Sunday, 17 January 2021

2 ದಿನಗಳ 'ಕರ್ನಾಟಕ ಪ್ರವಾಸ' ಮುಗಿಸಿ 'ಅಮಿತ್ ಶಾ' ದೆಹಲಿಗೆ ವಾಪಸ್


2 ದಿನಗಳ 'ಕರ್ನಾಟಕ ಪ್ರವಾಸ' ಮುಗಿಸಿ 'ಅಮಿತ್ ಶಾ' ದೆಹಲಿಗೆ ವಾಪಸ್


ಬೆಂಗಳೂರು : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಎರಡು ದಿನಗಳ ಕರ್ನಾಟಕ ಪ್ರವಾಸ ಮುಗಿದಿದ್ದು, ಇದೀಗ ವಿಶೇಷ ವಿಮಾನದ ಮೂಲಕ ದೆಹಲಿಗೆ ವಾಪಸ್ ಆಗಿದ್ದಾರೆ.


ಎರಡು ದಿನಗಳ ರಾಜ್ಯ ಪ್ರವಾಸ ಮುಗಿಸಿರುವ ಅಮಿತ್ ಶಾ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ವಿಶೇಷ ವಿಮಾನದ ಮೂಲಕ ನವದೆಹಲಿಗೆ ವಾಪಸ್ ಆಗಿದ್ದಾರೆ.


ಇನ್ನೂ, ಪ್ರವಾಸ ಮುಗಿಸಿ ಹೊರಟ ಕೇಂದ್ರ ನಾಯಕನಿಗೆ ರಾಜ್ಯದ ಸಿಎಂ ಯಡಿಯೂರಪ್ಪ ಸೇರಿದಂತೆ ಎಲ್ಲಾ ನಾಯಕರಿಂದ ಬೀಳ್ಕೊಡುಗೆ ನೀಡಿದರು. ಕಳೆದ ಎರಡು ದಿನದಿಂದ ಶಿವಮೊಗ್ಗ, ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧ ಕಡೆ ನಡೆದ ಕಾರ್ಯಕ್ರಮ, ಸಮಾವೇಶದಲ್ಲಿ ಅಮಿತ್ ಶಾ ಭಾಗಿಯಾಗಿದ್ದರು.


SHARE THIS

Author:

0 التعليقات: