Saturday, 23 January 2021

ಮಾರ್ಚ್ ನಂತರ ನಡೆಯಲ್ಲ 100, 10 ಮತ್ತು 5 ರೂಪಾಯಿ ಹಳೆಯ ನೋಟು : `RBI' ಮಹತ್ವದ ನಿರ್ಧಾರ


ಮಾರ್ಚ್ ನಂತರ ನಡೆಯಲ್ಲ 100, 10 ಮತ್ತು 5 ರೂಪಾಯಿ ಹಳೆಯ ನೋಟು : `RBI' ಮಹತ್ವದ ನಿರ್ಧಾರ


ಮಂಗಳೂರು : 5, 10 ಮತ್ತು 100 ರೂಪಾಯಿಹಳೆಯ ನೋಟುಗಳನ್ನು ಹಿಂಪಡೆಯುವ ಯೋಜನೆಯನ್ನು ರಿಸರ್ವ್ ಬ್ಯಾಂಕ್ ಪರಿಶೀಲಿಸುತ್ತಿದೆ ಎಂದು ಬಿ.ಮಹೇಶ್ ಹೇಳಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಘೋಷಣೆ ಮಾಡಬಹುದು ಎನ್ನಲಾಗಿದೆ.

ಮಂಗಳೂರು ಜಿಲ್ಲಾ ಪಂಚಾಯಿತಿ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಭದ್ರತಾ ಸಮಿತಿ (ಡಿಎಲ್ ಎಸ್ ಸಿ) ಮತ್ತು ಜಿಲ್ಲಾ ಮಟ್ಟದ ಕರೆನ್ಸಿ ನಿರ್ವಹಣಾ ಸಮಿತಿ (ಡಿಎಲ್ ಎಂಸಿ) ಸಭೆಯಲ್ಲಿ ಅವರು ಮಾತನಾಡಿದರು. ಮಾರ್ಚ್-ಏಪ್ರಿಲ್ ವೇಳೆಗೆ ಆರ್ ಬಿಐ ಹಿಂತೆಗೆಯಲು ಯೋಜಿಸಿರುವ ಕಾರಣ 100, 10 ಮತ್ತು 5 ರೂಪಾಯಿಯ ಹಳೆಯ ನೋಟುಗಳು ಚಲಾವಣೆಯಿಂದ ಹೊರಹೋಗುತ್ತವೆ ಎಂದು ಮಹೇಶ್ ತಿಳಿಸಿದ್ದಾರೆ.

10 ರೂ ನಾಣ್ಯ ಜಾರಿಯಾಗಿ 15 ವರ್ಷ ಕಳೆದರೂ ವರ್ತಕರು, ನಾಣ್ಯಸ್ವೀಕರಿಸದಿರುವುದು ಬ್ಯಾಂಕ್ ಮತ್ತು ಆರ್ ಬಿಐಗೆ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಅವರು ಹೇಳಿದರು. 10 ರೂಪಾಯಿ ನಾಣ್ಯಗಳನ್ನು ಬ್ಯಾಂಕ್ ಗಳಲ್ಲಿ ರಾಶಿ ಹಾಕಲಾಗಿದೆ ಎಂದು ಅವರು ಹೇಳಿದರು. ನಾಣ್ಯದ ಸಿಂಧುತ್ವದ ಬಗ್ಗೆ ಹರಡಿರುವ ವದಂತಿಗಳ ಬಗ್ಗೆ ಬ್ಯಾಂಕ್ ಗಳು ಜನರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದ ಎಜಿಎಂ, 10 ರೂಪಾಯಿ ನಾಣ್ಯವನ್ನು ಸಾರ್ವಜನಿಕರು ಬಳಕೆ ಮಾಡಲು ಬ್ಯಾಂಕ್ ದಾರಿ ಗಳನ್ನು ಕಂಡುಹಿಡಿಯಬೇಕು ಎಂದು ಹೇಳಿದೆ.

ಆರ್ ಬಿಐ ಅಂದುಕೊಂಡಂತೆ ನಡೆದರೆ 100, 10 ಹಾಗೂ 5 ರೂ. ಹಳೇ ನೋಟುಗಳನ್ನು ಬ್ಯಾಂಕ್ ಗಳಿಗೆ ಹಿಂತಿರುಗಿಸಲು ಮಾರ್ಚ್ ತನಕ ಅವಕಾಶವಿದೆ. ಜನ ತಮ್ಮ ಬಳಿ ಇರುವ ಹಳೇ ನೋಟುಗಳನ್ನು ಆದಷ್ಟು ಬೇಗ ಬ್ಯಾಂಕ್ ಗಳಿಗೆ ಸಲ್ಲಿಸಿ ಹೊಸ ನೋಟುಗಳನ್ನು ತೆಗೆದುಕೊಳ್ಳಬಹುದಾಗಿದೆ.

ʼSBI ಗ್ರಾಹಕʼರಿಗೆ ಗುಡ್‌ ನ್ಯೂಸ್:‌ ಎಟಿಎಂ ಕಾರ್ಡ್ ವಿತ್ ಡ್ರಾ ಮಿತಿ ʼ1 ಲಕ್ಷ ರೂ.ಗಳಿಗೆʼ ಹೆಚ್ಚಳ..!


SHARE THIS

Author:

0 التعليقات: