Friday, 15 January 2021

ರಹಸ್ಯ ಸಿಡಿ ಕುರಿತು ತನಿಖೆ ನಡೆಸಿ: ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ


ರಹಸ್ಯ ಸಿಡಿ ಕುರಿತು ತನಿಖೆ ನಡೆಸಿ: ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

ದಾವಣಗೆರೆ: ರಹಸ್ಯ ಸಿಡಿ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಸಾಕಷ್ಟು ಆರೋಪಗಳು ಕೇಳಿ ಬರುತ್ತಿದ್ದು, ಕೂಡಲೇ ಯಡಿಯೂರಪ್ಪ ಅವರು ತನಿಖೆಗೆ ಆದೇಶಿಸಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ. 

ನಗರದ ಬಾಪೂಜಿ ಎಂಬಿಎಂ ಕಾಲೇಜಿನ ಹೆಲಿಪ್ಯಾಡ್'ನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಸರ್ಕಾರದ ಪಾಪದ ಸರ್ಕಾರವಾಗಿದ್ದು, ನೈತಿಕತೆಯಿಂದ ಬಾರದೇ ಅಕ್ರಮವಾಗಿ ಈ ಸರ್ಕಾರ ರಚನೆಯಾಗಿದೆ ಎಂದು ಹರಿಹಾಯ್ದಿದ್ದಾರೆ. 

ಬಿಜೆಪಿಯವರೇ ಬ್ಲಾಕ್ ಮೇಲ್ ಗಿರಿಕಾರಿಗಳು, ಅದೇನೋ ಸಿಡಿಯಲ್ಲಿ ಕೆಟ್ಟದಾಗಿದೆ ಎಂದೆಲ್ಲಾ ಹೇಳುತ್ತಾರೆ. ಸಿಡಿ ಬಗ್ಗೆ ತನಿಖೆಯಿಂದ ಸತ್ಯಾಸತ್ಯತೆಯೂ ಹೊರಬರಲಿ. ಸಿಡಿ ಬಗ್ಗೆ ಬಿಜೆಪಿಯಲ್ಲಿ ಈಗ ಕೆಲವರು ಆರೋಪ ಮಾಡುತ್ತಿದ್ದಾರೆ. ಇವರೆಲ್ಲಾ ಅಧಿಕಾರಕ್ಕೆ ಬಂದಿದ್ದು ಹೇಗೆ? ಶಾಸಕರನ್ನು ಖರೀದಿ ಮಾಡಿ ಅಧಿಕಾರಕ್ಕೆ ಬಂದವರು ಎಂದು ಕಿಡಿಕಾರಿದ್ದಾರೆ.


SHARE THIS

Author:

0 التعليقات: