Sunday, 3 January 2021

250ಕ್ಕೂ ಅಧಿಕ ಕಾಗೆಗಳ ವಿಚಿತ್ರ ಸಾವು- ಮತ್ತೊಂದು ಜ್ವರದ ಭೀತಿಯಲ್ಲಿ ದೇಶ- ಹೈ ಅಲರ್ಟ್‌ ಘೋಷಣೆ


250ಕ್ಕೂ ಅಧಿಕ ಕಾಗೆಗಳ ವಿಚಿತ್ರ ಸಾವು- ಮತ್ತೊಂದು ಜ್ವರದ ಭೀತಿಯಲ್ಲಿ ದೇಶ- ಹೈ ಅಲರ್ಟ್‌ ಘೋಷಣೆ

ಜಲ್‌ವಾರ್‌ (ರಾಜಸ್ಥಾನ): 2020ನೇ ಸಾಲು ಕರೊನಾ ಭೀತಿಯಲ್ಲಿಯೇ ಕಳೆದುಹೋಯಿತು. ವರ್ಷಾಂತ್ಯದಲ್ಲಿ ಹೊಸ ಕರೊನಾ ಅಲೆ ಬಂದು ವಿಶ್ವವನ್ನು ಮತ್ತಷ್ಟು ಕಂಗೆಡಿಸಿರುವ ನಡುವೆಯೇ ಇದೀಗ ನೂರಾರು ಕಾಗೆಗಳು ನಿಗೂಢವಾಗಿ ಮೃತಪಟ್ಟಿದ್ದು ದೇಶದ ಜನರಲ್ಲಿ ಆತಂಕ ಮೂಡಿಸಿದೆ.

ರಾಜಸ್ಥಾನದ ಸುತ್ತಮುತ್ತಲೂ ನೂರಾರು ಕಾಗೆಗಳು ಮೃತಪಟ್ಟಿವೆ. ಪ್ರಾಥಮಿಕ ವರದಿಯಲ್ಲಿ ಇದು ಹಕ್ಕಿ ಜ್ವರ ಎಂದು ಪತ್ತೆಯಾಗಿದ್ದು, ಸುತ್ತಮುತ್ತಲಿನ ನಗರಗಳು ಸೇರಿದಂತೆ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನ ಸೇರಿದಂತೆ ಸುತ್ತಮುತ್ತಲಿನ ರಾಜ್ಯಗಳಲ್ಲಿ ಹೈಅಲರ್ಟ್‌ ಘೋಷಣೆ ಮಾಡಿದೆ.

ರಾಜಸ್ಥಾನದ ಕೋಟಾದಲ್ಲಿ 47, ಜಾಲವರ್‌ನಲ್ಲಿ 100 ಮತ್ತು ಬಾರನ್‌ನಲ್ಲಿ 72 ಕಾಗೆಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದ್ದು, ಇನ್ನು ಯಾವ್ಯಾವ ಸ್ಥಳಗಳಲ್ಲಿ ಕಾಗೆಗಳ ಸತ್ತಿವೆ ಎಂಬುದನ್ನು ಆರೋಗ್ಯ ಇಲಾಖೆ ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತವಾಗಿದೆ.

ಶನಿವಾರ ಜಾಲವರ್‌ನಲ್ಲಿ 25, ಬಾರ್ರಾದಲ್ಲಿ 19 ಮತ್ತು ಕೋಟಾದಲ್ಲಿ 22 ಸಾವುಗಳು ವರದಿಯಾಗಿವೆ. ಜೋಧಪುರದಲ್ಲಿ 152 ಕಾಗೆಗಳು ಶವವಾಗಿ ಪತ್ತೆಯಾಗಿವೆ. ಇತರ ಸ್ಥಳಗಳಾದ ಕೋಟಾ, ಪಾಲಿಯಿಂದ ಕಾಗೆಗಳ ಸಾವು ವರದಿಯಾಗಿದೆ. ಕಿಂಗ್‌ಫಿಶರ್‌ಗಳು ಮತ್ತು ಮ್ಯಾಗ್‌ಪೈಸ್‌ಗಳಂತಹ ಪಕ್ಷಿಗಳು ಸಹ ಸತ್ತಿವೆ ಎಂದು ಎಂದು ರಾಜಸ್ಥಾನದ ಪ್ರಧಾನ ಕಾರ್ಯದರ್ಶಿ ಕುಂಜಿ ಲಾಲ್ ಮೀನಾ ಭಾನುವಾರ ತಿಳಿಸಿದ್ದಾರೆ.

ಹಕ್ಕಿ ಜ್ವರದಿಂದ ಸಾವು ಸಂಭವಿಸುತ್ತಿರುವ ಪ್ರದೇಶಗಳಿಂದ ಮಾದರಿಗಳನ್ನು ಸಂಗ್ರಹಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಈಗಾಗಲೇ ಎಚ್ಚರಿಕೆ ನೀಡಿದೆ. ಶಾಲಾ- ಕಾಲೇಜು ಇರುವ ಪ್ರದೇಶಗಳ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಶೀತ, ಕೆಮ್ಮು ಮತ್ತು ಜ್ವರ ಇರುವವರನ್ನು ಪತ್ತೆಹಚ್ಚಲು ಸಮೀಕ್ಷೆ ನಡೆಸಲಾಗುತ್ತಿದೆ.SHARE THIS

Author:

0 التعليقات: