ಮರ್ಕಝ್ ಸನದು ದಾನ ಮಾರ್ಚ್ 31, ಎಪ್ರಿಲ್ 1 ದಿನಗಳಲ್ಲಿ
ಕೋಝಿಕ್ಕೋಡ್: ಮರ್ಕಝುಸ್ಸಖಾಫತಿ ಸುನ್ನಿಯಾದ 2200 ಸಖಾಫಿಗಳಿಗೆ ಸನದುದಾನ ಮಾಡುವ ಬೃಹತ್ ಸಂಗಮ 2021 ಮಾರ್ಚ್ 31, ಎಪ್ರಿಲ್ 1 ದಿನಾಂಕಗಳಲ್ಲಿ ನಡೆಯಲಿದೆ. ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರ ಸ್ವಹೀಹುಲ್ ಬುಖಾರಿ ದರ್ಸಿನ ಸಮಾರೋಪ ಸಮಾರಂಭವಾದ ಖತ್ಮುಲ್ ಬುಖಾರಿ ಕೂಡ ಇದರೊಂದಿಗೆ ನಡೆಯಲಿದೆ. ಮರ್ಕಝ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈ ತೀರ್ಮಾನ ತೆಗೆಯಲಾಯಿತು.
ಮರ್ಕಝ್ ಕಾನ್ಪರೆನ್ಸ್ ಹಾಲಿನಲ್ಲಿ ನಡೆದ ಸಭೆಯನ್ನು ಸಯ್ಯಿದ್ ಅಲಿ ಬಾಫಕಿ ತಂಙಳ್ ರವರ ಅಧ್ಯಕ್ಷತೆಯಲ್ಲಿ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಉದ್ಘಾಟನೆ ಮಾಡಿದರು. ಕೋವಿಡ್ ನಂತರ ಬದಲಾದ ಜಾಗತಿಕ ಸನ್ನಿವೇಶದಲ್ಲಿ ಮಾನವ ಸಂಪನ್ಮೂಲ ಮತ್ತು ತಂತ್ರಜ್ಞಾನ ವಿದ್ಯೆಯ ಸಂಪೂರ್ಣ ಸಾಧ್ಯತೆಗಳನ್ನು ಉಪಯೋಗಿಸಿಕೊಂಡು ವಿದ್ಯಾಭ್ಯಾಸ ಮತ್ತು ಸಾಮೂಹಿಕ ಅಭಿವೃದ್ಧಿ ಕ್ಷೇತ್ರಗಳಲ್ಲಿ ಮರ್ಕಝ್ ಹೊಸ ಪ್ರಗತಿ ಸಾಧಿಸುತ್ತಿದೆ ಎಂದು ಅವರು ಹೇಳಿದರು.
ಇತ್ತೀಚೆಗೆ ನಮ್ಮನ್ನಗಲಿದ ಮರ್ಕಝ್ ಸಮ್ಮೇಳನ ಸ್ವಾಗತ ಸಂಘದ ಚೆಯರ್ಮ್ಯಾನ್ ಸಯ್ಯಿದ್ ತಲಪ್ಪಾರ ತಂಙಳ್, ಸಯ್ಯಿದ್ ಮಾಟೂಲ್ ತಂಙಳ್, ಬೇಕಲ್ ಇಬ್ರಾಹೀಂ ಮುಸ್ಲಿಯಾರ್, ಎಂ.ಎನ್ ಸಿದ್ದೀಕ್ ಹಾಜಿ ಚೆಮ್ಮಾಡ್ ಮುಂತಾದವರ ಅಗಲಿಕೆಯನ್ನು ಸಭೆಯಲ್ಲಿ ಸಂತಾಪ ವ್ಯಕ್ತಪಡಿಸಿ ಪ್ರಾರ್ಥಿಸಲಾಯಿತು. ಸಿ. ಮುಹಮ್ಮದ್ ಫೈಝಿ ಪರಿಚಯಾತ್ಮಕ ಭಾಷಣ ಮಾಡಿದರು. ಸಯ್ಯಿದ್ ಅಬ್ದುಲ್ ಫತ್ತಾಹ್ ಅವೇಲಂ, ಸಯ್ಯಿದ್ ಶರಫುದ್ದೀನ್ ಜಮಲುಲ್ಲೈಲಿ, ಕೆ.ಕೆ ಅಹ್ಮದ್ ಕುಟ್ಟಿ ಮುಸ್ಲಿಯಾರ್ ಕಟ್ಟಿಪ್ಪಾರ, ಎ.ಪಿ ಮುಹಮ್ಮದ್ ಮುಸ್ಲಿಯಾರ್, ಸಿ.ಪಿ.ಎಂ ಫೈಝಿ, ವಿಲ್ಯಾಪಳ್ಳಿ, ಸಯ್ಯಿದ್ ಸ್ವಾಲಿಹ್ ಶಿಹಾಬ್ ಜಿಫ್ರೀ, ಇಬ್ರಾಹೀಂ ಮಾಸ್ಟರ್, ಡಾ. ಹುಸೈನ್ ಸಖಾಫಿ ಚುಳ್ಳಿಕ್ಕೋಡ್, ಡಾ.ಎ.ಪಿ ಅಬ್ದುಲ್ ಹಕೀಂ ಅಝ್ಹರಿ, ಪ್ರೊಫೆಸರ್ ಎ.ಕೆ ಅಬ್ದುಲ್ ಹಮೀದ್, ವಿ.ಎಂ ಕೋಯ ಮಾಸ್ಟರ್, ಸಿ.ಪಿ ಮೂಸ ಹಾಜಿ, ಬಿ.ಪಿ ಸಿದ್ದೀಕ್ ಹಾಜಿ, ಪಿ ಮುಹಮ್ಮದ್ ಯೂಸುಫ್, ಮೊಯ್ದೀನ್ ಕುಟ್ಟಿ ಹಾಜಿ, ಇ.ಕೆ ಮುಹಮ್ಮದ್ ಕೋಯ ಸಖಾಫಿ, ಸಿ.ಪಿ ಉಬೈದುಲ್ಲಾ ಸಖಾಫಿ ಮುಂತಾದವರು ಭಾಗವಹಿಸಿದರು.
0 التعليقات: