Thursday, 21 January 2021

ಹಳೆಯ 100 ರೂ. ನೋಟು ಹಿಂಪಡೆಯಲು `RBI' ನಿರ್ಧಾರ


ಹಳೆಯ 100 ರೂ. ನೋಟು ಹಿಂಪಡೆಯಲು `RBI' ನಿರ್ಧಾರ

ಬೆಂಗಳೂರು : ಪ್ರಸ್ತುತ ಚಲಾವಣೆಯಲ್ಲಿರುವ ಹಳೆಯ 100 ರೂ. ನೋಟುಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣವಾಗಿ ಹಿಂಪಡೆಯಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.

ಕಳೆದ 6 ವರ್ಷಗಳಿಂದ ಮುದ್ರಣವಾಗದ, ಆದರೆ ಚಲಾವಣೆಯಲ್ಲಿರುವ ಹಳೆಯ ನೋಟುಗಳನ್ನು ಹಂತ ಹಂತವಾಗಿ ಹಿಂಪಡೆಯಲಾಗುತ್ತಿದೆ. ಮಾರ್ಚ್ ಅಂತ್ಯಕ್ಕೆ ಇದು ಪೂರ್ಣವಾಗಲಿದೆ. ಇನ್ಮುಂದೆ 100 ರೂ. ಮುಖಬೆಲೆಯ ಹೊಸ ನೋಟುಗಳು ಮಾತ್ರ ಚಲಾವಣೆಯಲ್ಲಿರಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.

100 ರೂ. ನಹಳೆಯ ನೋಟುಗಳನ್ನು ಗ್ರಾಹಕರು ಮಾರ್ಚ್ ಅಂತ್ಯದೊಳಗೆ ಬ್ಯಾಂಕ್ ಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು ಎಂದು ಮಾಹಿತಿ ನೀಡಿದೆ.



SHARE THIS

Author:

0 التعليقات: