Wednesday, 20 January 2021

'ರೈತ ಮುಖಂಡ'ರ ಜೊತೆಗಿನ ಕೇಂದ್ರದ 10 ನೇ ಸುತ್ತಿನ ಸಂಧಾನ ಸಭೆ ವಿಫಲ : ಮುಂದುವರೆದ 'ಅನ್ನದಾತರ ಪ್ರತಿಭಟನೆ'


'ರೈತ ಮುಖಂಡ'ರ ಜೊತೆಗಿನ ಕೇಂದ್ರದ 10 ನೇ ಸುತ್ತಿನ ಸಂಧಾನ ಸಭೆ ವಿಫಲ : ಮುಂದುವರೆದ 'ಅನ್ನದಾತರ ಪ್ರತಿಭಟನೆ'

ನವದೆಹಲಿ : ಕೇಂದ್ರ ಕೃಷಿ ಮಸೂದೆ ವಿರುದ್ಧ ರೈತರ ಪ್ರತಿಭಟನೆ ಜೋರಾಗುತ್ತಿದ್ದು, ಇದರ ನಡುವೆ ಇಂದು ರೈತರೊಂದಿಗೆ ಸರ್ಕಾರ ನಡೆಸಿದ 10 ನೇ ಸಂವಿಧಾನ ಸಭೆ ಕೂಡ ವಿಫಲವಾಗಿದ್ದು, ರೈತರು ತಮ್ಮ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿದ್ದಾರೆ.

ಇಂದಿನ ಸಭೆಯಲ್ಲಿ ಕೇಂದ್ರ ಸರ್ಕಾರ ಮತ್ತೊಮ್ಮೆ ಕೃಷಿ ಕಾಯಿದೆಗಳನ್ನು ರದ್ದು ಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಹಾಗೂ ಸದ್ಯ ಕೃಷಿ ಕಾಯಿದೆಗಳಲ್ಲಿ ಅಗತ್ಯ ತಿದ್ದುಪಡಿಗಳನ್ನು ತರಲು ಸಿದ್ದಪಡಿಸಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

ಸಭೆಗೂ ಮುನ್ನ ಈ ಬಗ್ಗೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದ್ದು, ರೈತರ ಗೊಂದಲಗಳನ್ನು ಶೀಘ್ರವೇ ಪರಿಹರಿಸಲು ಬಯಸಿದ್ದೇವೆ ಎಂದು ಹೇಳಿದೆ. ಕಾಯಿದೆಗಳ ಬಗ್ಗೆ ಸುಳ್ಳು ವದಂತಿ ಹಬ್ಬಿಸಲಾಗುತ್ತಿರುವುದರಿಂದ ಸಮಸ್ಯೆ ಪರಿಹಾರ ವಿಳಂಬವಾಗುತ್ತಿದೆ ಎಂದಿದೆ .

ಇನ್ನೂ, ಕೇಂದ್ರ ಸರ್ಕಾರದ ಜೊತೆಗಿನ ರೈತ ಮುಖಂಡರ ಸಭೆ ಜನವರಿ 22 ರಂದು ನಡೆಯಲಿದೆ. ಮೂಲಗಳ ಪ್ರಕಾರ, ರೈತ ಸಂಘಗಳು ಸರ್ಕಾರದ ಪ್ರಸ್ತಾಪವನ್ನು ಪ್ರತಿಭಟಿಸುವ ರೈತರೊಂದಿಗೆ ಚರ್ಚಿಸಲಿವೆ. ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವುದಕ್ಕಿಂತ ಕಡಿಮೆ ಏನನ್ನೂ ಸ್ವೀಕರಿಸುವುದಿಲ್ಲ ಎಂದು ರೈತರು ಸಭೆಯಲ್ಲಿ ನಿರ್ಧರಿಸಿದ್ದಾರೆ.


SHARE THIS

Author:

0 التعليقات: