ಅಮೆರಿಕದಲ್ಲಿ ದೋಣಿ ಕಣ್ಮರೆ: 20 ಸಾವು
ವಾಷಿಂಗ್ಟನ್: ಅಮೆರಿಕದಲ್ಲಿ ದೋಣಿಯೊಂದು ಕಣ್ಮರೆಯಾಗಿ 20 ಜನರು ಮೃತಪಟ್ಟಿದ್ದಾರೆ ಎಂದು ಅಮೆರಿಕ ಶನಿವಾರ ಪ್ರಕಟಿಸಿದೆ.
ಕಳೆದ ಭಾನುವಾರ ಪ್ಲೋರಿಡಾ ಕರಾವಳಿ ತೀರದಿಂದ ಬಹಮಾಸ್ ಕಡೆಗೆ ದೋಣಿ ಪ್ರಯಾಣ ಬೆಳೆಸಿತ್ತು. ದೋಣಿಯಲ್ಲಿ 20 ಜನರು ಇದ್ದರು. ಆದರೆ ದೋಣಿ ಹೊರಟ ಸ್ಥಳದಿಂದ 130 ಕೀ. ಮೀಟರ್ದಲ್ಲಿ ಕಣ್ಣರೆಯಾಗಿತ್ತು ಎಂದು ಅಮೆರಿಕದ ನೌಕ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ದೋಣಿ ಪತ್ತೆಗೆ ನೌಕಪಡೆ 44,000 ಚ. ಕಿ.ಮೀಟರ್ ವ್ಯಾಪ್ತಿಯಲ್ಲಿ ವೈಮಾನಿಕ ಕಾರ್ಯಾಚರಣೆ ನಡೆಸಿತ್ತು. ಆದರೆ ದೋಣಿ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ದೋಣಿ ಪತ್ತೆ ಕಾರ್ಯಾ ನಡೆಸುವುದನ್ನು ಸ್ಥಗಿತಗೊಳಿಸಲಾಗಿದೆ.
ದೋಣಿ ಕಣ್ಮರೆಯಾಗಿದ್ದು ಅದರಲ್ಲಿ ಇದ್ದ 20 ಜನರು ಮೃತಪಟ್ಟಿದ್ದಾರೆ ಎಂದು ನೌಕಾಪಡೆ ಅಧಿಕಾರಿಗಳು ಘೋಷಣೆ ಮಾಡಿದ್ದಾರೆ.
0 التعليقات: