Sunday, 17 January 2021

ಕೋವಿಡ್-19: ಕಳೆದ 24 ಗಂಟೆಯಲ್ಲಿ 13,788 ಸೋಂಕಿತರು, 145 ಸಾವು, 8 ತಿಂಗಳಲ್ಲಿ ಅತಿ ಕಡಿಮೆ


 ಕೋವಿಡ್-19: ಕಳೆದ 24 ಗಂಟೆಯಲ್ಲಿ 13,788 ಸೋಂಕಿತರು, 145 ಸಾವು, 8 ತಿಂಗಳಲ್ಲಿ ಅತಿ ಕಡಿಮೆ

ನವದೆಹಲಿ: ಪ್ರತಿದಿನ ಕೊರೋನಾ ಸೋಂಕಿಗೆ ಒಳಗಾಗುವವರ ಸಂಖ್ಯೆ ಈ ತಿಂಗಳು ಎರಡನೇ ಬಾರಿ 14 ಸಾವಿರಕ್ಕಿಂತ ಕಡಿಮೆಯಾಗಿದೆ. ಈ ಮೂಲಕ ಭಾರತದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಸೋಮವಾರಕ್ಕೆ 1 ಕೋಟಿಯ 5 ಲಕ್ಷದ 71 ಸಾವಿರದ 773 ಆಗಿದ್ದು 145 ಮಂದಿ ಬಲಿಯಾಗಿದ್ದಾರೆ. ಇದು ಕಳೆದ 8 ತಿಂಗಳಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶ ತಿಳಿಸುತ್ತದೆ.

ಒಟ್ಟು 13 ಸಾವಿರದ 788 ಸೋಂಕಿತರು ವರದಿಯಾಗಿದ್ದಾರೆ. ದೇಶದಲ್ಲಿ ಕೋವಿಡ್-19ನಿಂದ ಮೃತಪಟ್ಟವರ ಸಂಖ್ಯೆ 1 ಲಕ್ಷದ 52 ಸಾವಿರದ 419 ಇದ್ದು ಹೊಸದಾಗಿ 145 ಮಂದಿ ಬಲಿಯಾಗಿದ್ದಾರೆ, 14 ಸಾವಿರದ 457 ಮಂದಿ ಗುಣಮುಖ ಹೊಂದಿ ಬಿಡುಗಡೆಯಾಗಿದ್ದಾರೆ ಎಂದು ಇಂದು 8 ಗಂಟೆಗೆ ಸಿಕ್ಕಿದ ವರದಿ ಹೇಳುತ್ತದೆ. ಇದುವರೆಗೆ ಕೋವಿಡ್-19ನಿಂದ ಗುಣಮುಖರಾದವರ ಸಂಖ್ಯೆ 1.02 ಕೋಟಿಯಾಗಿದೆ.

ಕಳೆದ ಜನವರಿ 12ಕ್ಕೆ ದಿನಂಪ್ರತಿ ಕೋವಿಡ್-19ನಿಂದ ಸೋಂಕಿಗೆ ಒಳಗಾದವರ ಸಂಖ್ಯೆ 12 ಸಾವಿರದ 548 ಆಗಿತ್ತು. ಕೋವಿಡ್-19ನಿಂದ ಚೇತರಿಸಿಕೊಂಡವರ ಸಂಖ್ಯೆ 1 ಕೋಟಿಯ 2 ಲಕ್ಷದ 11 ಸಾವಿರದ 342 ಆಗಿದ್ದು, ರಾಷ್ಟ್ರಮಟ್ಟದಲ್ಲಿ ಗುಣಮುಖರಾದವರ ದರ ಶೇಕಡಾ 96.59ರಷ್ಟಾಗಿದೆ, ಕೋವಿಡ್-19ನಿಂದ ಮೃತಪಟ್ಟವರ ಪ್ರಮಾಣ ಶೇಕಡಾ 1.44ರಷ್ಟಿದೆ.

ಸಕ್ರಿಯ ಕೋವಿಡ್-19 ಸೋಂಕಿತರ ಸಂಖ್ಯೆ ಭಾರತದಲ್ಲಿ 3 ಲಕ್ಷಕ್ಕಿಂತ ಕಡಿಮೆಯಿದೆ. ಸದ್ಯ ಸೋಂಕಿತರ ಸಂಖ್ಯೆ 2 ಲಕ್ಷದ 08 ಸಾವಿರದ 012 ಇದ್ದು, ಒಟ್ಟು ಸೋಂಕಿತರ ಸಂಖ್ಯೆ ಶೇಕಡಾ 1.97ರಷ್ಟಿದೆ.

ನಿನ್ನೆಯ ಹೊತ್ತಿಗೆ ದೇಶದಲ್ಲಿ ಇದುವರೆಗೆ 18 ಕೋಟಿಯ 70 ಲಕ್ಷದ 93 ಸಾವಿರ 036 ಸ್ಯಾಂಪಲ್ ಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು ನಿನ್ನೆ ಒಂದೇ ದಿನ 5 ಲಕ್ಷದ 48 ಸಾವಿರದ 168 ಮಂದಿಗೆ ಪರೀಕ್ಷೆ ನಡೆಸಲಾಗಿದೆ. ನಿನ್ನೆ ಮೃತಪಟ್ಟ 145 ಮಂದಿಯಲ್ಲಿ 50 ಮಂದಿ ಮಹಾರಾಷ್ಟ್ರದಲ್ಲಿ, 21 ಕೇರಳದಲ್ಲಿ, 12 ಪಶ್ಚಿಮ ಬಂಗಾಳ ಮತ್ತು 8 ದೆಹಲಿಯಲ್ಲಾಗಿವೆ.

ದೇಶದಲ್ಲಿ ಇದುವರೆಗೆ ಕೋವಿಡ್-19ಗೆ 1 ಲಕ್ಷದ 52 ಸಾವಿರದ 419 ಮಂದಿ ಬಲಿಯಾಗಿದ್ದು, ಮಹಾರಾಷ್ಟ್ರದಲ್ಲಿ 50 ಸಾವಿರದ 438, ತಮಿಳು ನಾಡಿನಲ್ಲಿ 12 ಸಾವಿರದ 264, ಕರ್ನಾಟಕದಲ್ಲಿ 12 ಸಾವಿರದ 166, ದೆಹಲಿಯಲ್ಲಿ 10 ಸಾವಿರದ 746, ಪಶ್ಚಿಮ ಬಂಗಾಳದಲ್ಲಿ 10 ಸಾವಿರದ 053, ಉತ್ತರ ಪ್ರದೇಶದಲ್ಲಿ 8 ಸಾವಿರದ 576, ಆಂಧ್ರ ಪ್ರದೇಶದಲ್ಲಿ 7 ಸಾವಿರದ 140 ಮತ್ತು ಪಂಜಾಬ್ ರಾಜ್ಯದಲ್ಲಿ 5 ಸಾವಿರದ 504 ವರದಿಯಾಗಿವೆ.


SHARE THIS

Author:

0 التعليقات: