Wednesday, 27 January 2021

ರಾಜಸ್ಥಾನದಲ್ಲಿ 100ರ ಗಡಿ ದಾಟಿದ ಪ್ರೀಮಿಯಂ ಪೆಟ್ರೋಲ್‌ ದರ


ರಾಜಸ್ಥಾನದಲ್ಲಿ 100ರ ಗಡಿ ದಾಟಿದ ಪ್ರೀಮಿಯಂ ಪೆಟ್ರೋಲ್‌ ದರ


ನವದೆಹಲಿ: ದೇಶದಾದ್ಯಂತ ಬುಧವಾರವೂ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಏರಿಕೆ ಆಗಿದೆ. ಬ್ರ್ಯಾಂಡೆಡ್‌ ಅಥವಾ ಪ್ರೀಮಿಯಂ ಪೆಟ್ರೋಲ್‌ ದರವು ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಬುಧವಾರ ಒಂದು ಲೀಟರ್‌ಗೆ 100ರ ಗಡಿ ದಾಟಿದೆ.

ದೆಹಲಿಯಲ್ಲಿ ಪ್ರೀಮಿಯಂ ಪೆಟ್ರೋಲ್‌ ದರ ಲೀಟರಿಗೆ  89.10 ಇದ್ದರೆ ಮುಂಬೈನಲ್ಲಿ  95.61ರಷ್ಟಾಗಿದೆ.

ಬೆಲೆ ಏರಿಕೆ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು 25 ಪೈಸೆಗಳಷ್ಟು ಹೆಚ್ಚಿಸಿವೆ.

ಇದರಿಂದಾಗಿ ದೆಹಲಿಯಲ್ಲಿ ಪೆಟ್ರೋಲ್‌ ದರ ₹ 86.30, ಡೀಸೆಲ್‌ ದರ ₹ 76.23ಕ್ಕೆ ಏರಿಕೆ ಆದರೆ, ಮುಂಬೈನಲ್ಲಿ ಪೆಟ್ರೋಲ್‌ ₹ 92.86 ಮತ್ತು ಡೀಸೆಲ್‌ ₹ 83.02ಕ್ಕೆ ತಲುಪಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ದರ 26 ಪೈಸೆ ಹೆಚ್ಚಾಗಿ ₹ 89.21ಕ್ಕೆ ಮತ್ತು ಡೀಸೆಲ್‌ ದರ 26 ಪೈಸೆ ಹೆಚ್ಚಾಗಿ ₹ 81.10ಕ್ಕೆ ತಲುಪಿದೆ.SHARE THIS

Author:

0 التعليقات: