Friday, 15 January 2021

ವಿಶ್ವದಾದ್ಯಂತ 2 ಕೋಟಿ ದಾಟಿದ ಕೋವಿಡ್-19 ಮೃತರ ಸಂಖ್ಯೆ


ವಿಶ್ವದಾದ್ಯಂತ 2 ಕೋಟಿ ದಾಟಿದ ಕೋವಿಡ್-19 ಮೃತರ ಸಂಖ್ಯೆ

ವಾಷಿಂಗ್ಟನ್: ಮಹಾಮಾರಿ ಕೋವಿಡ್-19 ತೊಡೆದು ಹಾಕುವ ನಿಟ್ಟಿನಲ್ಲಿ ವಿಶ್ವದಾದ್ಯಂತ ವೇಗವಾಗಿ ಲಸಿಕೆ ಅಭಿವೃದ್ಧಿಪಡಿಸಿ ಜನರಿಗೆ ವಿತರಣೆ ಆರಂಭಿಸಿರುವ ಈ ಸಂದರ್ಭದಲ್ಲಿ ಕೋವಿಡ್ ಸೋಂಕಿನಿಂದ ಮೃತರ ಸಂಖ್ಯೆ 2 ಕೋಟಿ ದಾಟಿದೆ.

ಚೀನಾದ ನಗರ ವುಹಾನ್‌ನಲ್ಲಿ ಕೋವಿಡ್ ಸೋಂಕು ಪತ್ತೆಯಾದ ಒಂದು ವರ್ಷದಲ್ಲಿ ಇಡೀ ಜಗತ್ತನ್ನು ಆವರಿಸಿದ್ದು 2 ಕೋಟಿ ಜನರನ್ನು ಬಲಿ ಪಡೆದಿದೆ.

ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯವು ಮೃತರ ಕುರಿತಾದ ಅಂಕಿ ಅಂಶಗಳನ್ನು ಸಂಗ್ರಹಿಸಿದ್ದು, ಇದುವರೆಗೆ ಸತ್ತವರ ಸಂಖ್ಯೆ ಬ್ರುಸೆಲ್ಸ್, ಮೆಕ್ಕಾ, ಮಿನ್ಸ್ಕ್ ಅಥವಾ ವಿಯೆನ್ನಾದ ಜನಸಂಖ್ಯೆಗೆ ಸಮನಾಗಿದೆ ಎಂದು ಹೇಳಿದೆ.

ಈ ಮಾಹತಿ ಪ್ರಪಂಚದಾದ್ಯಂತದ ಸರ್ಕಾರಿ ಸಂಸ್ಥೆಗಳು ಒದಗಿಸಲಾದ ಅಂಕಿಅಂಶಗಳನ್ನು ಆಧರಿಸಿದ್ದು, ನೈಜ ಸಂಖ್ಯೆಯು ಗಮನಾರ್ಹವಾಗಿ ಹೆಚ್ಚಿದೆ ಎಂದು ನಂಬಲಾಗಿದೆ, ಸೋಂಕಿನ ಆರಂಭಿಕ ದಿನಗಳಲ್ಲಿ ಅಸಮರ್ಪಕ ಪರೀಕ್ಷೆ ಮತ್ತು ಸೂಕ್ತ ಚಿಕಿತ್ಸೆ ಕೊರತೆ ಇತರ ಕಾರಣಗಳಿಂದ ಹಲವು ಸಾವುನೋವುಗಳು ಸಂಭವಿಸಿವೆ.

ಮೊದಲ 8 ತಿಂಗಳಲ್ಲಿ 1 ಕೋಟಿ ಕೋವಿಡ್ ಸೋಂಕಿತರು ಸಾವನ್ನಪ್ಪಿದರೆ, ಬಳಿಕ ನಾಲ್ಕೇ ತಿಂಗಳಲ್ಲಿ 1 ಕೋಟಿ ಸೋಂಕಿತರು ಅಸುನೀಗಿದ್ದಾರೆ.

"ಈ ಭಯಾನಕ ಸಂಖ್ಯೆಯ ಹಿಂದೆ ಮರೆಯಲಾಗದ ಹೆಸರುಗಳು ಮತ್ತು ಮುಖಗಳಿವೆ. ಊಟದ ಮೇಜಿನ ಬಳಿ ಸದಾ ಖಾಲಿ ಇರುವ ಆಸನ, ಪ್ರೀತಿಪಾತ್ರರ ಮೌನದೊಂದಿಗೆ ಪ್ರತಿಧ್ವನಿಸುವ ಕೋಣೆ, ಅವರ ನಗು ಸ್ಮರಣೆಯಾಗಿ ಉಳಿದಿದೆ." ಎಂದು ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಹೇಳಿದ್ದಾರೆ.

"ಜಾಗತಿಕ ಸಂಘಟಿತ ಪ್ರಯತ್ನದ ಕೊರತೆಯಿಂದಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ." ಎಂದು ಅವರು ಹೇಳಿದ್ದಾರೆ. "ವಿಜ್ಞಾನ ಯಶಸ್ವಿಯಾಗಿದೆ, ಆದರೆ ಒಗ್ಗಟ್ಟು ವಿಫಲವಾಗಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.



SHARE THIS

Author:

0 التعليقات: