Friday, 8 January 2021

ಇಂಗ್ಲೆಂಡ್​ನಿಂದ ದೆಹಲಿಗೆ ಬಂದಿಳಿದ 256 ಪ್ರಯಾಣಿಕರು; ಭಾರತದಲ್ಲಿ ಹೆಚ್ಚಿದ ರೂಪಾಂತರಿ ಕೊರೋನಾ ಭೀತಿ


 ಇಂಗ್ಲೆಂಡ್​ನಿಂದ ದೆಹಲಿಗೆ ಬಂದಿಳಿದ 256 ಪ್ರಯಾಣಿಕರು; ಭಾರತದಲ್ಲಿ ಹೆಚ್ಚಿದ ರೂಪಾಂತರಿ ಕೊರೋನಾ ಭೀತಿ

ನವದೆಹಲಿ (ಜ. 8): ಇಂಗ್ಲೆಂಡ್​ನಿಂದ ವಿಶ್ವಾದ್ಯಂತ ಮತ್ತೆ ಹರಡುತ್ತಿರುವ ರೂಪಾಂತರಿ ಕೊರೋನಾ ವೈರಸ್​​ ಆತಂಕ ಸೃಷ್ಟಿಸಿದೆ. ವೇಗವಾಗಿ ಹರಡುವ ಈ ಅಪಾಯಕಾರಿ ವೈರಸ್​​ ನಿಯಂತ್ರಿಸಲು ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಇಂಗ್ಲೆಂಡ್​ ವಿಮಾನಗಳ ಮೇಲೆ ನಿರ್ಬಂಧ ಹೇರಲಾಗಿತ್ತು. ಇಂಗ್ಲೆಂಡ್​ನಲ್ಲಿ ಮ್ಯೂಟಂಟ್ ಕೊರೋನಾ ವೈರಸ್​ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ವಿಮಾನ ಸಂಚಾರದ ಮೇಲೆ ನಿನ್ನೆಯವರೆಗೆ ನಿರ್ಬಂಧ ವಿಧಿಸಲಾಗಿತ್ತು. ಇಂದಿನಿಂದ ನಿರ್ಬಂಧವನ್ನು ತೆರವುಗೊಳಿಸಲಾಗಿದ್ದು, ಇಂದು ಮುಂಜಾನೆ ಬ್ರಿಟನ್​ನಿಂದ ದೆಹಲಿಗೆ ವಿಮಾನ ಬಂದಿಳಿದಿದೆ. ಭಾರತದಲ್ಲಿ ದಿನದಿಂದ ದಿನಕ್ಕೆ ರೂಪಾಂತರಿ ಕೊರೋನಾ ಕೇಸ್​ಗಳು ಹೆಚ್ಚುತ್ತಿರುವ ಬೆನ್ನಲ್ಲೇ ಇಂದು ಇಂಗ್ಲೆಂಡ್​ನಿಂದ 256 ಪ್ರಯಾಣಿಕರನ್ನು ಹೊತ್ತು ತಂದ ಏರ್ ಇಂಡಿಯಾ ವಿಮಾನ ದೆಹಲಿಗೆ ತಲುಪಿರುವುದು ಇನ್ನಷ್ಟು ಆತಂಕ ಹೆಚ್ಚಿಸಿದೆ. ಲಂಡನ್​ನ ಹೀಥ್ರೋ ವಿಮಾನ ನಿಲ್ದಾಣದಿಂದ ಇಂದಿರಾಗಾಂಧಿ ಇಂಟರ್​ ನ್ಯಾಷನಲ್ ವಿಮಾನ ನಿಲ್ದಾಣಕ್ಕೆ ಇಂದು ಬೆಳಗ್ಗೆ ಬಂದಿಳಿದ ಏರ್ ಇಂಡಿಯಾ ವಿಮಾನದಲ್ಲಿ 256 ಪ್ರಯಾಣಿಕರಿದ್ದರು. ಇಂಗ್ಲೆಂಡ್​ನಲ್ಲಿ ರೂಪಾಂತರಿ ಕೊರೋನಾ ಕೇಸ್​ಗಳು ವ್ಯಾಪಕವಾಗಿ ಹರಡತೊಡಗಿದ ನಂತರ ಮುನ್ನೆಚ್ಚರಿಕಾ ಕ್ರಮವಾಗಿ ಡಿ. 23ರಿಂದ ಇಂಗ್ಲೆಂಡ್-ಭಾರತ ನಡುವಿನ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.SHARE THIS

Author:

0 التعليقات: