Thursday, 28 January 2021

ಫೆ.28ರವರೆಗೆ ಭಾರತಕ್ಕೆ 'ಅಂತರಾಷ್ಟ್ರೀಯ ವಿಮಾನ ಸಂಚಾರ'ಕ್ಕೆ ನಿಷೇಧಿಸಿ rf¹J ಆದೇಶ


ಫೆ.28ರವರೆಗೆ ಭಾರತಕ್ಕೆ 'ಅಂತರಾಷ್ಟ್ರೀಯ ವಿಮಾನ ಸಂಚಾರ'ಕ್ಕೆ ನಿಷೇಧಿಸಿ rf¹J ಆದೇಶ


ನವದೆಹಲಿ : ಕೊರೊನಾವೈರಸ್ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಭಾರತ ಸರ್ಕಾರ 2021ರ ಫೆಬ್ರವರಿ 28ರ ರಾತ್ರಿ 11.59ರ ವರೆಗೆ ನಿಗದಿತ ವಾಣಿಜ್ಯ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ವಿಸ್ತರಿಸಿದೆ. ಆದರೆ, ಈ ನಿರ್ಬಂಧವು ಅಂತಾರಾಷ್ಟ್ರೀಯ ಸರಕು ಸಾಗಾಟ ವ್ಯವಹಾರಗಳಿಗೆ ಅನ್ವಯಿಸುವುದಿಲ್ಲ ಎಂಬುದಾಗಿ ತಿಳಿಸಿದೆ.

ಈ ಸಂಬಂಧ ಪರಿಷ್ಕೃತ ಆದೇಶ ಹೊರಡಿಸಿರುವ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಅಂತಾರಾಷ್ಟ್ರೀಯ ನಿಗದಿತ ಮಾರ್ಗಗಳಲ್ಲಿ ನಿಗದಿತ ಮಾರ್ಗಗಳಲ್ಲಿ 'ಸಕ್ಷಮ ಪ್ರಾಧಿಕಾರ' (ಕೇಸ್-ಟು ಕೇಸ್ ಆಧಾರದ ಮೇಲೆ) ವಿಮಾನ ಹಾರಾಟಕ್ಕೆ ಅವಕಾಶ ನೀಡಬಹುದು ಎಂದು ಹೇಳಿದೆ.

ಇನ್ನೂ ಮುಂದುವರೆದು, ಕೊರೋನಾ ಸೋಂಕಿನ ಭೀತಿಯ ಹಿನ್ನಲೆಯಲ್ಲಿ, ಭಾರತಕ್ಕೆ ಅಂತರಾಷ್ಟ್ರೀಯ ವಿಮಾನಗಳ ಸಂಚಾರವನ್ನು ಫೆಬ್ರವರಿ 28, 2021ರವರೆಗೆ ನಿಷೇಧಿಸಲಾಗಿದೆ ಎಂಬುದಾಗಿ ಆದೇಶಿಸಿದೆ.



SHARE THIS

Author:

0 التعليقات: