ಆಕ್ಸ್ಫರ್ಡ್ ಲಸಿಕೆ ಸರ್ಕಾರಕ್ಕೆ 200 ರೂ, ಸಾರ್ವಜನಿಕರಿಗೆ 1 ಸಾವಿರ ರೂ. ಬೆಲೆಯಲ್ಲಿ ವಿತರಣೆ
ನವ ದೆಹಲಿ, ಜನವರಿ 03: ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ದೇಶದಲ್ಲಿ ಎರಡು ಕೊರೊನಾ ಲಸಿಕೆಗಳನ್ನು ತುರ್ತು ಬಳಕೆಗೆ ಇಂದು ಅನುಮತಿಸಿದೆ. ಕೋವಿಶೀಲ್ಡ್ ತಯಾರಿಸುವ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನವಾಲ್ಲಾ ಅವರು ಲಸಿಕೆಯ ಬೆಲೆಯ ಬಗ್ಗೆ ಇಂದು ಘೋಷಣೆ ಮಾಡಿದ್ದಾರೆ. ಕೊರೊನಾ ಲಸಿಕೆಯ ಮಾರುಕಟ್ಟೆ ಬೆಲೆಗಳನ್ನು ಅವರು ಬಹಿರಂಗಪಡಿಸಿದ್ದಾರೆ.
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನವಾಲಾ ಮಾತನಾಡಿ, ಆಕ್ಸ್ಫರ್ಡ್ ಅಸ್ಟ್ರಾಜೆನೆಕಾದ ಲಸಿಕೆಯನ್ನು ಸರ್ಕಾರಕ್ಕೆ 200 ರೂಪಾಯಿಗೆ ನೀಡಲಾಗುವುದು. ಅದೇ ಸಮಯದಲ್ಲಿ ಸಾರ್ವಜನಿಕರಿಗೆ ಈ ಲಸಿಕೆ 1 ಸಾವಿರ ರೂಪಾಯಿಗೆ ಸಿಗುತ್ತದೆ ಎಂದಿದ್ದಾರೆ.
ಆಕ್ಸ್ಫರ್ಟ್ ಕೋವಿಶೀಲ್ಡ್ ಅನ್ನು ಪುಣೆಯ ಸೀರಮ್ ಸಂಸ್ಥೆಯಲ್ಲಿ ತಯಾರಿಸಲಾಗುತ್ತಿದೆ. ಕಂಪನಿಯು ಪ್ರಾರಂಭದಲ್ಲಿ 40-50 ಮಿಲಿಯನ್ ಡೋಸ್ ಲಸಿಕೆ ಸಿದ್ಧ ಮಾಡಿದೆ ಎಂದು ಆದರ್ ಪೂನವಾಲ್ಲಾ ಹೇಳಿದರು.
0 التعليقات: