೂಪುರೇಷೆಯಂತೆ ಪ್ರತಿ ದಿನ 2.75 ಲಕ್ಷ ಪ್ರಯಾಣಿಕರ ನಿರೀಕ್ಷಿಸಲಾಗಿತ್ತು. 18.2 ಕಿ. ಮೀ ಆಳುವಾ ದಿಂದ ಮಹಾರಾಜಸ್ ಮಾರ್ಗ ಸದ್ಯ ಚಾಲನೆಯಲ್ಲಿದೆ.


ಆಳುವಾದಿಂದ ಪೆಟ್ಟಾ ತನಕದ ಮಾರ್ಗದಿಂದ ಪ್ರತಿದಿನ ಆದಾಯ 85 ಲಕ್ಷ ರು ನಿರೀಕ್ಷೆಯಿತ್ತು. ಪ್ರತಿದಿನ 64 ಸಾವಿರ ಪ್ರಯಾಣಿಕರನ್ನು ಕಾಣುತ್ತಿದ್ದ ಮೆಟ್ರೋ ಮಾರ್ಗ ಕೊವಿಡ್ 19 ದೆಸೆಯಿಂದ 24 ಸಾವಿರಕ್ಕೆ ಇಳಿಮುಖವಾಯಿತು. ಜನವರಿ 2020ರಲ್ಲಿ 1.25 ಲಕ್ಷ ಪ್ರಯಾಣಿಕರನ್ನು ಕರೆದೊಯ್ದಿದ್ದ ಕೊಚ್ಚಿ ಮೆಟ್ರೋ ನಂತರ ಪ್ರಯಾಣಿಕರಿಲ್ಲದೆ ತತ್ತರಿಸಿತು.


ಚೆನ್ನೈ ಮೆಟ್ರೋ ಪ್ರಯಾಣ ದರದಲ್ಲಿ ಶೇ 30ರಷ್ಟು ಇಳಿ ಮುಖ ಮಾಡಿ ಪ್ರಯಾಣಿಕರನ್ನು ಆಕರ್ಷಿಸಿತು. ಹೈದರಾಬಾದ್ ಮೆಟ್ರೋ ಶೇ 50, ಜೈಪುರ ಮೆಟ್ರೋ, ಬೆಂಗಳೂರು ಮೆಟ್ರೋ ಕೂಡಾ ಕೆಲವು ಅಫರ್ ನೀಡಿವೆ. ಆದರೆ, ಕೊಚ್ಚಿ ಆಫರ್ ನೀಡದ ಕಾರಣ ಪ್ರಯಾಣಿಕರನ್ನು ಕಳೆದುಕೊಂಡಿದೆ ಎನ್ನಬಹುದು.


ಫ್ರಾನ್ಸಿನ ಫ್ರಾಕೈಸ್ ಡಿ ಡೆವಲಪ್ಮೆಂಟ್ ನಿಂದ 2014 ಸಂಸ್ಥೆಯಿಂದ 1500 ಕೋಟಿ ರು ಸಾಲ ಪಡೆದಿರುವ ಕೇರಳ ಸರ್ಕಾರ ಈಗ ಮೆಟ್ರೋ ಸಾರಿಗೆಯಿಂದ ನಿರೀಕ್ಷಿತ ಆದಾಯ ಕಾಣದೆ ಪರಿತಪಿಸಿದೆ. ಇದಲ್ಲದೆ ಎರ್ನಾಕುಲಂ ಜಿಲ್ಲೆ ಸಹಕಾರಿ ಬ್ಯಾಂಕ್, ಕೆನರಾ ಬ್ಯಾಂಕಿನಿಂದಲೂ ಕೆಎಂಆರ್ ಎಲ್ ಸಾಲ ಮಾಡಿದೆ.SHARE THIS

Author:

0 التعليقات: