Thursday, 28 January 2021

ಅಚ್ಛೇ ದಿನ್! | ಇಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ರೂ. 100ರ ಗಡಿ ದಾಟಿತು!


ಅಚ್ಛೇ ದಿನ್! | ಇಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ರೂ. 100ರ ಗಡಿ ದಾಟಿತು!

ನವದೆಹಲಿ : ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದ್ದರೂ, ಯಾರೊಬ್ಬರೂ ಧ್ವನಿ ಎತ್ತದಿರುವುದು ವಿಪರ್ಯಾಸ. ‘ಅಚ್ಛೇ ದಿನ್’ ಬರುತ್ತದೆ ಎಂದು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಬುಧವಾರ ಪೆಟ್ರೋಲ್ ಬೆಲೆ ಲೀಟರ್ ಗೆ ರೂ. 100ರ ಗಡಿ ದಾಟಿದೆ.   

ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಪ್ರೀಮಿಯಂ ಪೆಟ್ರೋಲ್ ಬೆಲೆ ಲೀಟರ್ ಗೆ 101 ರೂ. ಆಗಿದೆ. ಸಾಮಾನ್ಯ ಪೆಟ್ರೋಲ್ ಬೆಲೆ ಲೀಟರ್ ಗೆ 98.40 ರೂ. ಆಗಿದೆ. ರಾಜಸ್ಥಾನದ ಬಹುತೇಕ ನಗರಗಳಲ್ಲಿ ಸಾಮಾನ್ಯ ಪೆಟ್ರೋಲ್ ಬೆಲೆ ರೂ.93ರ ಗಡಿ ದಾಟಿದೆ. ಬ್ರಾಂಡೆಡ್ ಪೆಟ್ರೋಲ್ ಗೆ ದೆಹಲಿಯಲ್ಲಿ ಲೀಟರ್ ಗೆ 89.10 ರೂ. ಆಗಿದ್ದು, ಮುಂಬೈಯಲ್ಲಿ ಲೀಟರ್ ಗೆ 95.61 ರೂ. ಆಗಿದೆ.

ಮಧ್ಯಪ್ರದೇಶದ ಅನುಪುರದಲ್ಲಿ ಬುಧವಾರ ಸಾಮಾನ್ಯ ಪೆಟ್ರೋಲ್ ಗೇ ಲೀಟರ್ ಗೆ 96.74ರೂ. ಆಗಿದೆ. ಮಧ್ಯಪ್ರದೇಶದ ಬಹುತೇಕ ನಗರಗಳಲ್ಲಿ ಪೆಟ್ರೋಲ್ ಗೆ ಲೀಟರ್ ಗೆ ರೂ. 95ರ ಗಡಿ ದಾಟಿದೆ.SHARE THIS

Author:

0 التعليقات: