Sunday, 17 January 2021

ಬೆಂಗಳೂರಿನ ವಿವಿಧೆಡೆ ಜನವರಿ 18 ರಿಂದ 22ರವರೆಗೆ ವಿದ್ಯುತ್ ವ್ಯತ್ಯಯ


ಬೆಂಗಳೂರಿನ ವಿವಿಧೆಡೆ ಜನವರಿ 18 ರಿಂದ 22ರವರೆಗೆ ವಿದ್ಯುತ್ ವ್ಯತ್ಯಯ

ಬೆಂಗಳೂರು, ಜನವರಿ 18:ಬೆಂಗಳೂರಿನ ವಿವಿಧೆಡೆ ಜನವರಿ 18 ರಿಂದ 22ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ನಗರದ ದಕ್ಷಿಣ ಭಾಗ ಅಂದರೆ ಕೋಣನಕುಂಟೆ ಹಾಗೂ ಪುಟ್ಟೇನಹಳ್ಳಿಯಲ್ಲಿ ದುರಸ್ತಿ ಕಾರ್ಯ ಇದ್ದು ಜನವರಿ 18 ರಿಂದ ಜನವರಿ 22ರವರೆಗೆ ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಚುಂಚಘಟ್ಟ ಮುಖ್ಯರಸ್ತೆ,ವಿನಾಯಕ ಥಿಯೇಟರ್ ರಸ್ತೆ,ಕಪ್ ಫ್ಯಾಕ್ಟರಿ, ಗ್ಲಾಸ್ ಫ್ಯಾಕ್ಟರಿ ರಸ್ತೆ, ಕೃಷ್ಣ ಲೇಔಟ್, ಕೊತ್ತನೂರು ಮುಖ್ಯರಸ್ತೆ, ಸದಾನಂದ ಕಾಂಪೌಂಡ್, ಶಾರದಾ ನಗರ, ಶಿವಶಕ್ತಿನಗರ ಹಾಗೂ ಡಿಆರ್‌ಆರ್‌ ಆಸ್ಪತ್ರೆಯಲ್ಲಿ ಭಾಗದಲ್ಲಿ ವಿದ್ಯುತ್ ಇರುವುದಿಲ್ಲ.

ಕಳೆದ ವಾರವಷ್ಟೇ ಬೆಸ್ಕಾಂ ಎಚ್‌ಎಚ್‌ಆರ್ ಲೇಔಟ್ ನಲ್ಲಿ ಜನವರಿ 11 ರಿಂದ 16ರವರೆಗೆ ವಿದ್ಯುತ್ ವ್ಯತ್ಯಯ ಮಾಡಿತ್ತು. ಆ ಸಂದರ್ಭದಲ್ಲಿ ಅಂಡರ್‌ಗ್ರೌಂಡ್ ಕೇಬಲ್, ಆಪ್ಟಿಕಲ್ ಕೇಬಲ್ ದುರಸ್ತಿ ಕೆಲಸ ನಡೆಸಿದ್ದರು.

ಇಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ಬೆಸ್ಕಾಂ ಹೇಳಿರುವ ಪ್ರದೇಶ ಹೇಳಿರುವ ಸಮಯವನ್ನು ಬಿಟ್ಟು ಕೂಡ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಭಾನುವಾರ 20ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಹಲವು ಪ್ರದೇಶಗಳಲ್ಲಿ ಒಂದು ತಾಸಿಗಿಂತಲೂ ಹೆಚ್ಚು ಸಮಯ ವಿದ್ಯುತ್ ಇರಲಿಲ್ಲ.


SHARE THIS

Author:

0 التعليقات: