ಬೆಳ್ಳಿಪ್ಪಾಡಿ ಉಸ್ತಾದ್ ಅನುಸ್ಮರಣೆ ಮತ್ತು ದ್ಸಿಕ್ರ್ ದುಆ ಮಜ್ಲಿಸ್ 28 ರಂದು ಮುಹಿಮ್ಮಾತಿನಲ್ಲಿ
ಕಾಸರಗೋಡು: ಮುಹಿಮ್ಮಾತ್ ಕೇಂದ್ರ ಕಮಿಟಿ ಕಾರ್ಯಕಾರಿ ಸದಸ್ಯರೂ ಮುಹಿಮ್ಮಾತ್ ಪ್ರಧಾನ ಮುದರ್ರಿಸ್ ಆಗಿದ್ದ ಬೆಳ್ಳಿಪ್ಪಾಡಿ ಅಬ್ದುಲ್ಲಾ ಮುಸ್ಲಿಯಾರ್ ರವರ ಅನುಸ್ಮರಣೆ ಮತ್ತು ದ್ಸಿಕ್ರ್ ದುಆ ಮಜ್ಲಿಸ್ ಜನವರಿ 28 ರಂದು ನಡೆಸಲು ಮುಹಿಮ್ಮಾತ್ ಸೆಕ್ರಟರಿಯೇಟ್ ಸಭೆಯಲ್ಲಿ ತೀರ್ಮಾನಿಸಲಾಯಿತು.
ಮರಣದ ಏಳನೇ ದಿನವಾದ ಗುರುವಾರ ಲುಹ್ರ್ ನಮಾಝಿನ ನಂತರ ಮೌಲಿದ್, ತಹ್ಲೀಲ್ ಮಜ್ಲಿಸ್ ನಡೆಯಲಿದೆ. ಧಫನ ಕಾರ್ಯ ನಡೆದಂದಿನಿಂದ ಪ್ರಾರಂಭಿಸಿದ ಖತ್ಮುಲ್ ಕುರ್ಆನಿನ ದುಆ ಮಜ್ಲಿಸಿಗೆ ಪ್ರಮುಖ ಸಾದಾತ್ ಗಳು ನೇತೃತ್ವ ವಹಿಸುವರು. ಅನುಸ್ಮರಣಾ ಪ್ರಾರ್ಥನಾ ಸಂಗಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ, ಕೇರಳ ಮುಸ್ಲಿಂ ಜಮಾಅತ್, ಎಸ್ ವೈ ಎಸ್ ರಾಜ್ಯ-ಜಿಲ್ಲಾ ನಾಯಕರು ಭಾಗವಹಿಸುವರು . ಸಭೆಯಲ್ಲಿ ಸಯ್ಯಿದ್ ಇಬ್ರಾಹೀಂ ಹಾದಿ ತಂಙಳ್ ಚೂರಿ ಅಧ್ಯಕ್ಷತೆ ವಹಿಸಿದರು. ಸಯ್ಯಿದ್ ಹಬೀಬುಲ್ ಅಹ್ದಲ್ ತಂಙಳ್, ಬಿ.ಎಸ್ ಅಬ್ದುಲ್ಲಾ ಕುಞ್ಞಿ ಫೈಝಿ, ಹಾಜಿ ಅಮೀರಲಿ ಚೂರಿ, ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್, ಸುಲೈಮಾನ್ ಕರಿವೆಲ್ಲೂರ್ ಮುಂತಾದವರು ಉಪಸ್ಥಿತರಿದ್ದರು. ಉಮರ್ ಸಖಾಫಿ ಕರ್ನೂರ್ ಸ್ವಾಗತ ಮತ್ತು ಸಯ್ಯಿದ್ ಹಾಮಿದ್ ಅನ್ವರ್ ಅಹ್ದಲ್ ಸಖಾಫಿ ಕೃತಜ್ಞತೆ ಸಲ್ಲಿಸಿದರು.
0 التعليقات: