'ಸೆರಮ್ ಅಗ್ನಿ ದುರಂತ'ದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 25 ಲಕ್ಷ ರೂ.ಪರಿಹಾರ ಘೋಷಣೆ
ಪುಣೆ : ಕೋವಿಶೀಲ್ಡ್ ಕೊರೋನಾ ಲಸಿಕೆ ತಯಾರಿಕೆಯಲ್ಲಿ ನಿರತವಾಗಿರುವ ಸೀರಂ ಇನ್ಸಿಟ್ಯೂಟ್ ಆಫ್ ಇಂಡಿಯಾದಲ್ಲಿ ಅಗ್ನಿ ಅವಘಡ ಉಂಟಾಗಿದ್ದು, ಈ ದುರಂತದಲ್ಲಿ 5 ಮಂದಿ ಅಸುನಿಗಿದ್ದಾರೆ.
ಪುಣೆಯ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಘೋಷಿಸಲಾಗಿದೆ.
ಇವತ್ತು ನಡೆದ ಅಗ್ನಿ ದುರಂತದಲ್ಲಿ ಐವರು ಸಿಬ್ಬಂದಿ ಸಾವನ್ನಪ್ಪಿದ್ದು, ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.ಸಂಸ್ಥೆಯ ಎಂಡಿ ಸೈರಸ್ ಪೂನಾವಾಲಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೋವಿಶೀಲ್ಡ್ ಲಸಿಕೆ ತಯಾರಿಸುತ್ತಿರೋ ಸಂಸ್ಥೆಯ 2ನೇ ಮಹಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಇದ್ರಲ್ಲಿ ಕೆಲಸ ಮಾಡ್ತಿದ್ದ ಐವರು ಕಾರ್ಮಿಕರು ಮೃತಪಟ್ಟಿದ್ದಾರೆ. ಇದ್ರಲ್ಲಿ 5 ಶವಗಳು ಪತ್ತೆಯಾಗಿದ್ದು, ನಾಲ್ಕು ಜನ ಪುರುಷರು ಒಬ್ಬ ಮಹಿಳೆ ಎನ್ನಲಾಗಿದೆ.
Dailyhunt
0 التعليقات: