Saturday, 23 January 2021

ರಾಜ್ಯಕ್ಕೆ ಮತ್ತೆ 1.46 ಲಕ್ಷ ಡೋಸ್ ಕೋವ್ಯಾಕ್ಸಿನ್ ಲಸಿಕೆ


ರಾಜ್ಯಕ್ಕೆ ಮತ್ತೆ 1.46 ಲಕ್ಷ ಡೋಸ್ ಕೋವ್ಯಾಕ್ಸಿನ್ ಲಸಿಕೆ

ಬೆಂಗಳೂರು : ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮತ್ತೊಂದು ಸುತ್ತಿನ 1.46 ಲಕ್ಷ ಡೋಸ್ ಕೋವ್ಯಾಕ್ಸಿಇನ್ ಕೊರೊನಾ ಲಸಿಕೆ ಬಂದಿದೆ. ಈ ಮೂಲಕ ಈವರೆಗೆ ರಾಜ್ಯಕ್ಕೆ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಸೇರಿ ರಾಜ್ಯಕ್ಕೆ ಒಟ್ಟು 17.1 ಲಕ್ಷ ಲಸಿಕೆ ಬಂದಂತಾಗಿದೆ.

ಜನವರಿ 14 ರಂದು 20 ಸಾವಿರ ಡೋಸ್ ಕೋವ್ಯಾಕ್ಸಿನ್ ಬಂದಿತ್ತು. ಈಗ 2 ನೇ ಸುತ್ತಿನ 1,46,240 ಡೋಸ್ ಲಸಿಕೆಯನ್ನು ಕೇಂದ್ರಶನಿವಾರ ಕಳುಹಿಸಿಕೊಟ್ಟಿದೆ. ಈ ಮೂಲಕ ಒಟ್ಟು 1,66,240 ಡೋಸ್ ಕೋವ್ಯಾಕ್ಸಿನ್ ಲಸಿಕೆ ಬಂದಾಂತಾಗಿದೆ.

ಇನ್ನುರಾಜ್ಯದ ವಿವಿಧ ವಿಮಾನ ನಿಲ್ದಾಣಗಳ ಸಿಬ್ಬಂದಿಯನ್ನೂ ಕೊರೊನಾ ವಾರಿಯರ್ಸ್ ಆಗಿ ಪರಿಗಣಿಸಿರುವ ರಾಜ್ಯ ಆರೋಗ್ಯ ಇಲಾಖೆಯು ವಿಮಾನ ನಿಲ್ದಾಣಗಳ ಸಿಬ್ಬಂದಿಗೂ ಕೊರೊನಾ ಲಸಿಕೆ ನೀಡಲು ಆದೇಶ ಹೊರಡಿಸಿದೆ.SHARE THIS

Author:

0 التعليقات: