Tuesday, 26 January 2021

ಶೀಘ್ರದಲ್ಲಿ 3 ಲಕ್ಷ ಪಡಿತರ ಚೀಟಿ ವಿತರಣೆಗೆ ರಾಜ್ಯ ಸರ್ಕಾರದ ನಿರ್ಧಾರ


ಶೀಘ್ರದಲ್ಲಿ 3 ಲಕ್ಷ ಪಡಿತರ ಚೀಟಿ ವಿತರಣೆಗೆ ರಾಜ್ಯ ಸರ್ಕಾರದ ನಿರ್ಧಾರ


ಕಲಬುರ್ಗಿ: ಏಪ್ರಿಲ್ 1ರಿಂದ ಜಾರಿಗೆ ಬರುವಂತೆ, ಜೋಳ, ತೊಗರಿ ಹಾಗೂ ರಾಗಿಯನ್ನು ಪಡಿತರ ಚೀಟಿದಾರರಿಗೆ ನೀಡಲು ನಿರ್ಧರಿಸಲಾಗಿದೆ ಅಂತ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ಹೇಳಿದ್ದಾರೆ.


ಯಾವ ಸರ್ಕಾರವೂ ರೈತರ ವಿರುದ್ಧ ಗೆದ್ದ ಇತಿಹಾಸವಿಲ್ಲ : ನವಜೋತ್‌ ಸಿಂಗ್ ಸಿಧು ಟ್ವೀಟ್


ಅವರು ಮಂಗಳವಾರ ನಗರದ ಡಿಎಆರ್ ಮೈದಾನದಲ್ಲಿ ‌ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಬಳಿಕ ಈ ಬಗ್ಗೆ ತಿಳಿಸಿದರು. ಇದೇ ವೇಳೆ ಅವರು ಮಾತನಾಡಿ, ಪಡಿತರದಾರರಿಗೆ ಜೋಳ, ತೊಗರಿ, ರಾಗಿ ನೀಡಬೇಕು ಎನ್ನುವುದು ಬಹುದಿನಗಳ ಬೇಡಿಕೆಯಾಗಿದ್ದು, ಅದು ಈಗ ಈಡೇರಿದೆ. ಹೀಗಾಗಿ . ಅಕ್ಕಿ ಪ್ರಮಾಣವನ್ನು ಕಡಿಮೆ ಮಾಡಿ ಅದರ ಬದಲಾಗಿ ಜೋಳ, ರಾಗಿ, ತೊಗರಿ, ಕಡಲೆ ನೀಡಲಾಗುವುದು ಅಂತ ಅವರು ಹೇಳಿದರು. ಇನ್ನೂ ಇದೇ ವೇಳೆ ಅವರು ಮಾತನಾಡುತ್ತ, ರಾಜ್ಯದಲ್ಲಿ 3 ಲಕ್ಷ ಪಡಿತರ ಚೀಟಿಗಳನ್ನುಹೊಸದಾಗಿ ವಿತರಣೆ ಮಾಡಲಾಗುವುದು ಅಂಥ ಹೇಳಿದರು.



SHARE THIS

Author:

0 التعليقات: