ರಾಜ್ಯದಲ್ಲಿ 10 ಮಂದಿಗೆ ಹೊಸ ಕೊರೋನಾ ವೈರಸ್ ದೃಢ: ರಾಜ್ಯ ಆರೋಗ್ಯ ಸಚಿವ ಕೆ ಸುಧಾಕರ್
ಬೆಂಗಳೂರು: ಹೊಸ ಕೊರೋನಾ ಸೋಂಕಿನ ಬಗ್ಗೆ ಮಾಹಿತಿ ನೀಡಿದ ರಾಜ್ಯ ಆರೋಗ್ಯ ಸಚಿವ ಡಾ.ಕೆ ಸುಧಾಕರ್, ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ 10 ಮಂದಿಗೆ ಹೊಸ ಮಾದರಿಯ ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರೂಪಾಂತರ ಹೊಂದಿರುವ ಹೊಸ ಬ್ರಿಟನ್ ವೈರಸ್ ಪತ್ತೆ ಹಚ್ಚುವ ಸಲುವಾಗಿ ಬ್ರಿಟನ್ನಿಂದ ಆಗಮಿಸಿದ್ದ 42 ಜನರಿಗೆ ಆರ್ಟಿಪಿಸಿಆರ್ ನಡೆಸಲಾಗಿದ್ದು, ಅದರಲ್ಲಿ 32 ಮಂದಿಗೆ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ ಕರ್ನಾಟಕ ರಾಜ್ಯದವರು 10 ಮಂದಿ ಇದ್ದಾರೆ ಎಂದು ಮಾಹಿತಿ ನೀಡಿದರು.
ಎಲ್ಲರನ್ನು ನಿಗದಿಪಡಿಸಿದ ಆಸ್ಪತ್ರೆಯಲ್ಲೇ ಚಿಕಿತ್ಸೆಗೊಳಪಡಿಸಲಾಗಿದೆ. ಯಾರಿಗೂ ತೀವ್ರತರವಾದ ಸೋಂಕು ಆವರಿಸಿಲ್ಲ. ಆದ್ದರಿಂದ ಸಾರ್ವಜನಿಕರು ಆತಂಕ ಪಡಬಾರದು ಎಂದು ಸ್ಪಷ್ಟಪಡಿಸಿದರು.
0 التعليقات: