Sunday, 31 January 2021

 'ಪಿಎಂ ಆತ್ಮನಿರ್ಭರ್ ಸ್ವಾಸ್ಥ್ಯ ಭಾರತ್ ಯೋಜನೆ' ಘೋಷಿಸಿದ ವಿತ್ತ ಸಚಿವೆ

'ಪಿಎಂ ಆತ್ಮನಿರ್ಭರ್ ಸ್ವಾಸ್ಥ್ಯ ಭಾರತ್ ಯೋಜನೆ' ಘೋಷಿಸಿದ ವಿತ್ತ ಸಚಿವೆ


 'ಪಿಎಂ ಆತ್ಮನಿರ್ಭರ್ ಸ್ವಾಸ್ಥ್ಯ ಭಾರತ್ ಯೋಜನೆ' ಘೋಷಿಸಿದ ವಿತ್ತ ಸಚಿವೆ

ಹೊಸದಿಲ್ಲಿ : ಇಂದು ಕೇಂದ್ರ ಬಜೆಟ್ 2021 ಮಂಡಿಸುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಧಾನ್ ಮಂತ್ರಿ ಆತ್ಮನಿರ್ಭರ್ ಸ್ವಾಸ್ಥ್ಯ ಭಾರತ್ ಯೋಜನಾ ಎಂಬ ಕೇಂದ್ರೀಯ ಪ್ರವರ್ತಿತ ಯೋಜನೆಯನ್ನು ಘೋಷಿಸಿ ಈ ಯೋಜನೆಗಾಗಿ ಮುಂದಿನ ಆರು ವರ್ಷಗಳ ಅವಧಿಗೆ ರೂ. 64,180 ಕೋಟಿ ಮೀಸಲಿರಿಸಿದ್ದಾರೆ.

ಈ ಯೋಜನೆಯ ಭಾಗವಾಗಿ  ದೇಶದ ಎಲ್ಲಾ ಸ್ತರಗಳ ಆರೋಗ್ಯ ಸೇವಾ ವ್ಯವಸ್ಥೆಯ ಸಾಮಥ್ರ್ಯವನ್ನು ಹೆಚ್ಚಿಸುವುದರ ಜತೆಗೆ ಈಗಿರುವ ಸಂಸ್ಥೆಗಳನ್ನು ಇನ್ನಷ್ಟು ಬಲಪಡಿಸುವುದು ಹಾಗೂ ಹೊಸತಾಗಿ ಕಾಣಿಸುವ ರೋಗಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ  ನೀಡುವ ಹೊಸ ಸಂಸ್ಥೆಗಳನ್ನು ಆರಂಭಿಸುವ ಉದ್ದೇಶ ಸರಕಾರಕ್ಕಿದೆ. ರಾಷ್ಟ್ರೀಯ ಆರೋಗ್ಯ ಮಿಷನ್‍ಗೆ ಹೆಚ್ಚುವರಿಯಾಗಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ವಿತ್ತ ಸಚಿವೆ ಹೇಳಿದ್ದಾರೆ.

ಕೋವಿಡ್ ನಂತರದ ಪ್ರಸಕ್ತ ಸನ್ನಿವೇಶದಲ್ಲಿ ಆರೋಗ್ಯ ಕ್ಷೇತ್ರದ ಮೂಲಭೂತಸೌಕರ್ಯಗಳಲ್ಲಿ ಹೂಡಿಕೆಯನ್ನು  ಬಹಳಷ್ಟು ಹೆಚ್ಚಿಸಲಾಗಿದೆ ಎಂದೂ ಸಚಿವೆ ಹೇಳಿದರು.

ಕೋವಿಡ್ ಲಸಿಕೆ ಅಭಿಯಾನಕ್ಕಾಗಿ ಸರಕಾರ  2021-2022ರಲ್ಲಿ ರೂ 35,000 ಕೋಟಿ ಒದಗಿಸಲಿದೆ ಹಾಗೂ ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ಹಣಕಾಸು ಮೀಸಲಿರಿಸಲಾಗುವುದು ಎಂದು ಅವರು ಹೇಳಿದರು.

 ಕೋವಿಡ್-19 ಲಸಿಕೆಗಳಿಗೆ 35,000 ಕೋಟಿ ರೂ. ಘೋಷಣೆ

ಕೋವಿಡ್-19 ಲಸಿಕೆಗಳಿಗೆ 35,000 ಕೋಟಿ ರೂ. ಘೋಷಣೆ

 

ಕೋವಿಡ್-19 ಲಸಿಕೆಗಳಿಗೆ 35,000 ಕೋಟಿ ರೂ. ಘೋಷಣೆ

ಹೊಸದಿಲ್ಲಿ: 2021 ರ ಬಜೆಟ್ ನಲ್ಲಿ ಕೊರೋನ ಲಸಿಕೆಗೆ ಸರಕಾರ 35,000 ಕೋಟಿ ರೂ. ಮೀಸಲಿರಸಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

 ಭಾರತದ ಮೊದಲ ಉಗ್ರಗಾಮಿ ನಾಥೂರಾಮ್ ಗೋಡ್ಸೆ: ಅಸದುದ್ದೀನ್ ಉವೈಸಿ

ಭಾರತದ ಮೊದಲ ಉಗ್ರಗಾಮಿ ನಾಥೂರಾಮ್ ಗೋಡ್ಸೆ: ಅಸದುದ್ದೀನ್ ಉವೈಸಿ


 ಭಾರತದ ಮೊದಲ ಉಗ್ರಗಾಮಿ ನಾಥೂರಾಮ್ ಗೋಡ್ಸೆ: ಅಸದುದ್ದೀನ್ ಉವೈಸಿ

ಕಲಬುರ್ಗಿ, ಜ.31: ಅಹಿಂಸೆಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮಾ ಗಾಂಧೀಜಿ ಅವರನ್ನು ಕೊಂದ ನಾಥೂರಾಮ್ ಗೋಡ್ಸೆ ಸ್ವಾತಂತ್ರ್ಯೋತ್ತರ ಭಾರತದ ಮೊದಲ ಉಗ್ರಗಾಮಿ ಎಂದು ಎಐಎಂಐಎಂ ಸಂಸ್ಥಾಪಕ, ಸಂಸದ ಅಸದುದ್ದೀನ್ ಓವೈಸಿ ಹೇಳಿದ್ದಾರೆ.ಕಲಬುರ್ಗಿಯ ಮೊಘಲ್ ಗಾರ್ಡನ್ ನಲ್ಲಿ ಎ.ಐ.ಎಂ.ಐ.ಎಂ ಸಮಾವೇಶ ಉದ್ದೇಶಿಸಿ ಮಾತನಾಡಿದ ಓವೈಸಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.

ಸ್ವಾತಂತ್ರ್ಯೋತ್ತರ ಭಾರತದ ಮೊದಲ ಉಗ್ರಗಾಮಿ ನಾಥೂರಾಮ್ ಗೋಡ್ಸೆ ಆಗಿದ್ದಾನೆ. ಗೋಡ್ಸೆ ಗಾಂಧೀಜಿ ಹತ್ಯೆ ಮಾಡುವುದರ ಹಿಂದೆ ಸಾವರಕರ್, ನಾರಾಯಣ ಆಪ್ಟೆ ಪಿತೂರಿ ಅಡಗಿತ್ತು. ಜವಹರಲಾಲ್ ನೆಹರೂ ನೇತೃತ್ವದ ಅಂದಿನ ಕಾಂಗ್ರೆಸ್ ಸರ್ಕಾರ ಸರಿಯಾಗಿ ತನಿಖೆ ಮಾಡಿದ್ರೆ ಸಂಘ ಪರಿವಾರದ ಮುಖಂಡರೆಲ್ಲರೂ ಜೈಲಿನಲ್ಲಿರುತ್ತಿದ್ದರು. ಆದರೆ ಅದನ್ನು ನೆಹರೂ ಸರ್ಕಾರ ಮಾಡಲಿಲ್ಲ. ಸಂಘ ಪರಿವಾರ ಭದ್ರವಾಗಿ ಬೇರೂರಲು ಕಾಂಗ್ರೆಸ್ ಸಹ ಕಾರಣ ಎಂದು ಕಾಂಗ್ರೆಸ್ ಮತ್ತು ಸಂಘ ಪರಿವಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಈ ದೇಶವನ್ನು ಗೋಡ್ಸೆ ದಾರಿಯಲ್ಲಿ ಕೊಂಡೊಯ್ಯಲಾಗುತ್ತಿದೆ. ಗೋಡ್ಸೆ ದೇಶವನ್ನು ಹಿಂದೂ ರಾಷ್ಟ್ರ ಮಾಡುವ ಹುನ್ನಾರ ಹೊಂದಿದ್ದ. ಆತನ ಉದ್ದೇಶವನ್ನು ಈಡೇರಿಸಲು ಗೋಡ್ಸೆ ಸಂತತಿ ಹೊರಟಿದೆ ಎಂದು ಪರೋಕ್ಷವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದರು.

ರಾಮನ ಹೆಸರಲ್ಲಿ ಸಮಾಜದಲ್ಲಿ ದ್ವೇಷ ಬಿತ್ತಲಾಗ್ತಿದೆ. ಹಿಂದೂ – ಮುಸ್ಲಿಂ ನಡುವೆ ಭಿನ್ನಾಭಿಪ್ರಾಯ ಹುಟ್ಟುಹಾಕಲಾಗ್ತಿದೆ. ಈ ದೇಶವನ್ನು ಉಳಿಸಬೇಕಂದ್ರೆ ಗೋಡ್ಸೆ ಅವರನ್ನು ತಿರಸ್ಕರಿಸುವ ಜನರಿಂದ ಮಾತ್ರ ಸಾಧ್ಯ ಎಂದರು. ಪ್ರಧಾನಿ ಮೋದಿ ಅವ್ರು ಒಂದು ಕಡೆ ಗಾಂಧೀಜಿ ಅವರನ್ನು ಆರಾಧಿಸ್ತಾರೆ. ಮತ್ತೊಂದು ಕಡೆ ಗಾಂಧೀಜಿಯನ್ನು ಕೊಂದ ಗೋಡ್ಸೆಯನ್ನೂ ಆರಾಧಿಸ್ತಾರೆ. ಪ್ರಧಾನಿ ಸ್ಥಾನದಲ್ಲಿದ್ದವರಿಗೆ ಈ ರೀತಿಯ ದ್ವಂದ್ವ ಸರಿಯಲ್ಲ ಎಂದರು.

ಖಮರುಲ್ ಇಸ್ಲಾಂ ನಿಧನದ ನಂತರ ಕಲಬುರ್ಗಿ ನಗರದಲ್ಲಿ ಅಲ್ಪಸಂಖ್ಯಾತರಿಗೆ ರಾಜಕೀಯ ಅಭದ್ರತೆ ಸೃಷ್ಟಿಯಾಗಿದೆ. ಹೀಗಾಗಿಯೇ ಎ.ಐ.ಎಂ.ಐ.ಎಂ ಸಂಘಟನೆ ಮಾಡೋಕೆ ಕಲಬುರ್ಗಿಗೆ ಬಂದಿದ್ದೇನೆ. ಬ್ಯಾಂಡ್ ಬಾಜಾಕಿ ಪಾರ್ಟಿ ಕಾಂಗ್ರೆಸ್ ನಮ್ಮ ಪಕ್ಷವನ್ನು ಬಿಜೆಪಿ ಪಕ್ಷದ ಬಿ ಟೀಂ ಅಂತ ಹೇಳ್ತಿತ್ತು. ಈಗ ವೆಸ್ಟ್ ಬೆಂಗಾಲ್ ಗೆ ಹೋದ್ರೆ ಅಲ್ಲಿಯೂ ಎಂ.ಐ.ಎಂ.ಎಂ.ನ್ನು ಬಿಜೆಪಿ ಬಿ ಟೀಂ ಅಂತ ಟಿ.ಎಂ.ಸಿ ಹೇಳುತ್ತೆ.

ಎ.ಐ.ಎಂ.ಐ.ಎಂ. ಮೇಲೆ ಗೂಬೆ ಕೂರಿಸೋ ಕೆಲಸ ಎಲ್ಲರಿಂದಲೂ ನಡೀತಿದೆ. ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಎಂ.ಐ.ಎಂ.ಐ.ಎಂ. ತನ್ನ ಶಕ್ತಿ ಪ್ರದರ್ಶನ ಮಾಡಲಿದೆ. ಕೆಲ ಪಕ್ಷಗಳು ಜಾತ್ಯತೀತೆಯ ಜಪ ಮಾಡ್ತಿವೆ. ಜಾತ್ಯಾತೀತತೆ ಹೆಸರಲ್ಲಿ ಮುಸ್ಲಿಂರನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಬೇರೆ ಪಕ್ಷಗಳು ಜಾತ್ಯತೀತತೆ ಜಪ ಮಾಡುತ್ತಾ ಬಿಜೆಪಿಗೆ ಲಾಭ ಮಾಡಿಕೊಡ್ತಿವೆ. ಜಾತ್ಯತೀತತೆ ಬಿಟ್ಟುಬಿಡಿ, ಎಐಎಂಐಎಂ ಪಕ್ಷವನ್ನು ಬೆಂಬಲಿಸಿ ಎಂದು ಓವೈಸಿ ಕರೆ ನೀಡಿದರು. ಮುಂದಿನ ದಿನಗಳಲ್ಲಿ ಜನಪರ ಹೋರಾಟಗಳಿಗಾಗಿ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಮುಸ್ಲಿಂ ಸಮುದಾಯದ ಹಿತ ಕಾಪಾಡ್ತೇನೆ ಎಂದು ಓವೈಸಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 ಬಜೆಟ್ 2021: ಈ ಬಾರಿಯ ಬಜೆಟ್‌ನ ವಿಶೇಷ 'ಟ್ಯಾಬ್ಲೆಟ್'!

ಬಜೆಟ್ 2021: ಈ ಬಾರಿಯ ಬಜೆಟ್‌ನ ವಿಶೇಷ 'ಟ್ಯಾಬ್ಲೆಟ್'!

 

ಬಜೆಟ್ 2021: ಈ ಬಾರಿಯ ಬಜೆಟ್‌ನ ವಿಶೇಷ 'ಟ್ಯಾಬ್ಲೆಟ್'!

ನವದೆಹಲಿ, ಫೆಬ್ರುವರಿ 1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಮೂರನೇ ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ಪ್ರತಿಬಾರಿಯೂ ಬಜೆಟ್ ಮಂಡಿಸುವ ಸಚಿವರ ದಿರಿಸು ಕೂಡ ಗಮನ ಸೆಳೆಯುತ್ತದೆ. ಈ ಬಾರಿ ನಿರ್ಮಲಾ ಸೀತಾರಾಮನ್ ಕೆಂಪು ಬಣ್ಣದ ಗರಿ ಗರಿ ಸೀರೆಯೊಂದಿಗೆ ಬಜೆಟ್ ಮಂಡಿಸಲಿದ್ದಾರೆ. ಬಿಳಿ ಬಣ್ಣದ ಬೆಡಗು ಮತ್ತು ಚಿನ್ನದ ಬಣ್ಣದ ಅಂಚು ಅವರ ಸೀರೆಗೆ ಮೆರಗು ನೀಡಲಿದೆ. ಅದಕ್ಕೆ ಹೊಂದುವ ನೀಲಿ ಅಂಚಿನ ರವಿಕೆ ಧರಿಸಿದ್ದಾರೆ.

ಅದಕ್ಕೆ ಚಿನ್ನದ ಸರ, ಬಳೆಗಳು ಮತ್ತು ಪುಟಾಣಿ ಕಿವಿಯೋಲೆಯ ಅಲಂಕಾರ ಮಾಡಿಕೊಂಡಿದ್ದಾರೆ. ಪ್ರತಿ ಬಾರಿಯೂ ಹಳೆಯ ಸಂಪ್ರದಾಯವನ್ನು ಮುರಿಯುವ ಮತ್ತು ಹೊಸ ಸಂಪ್ರದಾಯವನ್ನು ಆರಂಭಿಸುವ ನಡೆಯನ್ನು ನಿರ್ಮಲಾ ಅನುಸರಿಸಿಕೊಂಡು ಬಂದಿದ್ದಾರೆ.

ಕಳೆದ ಎರಡು ವರ್ಷಗಳಿಂದ ಅವರು ಬಜೆಟ್ ಪತ್ರಗಳನ್ನು ಒಳಗೊಂಡ ಬೃಹತ್ ಸೂಟ್‌ಕೇಸ್ ಹೊತ್ತು ತರುವ ಬದಲು, ರಾಷ್ಟ್ರೀಯ ಸಂಕೇತ ಅಶೋಕ ಸ್ತಂಬದ ಚಿತ್ರವುಳ್ಳ ಕೆಂಪು ಬಣ್ಣದ 'ಬಹಿ ಖಾತಾ'ದ ಕಡತ ತಂದು ಅದರಲ್ಲಿ ಬಜೆಟ್ ಮಂಡಿಸುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ 73 ವರ್ಷಗಳ ಸಂಪ್ರದಾಯವೊಂದನ್ನು ಕೈಬಿಡಲಾಗಿದೆ. ಇದೇ ಪ್ರಥಮ ಸಲ ಕೇಂದ್ರ ಬಜೆಟ್ ಸಂಪೂರ್ಣ ಕಾಗದ ರಹಿತವಾಗುತ್ತಿದೆ. ಅಂದರೆ, 2021-22ನೇ ಸಾಲಿನ ಬಜೆಟ್‌ ಅನ್ನು ಕಾಗದಗಳಲ್ಲಿ ಮುದ್ರಣ ಮಾಡಿಲ್ಲ.

ಮೇಡ್ ಇನ್ ಇಂಡಿಯಾ ಟ್ಯಾಬ್ಲೆಟ್ ಗ್ಯಾಡ್ಜೆಟ್‌ನಲ್ಲಿ ಸಂಪೂರ್ಣ ಬಜೆಟ್ ಪ್ರತಿಯನ್ನು ಅಡಕ ಮಾಡಲಾಗಿದೆ. ಕೆಂಪು ಬಣ್ಣದ ಕಡತದಲ್ಲಿ ನಿರ್ಮಲಾ ಸೀತಾರಾಮನ್ ಟ್ಯಾಬ್ಲೆಟ್ ಹೊತ್ತು ಸಂಸತ್ ಪ್ರವೇಶಿಸಿದ್ದಾರೆ. ಹೀಗಾಗಿ ಸಾಫ್ಟ್ ಕಾಪಿ ಓದುವ ಮೂಲಕ ಬಜೆಟ್ ಮಂಡನೆಯಾಗಲಿದೆ. ಮಂಡನೆಯಾದ ನಂತರ ಸರ್ಕಾರ ಬಿಡುಗಡೆ ಮಾಡಿರುವ ಆಪ್‌ನಲ್ಲಿ ಸಹ ಬಜೆಟ್‌ನ ಸಾಫ್ಟ್‌ ಕಾಪಿ ಲಭ್ಯವಾಗಲಿದೆ. ಸಂಸದರಿಗೂ ಸಾಫ್ಟ್ ಕಾಪಿ ನೀಡಲಾಗುತ್ತದೆ.

 ಕೇಂದ್ರ ಬಜೆಟ್ 2021-22: ಮುಖ್ಯಾಂಶಗಳು

ಕೇಂದ್ರ ಬಜೆಟ್ 2021-22: ಮುಖ್ಯಾಂಶಗಳು


 ಕೇಂದ್ರ ಬಜೆಟ್ 2021-22: ಮುಖ್ಯಾಂಶಗಳು

* ದೇಶದ ಮೇಲೆ ಪರಿಣಾಮಬೀರುವ ವಿಪತ್ತುಗಳ ದೃಷ್ಟಿಯಿಂದ ಈ ಬಜೆಟ್ ಅನ್ನು ಹಿಂದೆಂದೂ ಕಂಡು ಕೇಳರಿಯದಂಥ, ವಿಶೇಷ ಸನ್ನಿವೇಶದಲ್ಲಿ ಸಿದ್ಧಪಡಿಸಲಾಗಿದೆ ಎಂದ ನಿರ್ಮಲಾ ಸೀತಾರಾಮನ್

* ಬಜೆಟ್ ಮಂಡನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ.  ಇನ್ನುಕೆಲವೆ ಕ್ಷಣಗಳಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೂರನೇ ಬಾರಿ ಬಜೆಟ್ ಮಂಡಿಸಲಿದ್ದಾರೆ.

*ಕೋವಿಡ್-19 ಕಾರಣದಿಂದಾಗಿ ಇದೇ ಮೊದಲ ಬಾರಿ ಬಜೆಟ್ ಅನ್ನು ಕಾಗದರಹಿತವಾಗಿ ಮಂಡಿಸಲಾಗುತ್ತಿದೆ. ಬಜೆಟ್ ಪ್ರತಿ ಆನ್ ಲೈನ್ ನಲ್ಲಿ ಹಾಗೂ ಆ್ಯಪ್ ನಲ್ಲಿ ಲಭ್ಯವಾಗಲಿದೆ.

* ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಕಾಂಗ್ರೆಸ್ ಸಂಸದರಾದ ಜಸ್ಬೀರ್ ಸಿಂಗ್ ಗಿಲ್ ಹಾಗೂ ಗುರ್ಜೀತ್ ಸಿಂಗ್ ಕಪ್ಪು ನಿಲುವಂಗಿ ಧರಿಸಿ ಸಂಸತ್ತಿನೊಳಗೆ ಪ್ರವೇಶಿಸಿದರು

 ಒಡಿಶಾದ ಕೊರಪುಟ್ ನಲ್ಲಿ ಭೀಕರ ಅಪಘಾತ: 9 ಪ್ರಯಾಣಿಕರು ಸಾವು, 11 ಮಂದಿಗೆ ಗಾಯ

ಒಡಿಶಾದ ಕೊರಪುಟ್ ನಲ್ಲಿ ಭೀಕರ ಅಪಘಾತ: 9 ಪ್ರಯಾಣಿಕರು ಸಾವು, 11 ಮಂದಿಗೆ ಗಾಯ


ಒಡಿಶಾದ ಕೊರಪುಟ್ ನಲ್ಲಿ ಭೀಕರ ಅಪಘಾತ: 9 ಪ್ರಯಾಣಿಕರು ಸಾವು, 11 ಮಂದಿಗೆ ಗಾಯ


ಜೇಪೋರ್: ವ್ಯಕ್ತಿ ನಿಧನವಾಗಿ 10 ದಿನ ಬಳಿಕ ನಡೆಯುವ ಧಾರ್ಮಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಲು ಛತ್ತೀಸ್ ಗಢದಿಂದ ಹೊರಟಿದ್ದ ಜನರ ಬದುಕು ದಾರುಣ ಅಂತ್ಯವಾಗಿದೆ. ಪಿಕ್ ಅಪ್ ವ್ಯಾನ್ ರಸ್ತೆಬದಿಯ ಮರಕ್ಕೆ ಢಿಕ್ಕಿ ಹೊಡೆದು ಮಗುಚಿಬಿದ್ದು 9 ಮಂದಿ ಮೃತಪಟ್ಟು 11 ಮಂದಿಗೆ ಗಾಯವಾದ ಘಟನೆ ಒಡಿಶಾದ ಜೇಪೋರ್ ನ ಮುರ್ತಹಂಡಿ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ.


7 ಮಂದಿ ಸ್ಥಳದಲ್ಲಿಯೇ ಮೃತಪಟ್ಟರೆ ಮತ್ತಿಬ್ಬರು ಸಮುದಾಯ ಕೇಂದ್ರದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಒಡಿಶಾದ ನೈರುತ್ಯ ವಲಯದ ಡಿಐಜಿ ರಾಜೇಶ್ ಪಂಡಿತ್ ತಿಳಿಸಿದ್ದಾರೆ.


ಗಾಯಗೊಂಡ 11 ಮಂದಿಯಲ್ಲಿ ನಾಲ್ವರು ಕೊಟ್ಪಾಡ್ ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದಾರೆ. ಮತ್ತೆ 7 ಮಂದಿ ಜಗ್ದಾಲ್ ಪುರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ರಾತ್ರಿ 8.45ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ.


ಅಪಘಾತದ ನಂತರ ಚಾಲಕ ತಲೆಮರೆಸಿಕೊಂಡಿದ್ದಾರೆ. ರೈಲ್ವೆ ಹಳಿಯ ಸ್ವಲ್ಪ ಮೊದಲು ಪಿಕ್ ಅಪ್ ವ್ಯಾನ್ ಮಗುಚಿ ಬಿದ್ದು ಈ ಅಪಘಾತ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ವಾಹನದೊಳಗೆ ಸುಮಾರು 30 ಮಂದಿ ಪ್ರಯಾಣಿಕರಿದ್ದರು ಎಂದು ಒಡಿಶಾ ಅಗ್ನಿಶಾಮಕ ಸೇವೆಯ ಅಧಿಕಾರಿ ತಿಳಿಸಿದ್ದಾರೆ.


 ರಾಜ್ಯದಲ್ಲಿ 60 ಲಕ್ಷ ಮಕ್ಕಳಿಗೆ 'ಪೋಲಿಯೋ ಲಸಿಕೆ' : ಸಚಿವ ಡಾ.ಕೆ.ಸುಧಾಕರ್

ರಾಜ್ಯದಲ್ಲಿ 60 ಲಕ್ಷ ಮಕ್ಕಳಿಗೆ 'ಪೋಲಿಯೋ ಲಸಿಕೆ' : ಸಚಿವ ಡಾ.ಕೆ.ಸುಧಾಕರ್


ರಾಜ್ಯದಲ್ಲಿ 60 ಲಕ್ಷ ಮಕ್ಕಳಿಗೆ 'ಪೋಲಿಯೋ ಲಸಿಕೆ' : ಸಚಿವ ಡಾ.ಕೆ.ಸುಧಾಕರ್


ಕ್ಕಬಳ್ಳಾಪುರ : ರಾಜ್ಯದಲ್ಲಿ ಐದು ವರ್ಷದೊಳಗಿನ 60 ಲಕ್ಷ ಮಕ್ಕಳಿಗೆ ಪೊಲೀಯೋ ಲಸಿಕೆ ಹಾಕಿಸಲಾಗುತ್ತಿದೆ. ಸಿಬ್ಬಂದಿ ಅಗತ್ಯತೆ ಇರುವುದರಿಂದ ಈ ನಾಲ್ಕು ದಿನ ಕೋವಿಡ್ ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.


ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಪೋಷಕರು ಎಷ್ಟು ಬಾರಿ ಲಸಿಕೆ ಹಾಕಿಸಿದರೂ ಮತ್ತೆ ಲಸಿಕೆ ಹಾಕಿಸಬೇಕು. ಕೆಲವೆಡೆ ಮೊಬೈಲ್ ಘಟಕದ ವ್ಯವಸ್ಥೆ ಮಾಡಲಾಗಿದೆ. ಕಳೆದ 11 ವರ್ಷದಲ್ಲಿ ಹೊಸ ಪೋಲಿಯೋ ಪ್ರಕರಣ ದಾಖಲಾಗಿಲ್ಲ. ಆದರೆ ಪಾಕಿಸ್ತಾನ, ಅಫ್ಘನಿಸ್ತಾನ ದೇಶಗಳಲ್ಲಿ ಈ ರೋಗ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ನೀಡಲಾಗುತ್ತಿದೆ ಎಂದರು.


ಕೋವಿಡ್ ಬಂದ ಬಳಿಕ ಆರ್ಥಿಕ ಸಂಕಷ್ಟ ಉಂಟಾಗಿದೆ. ಇಂತಹ ಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸದೃಢ ದೇಶ ನಿರ್ಮಿಸುತ್ತಿದ್ದಾರೆ. ಈ ಬಾರಿ ಬಿಡುಗಡೆಯಾದ ಆರ್ಥಿಕ ಸಮೀಕ್ಷೆಯಲ್ಲಿ ಆಶಾದಾಯಕ ಅಂಶಗಳು ಕಂಡುಬಂದಿವೆ. ಈ ಬಾರಿ ಆಶಾದಾಯಕವಾದ ಬಜೆಟ್ ಮಂಡನೆಯಾಗಲಿದೆ. ಮುಂದಿನ ವರ್ಷದಲ್ಲಿ ಆರ್ಥಿಕ ಚೇತರಿಕೆಯ ವೇಗ ಹೆಚ್ಚಲಿದೆ ಎಂದರು.


 ಇಂದಿರಾ ಗಾಂಧಿ ಬಳಿಕ ಬಜೆಟ್‌ ಮಂಡಿಸಿದ ಮತ್ತೊಬ್ಬ ಮಹಿಳೆ ನಿರ್ಮಲಾ ಸೀತಾರಾಮನ್

ಇಂದಿರಾ ಗಾಂಧಿ ಬಳಿಕ ಬಜೆಟ್‌ ಮಂಡಿಸಿದ ಮತ್ತೊಬ್ಬ ಮಹಿಳೆ ನಿರ್ಮಲಾ ಸೀತಾರಾಮನ್


ಇಂದಿರಾ ಗಾಂಧಿ ಬಳಿಕ ಬಜೆಟ್‌ ಮಂಡಿಸಿದ ಮತ್ತೊಬ್ಬ ಮಹಿಳೆ ನಿರ್ಮಲಾ ಸೀತಾರಾಮನ್


ಮೋದಿ ಸರ್ಕಾರದ ಬಜೆಟನ್ನು ನಿರ್ಮಲಾ ಸೀತಾರಾಮನ್ ಇಂದು ಮಂಡನೆ ಮಾಡ್ತಿದ್ದಾರೆ. ಬಜೆಟ್ ಮಂಡನೆ ಮಾಡ್ತಿರುವ ದೇಶದ ಎರಡನೇ ಮಹಿಳೆ ನಿರ್ಮಲಾ ಸೀತಾರಾಮನ್ ಆಗಿದ್ದಾರೆ. ನಿರ್ಮಲಾ ಸೀತಾರಾಮನ್‌ ಈ ಹಿಂದೆ ಕೂಡಾ ಬಜೆಟ್‌ ಮಂಡಿಸಿದ್ದು, ಇದೀಗ ಕೊರೊನಾ ಸಂಕಷ್ಟದ ಬಳಿಕ ಮಂಡನೆ ಮಾಡುತ್ತಿರುವ ಮತ್ತೊಂದು ಬಜೆಟ್‌ ಸಾಕಷ್ಟು ಕುತೂಹಲ ಕೆರಳಿಸಿದೆ.


ನಿರ್ಮಲಾರಿಗಿಂತ ಮೊದಲು ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಕೇಂದ್ರ ಬಜೆಟ್ ಮಂಡನೆ ಮಾಡಿದ್ದರು. ಸುಮಾರು 49 ವರ್ಷಗಳ ಹಿಂದೆ ಇಂದಿರಾ ಗಾಂಧಿ ಬಜೆಟ್ ಮಂಡನೆ ಮಾಡಿದ್ದರು.


'ಆದಾಯ ತೆರಿಗೆ' ಸಂಬಂಧಿತ ದಾಖಲೆಗಳನ್ನು ಎಷ್ಟು ವರ್ಷ ಇಟ್ಟುಕೊಳ್ಳಬೇಕು.? ಇಲ್ಲಿದೆ ಬಹು ಮುಖ್ಯ ಮಾಹಿತಿ


ಫೆಬ್ರವರಿ 28, 1970 ರಂದು ಪ್ರಧಾನ ಮಂತ್ರಿ ಹಾಗೂ ವಿತ್ತ ಮಂತ್ರಿಯಾಗಿದ್ದ ಇಂದಿರಾ ಗಾಂಧಿ ಬಜೆಟ್ ಮಂಡನೆ ಮಾಡಿದ್ದರು. ಮೊದಲ ಭಾಗದಲ್ಲಿ 17 ಅಂಕಗಳು ಮತ್ತು ಎರಡನೇ ಭಾಗದಲ್ಲಿ 38 ಅಂಕಗಳು ಇದ್ದವು. ಇಂದಿರಾ ಗಾಂಧಿ ತಮ್ಮ 15 ಪುಟಗಳ ಬಜೆಟ್‌ ಮಂಡಿಸಿದ್ದರು.


 ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖ ; ಇಂದು 522 ಮಂದಿಗೆ ಸೋಂಕು ಧೃಡ : ನಾಲ್ವರು ಬಲಿ

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖ ; ಇಂದು 522 ಮಂದಿಗೆ ಸೋಂಕು ಧೃಡ : ನಾಲ್ವರು ಬಲಿರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖ ; ಇಂದು 522 ಮಂದಿಗೆ ಸೋಂಕು ಧೃಡ : ನಾಲ್ವರು ಬಲಿ


ಬೆಂಗಳೂರು : ರಾಜ್ಯದಲ್ಲಿ ಇಂದು 522 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ನಾಲ್ವರು ಸೋಂಕಿತರು ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ಹೊರಡಿಸಿದೆ.


ಬೆಂಗಳೂರಿನಲ್ಲಿ ಭಾನುವಾರ 242 ಸೋಂಕು ಪ್ರಕರಣಗಳು ವರದಿಯಾಗಿದ್ದು, ಮೂವರು ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 9,39,387ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 12,217ಕ್ಕೆ ಏರಿದೆ.


ಕಳೆದ 24 ಗಂಟೆಗಳಲ್ಲಿ 465 ಸೋಂಕಿತರು ಗುಣಮುಖರಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 9,21,211ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 6029ಕ್ಕೆ ತಲುಪಿದೆ.

 ಅಡುಗೆ ಅನಿಲ ದರ ನಿಯಂತ್ರಣದಲ್ಲಿಲ್ಲ. ಪೆಟ್ರೋಲ್ ದರ ಗಗನಕ್ಕೇರಿದೆ: ಜನರಿಗೆ ಸಿದ್ದರಾಮಯ್ಯ ಬಹಿರಂಗ ಪತ್ರ

ಅಡುಗೆ ಅನಿಲ ದರ ನಿಯಂತ್ರಣದಲ್ಲಿಲ್ಲ. ಪೆಟ್ರೋಲ್ ದರ ಗಗನಕ್ಕೇರಿದೆ: ಜನರಿಗೆ ಸಿದ್ದರಾಮಯ್ಯ ಬಹಿರಂಗ ಪತ್ರ


ಅಡುಗೆ ಅನಿಲ ದರ ನಿಯಂತ್ರಣದಲ್ಲಿಲ್ಲ. ಪೆಟ್ರೋಲ್ ದರ ಗಗನಕ್ಕೇರಿದೆ: ಜನರಿಗೆ ಸಿದ್ದರಾಮಯ್ಯ ಬಹಿರಂಗ ಪತ್ರ


ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರ ಜನಪರವಾಗಿಲ್ಲ. ಅಡುಗೆ ಅನಿಲ ದರ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಪೆಟ್ರೋಲ್, ಡೀಸೆಲ್ ದರ ಗಗನಕ್ಕೆ ಏರಿದೆ. ರೈತರು ಮತ್ತು ಜನಪರ ಸಮಸ್ಯೆಗಳಿಗೆ ಕೇಂದ್ರದಿಂದ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.


ಈ ಸಂಬಂಧ ರಾಜ್ಯದ ಜನತೆಗೆ ಬಹಿರಂಗ ಪತ್ರ ಬರೆದಿರುವ ಮಾಜಿ ಸಿಎಂ, ಯುಪಿಎ ಸರ್ಕಾರದ ಅಂತ್ಯದ ವೇಳೆಗೆ ಪೆಟ್ರೋಲ್ ಮೇಲೆ ಕೇಂದ್ರ ಸರಕಾರ ವಿಧಿಸುತ್ತಿದ್ದ ತೆರಿಗೆ 9.21 ರೂ ಮಾತ್ರ. ಇದನ್ನು ಈಗ 32.98 ರೂ ಗೆ ಹೆಚ್ಚಿಸಲಾಗಿದೆ. ಹಾಗೆಯೇ ಡೀಸೆಲ್ ಮೇಲೆ ಮೊದಲಿದ್ದ ತೆರಿಗೆ 3.45 ಮಾತ್ರ. ಈಗ ಇದನ್ನು 31.83 ರೂಗೆ ವೃದ್ದಿಸಲಾಗಿದೆ. ಇದು ಜನಪರ ಸರ್ಕಾರದ ನಡಾವಳಿಕೆಯಲ್ಲ ಎಂದಿದ್ದಾರೆ.


ರಾಜ್ಯದಿಂದ ಸ್ಥೂಲವಾಗಿ ನೋಡಿದರೂ ಸುಮಾರು ಎರಡೂವರೆ ಲಕ್ಷಕೋಟಿ ಹಣ ಕೇಂದ್ರಕ್ಕೆ ಹೋಗುತ್ತಿದೆ. ಅದರಲ್ಲಿ 1 ಲಕ್ಷ ಕೋಟಿ ಆದಾಯ ತೆರಿಗೆ, 83 ಸಾವಿರ ಕೋಟಿ ಜಿ.ಎಸ್.ಟಿ, 36 ಸಾವಿರ ಕೋಟಿ ಪೆಟ್ರೋಲ್ ಡೀಸೆಲ್ ಮೇಲಿನ ಹೆಚ್ಚುವರಿ(ಅಡಿಷನಲ್) ತೆರಿಗೆಯಾಗಿದೆ. ಯುಪಿಎ ಸರ್ಕಾರವಿದ್ದಾಗ ಕೇವಲ 3500 ಕೋಟಿ ಮಾತ್ರ ತೆರಿಗೆ ಸಂಗ್ರಹವಾಗುತ್ತಿತ್ತು. 17.5 ಸಾವಿರ ಕೋಟಿ ಕಸ್ಟಮ್ಸ್ ತೆರಿಗೆ ಮುಂತಾದವೆಲ್ಲ ಸೇರಿವೆ ಎಂದು ಹೇಳಿದ್ದಾರೆ.


ರೈತರ ವಿಚಾರಕ್ಕೆ ಬರೋಣ. ರೈತರು ಈಗ ಕೇಂದ್ರ ಜಾರಿಗೆ ತಂದಿರುವ ಮೂರೂ ಕಾಯ್ದೆಗಳು ನಮ್ಮನ್ನು ನಾಶ ಮಾಡುತ್ತವೆ ಎಂದು ಹೇಳುತ್ತಿದ್ದಾರೆ. ಅವುಗಳನ್ನು ಹಿಂಪಡೆಯಿರಿ ಎಂದು ಪ್ರತಿಭಟಿಸುತ್ತಿದ್ದಾರೆ. ಈ ಕಾಯ್ದೆಗಳು ರೈತರನ್ನು ಉದ್ಧಾರ ಮಾಡುತ್ತವೆ ಎಂದು ಕೇಂದ್ರ ಹೇಳುತ್ತಿದೆ. ತಿಳಿದವರು ಯಾವುದು ಸರಿ ಎಂದು ಯೋಚಿಸಬೇಕಲ್ಲವೆ? ಸರಿ ತಪ್ಪುಗಳ ಕುರಿತು ಜನರಿಗೆ ಹೇಳಬೇಕಲ್ಲವೆ? ಚರ್ಚೆ, ಸಂವಾದ ನಡೆಸುವವರನ್ನೇ ದೇಶದ್ರೋಹಿಗಳು ಎಂದು ಬಿಂಬಿಸಿ ಅನೇಕ ಮಾಧ್ಯಮದವರ ಮೇಲೆ ಕೇಸು ಹಾಕಿಬಿಟ್ಟರೆ ಅದನ್ನು ಪ್ರಜಾಪ್ರಭುತ್ವ ಎನ್ನಲಾದೀತೆ?


ರೈತರು ಕೇಳುತ್ತಿರುವುದು ಇಷ್ಟೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದೀರಿ. ಯಾರು ಎಲ್ಲಿ ಬೇಕಾದರೂ ಕೊಳ್ಳಬಹುದು ಮಾರಬಹುದು ಎನ್ನುತ್ತೀರಿ. ಎಪಿಎಂಸಿಗಳಲ್ಲಿ ವ್ಯಾಪಾರ ಮಾಡುವ ವ್ಯಾಪಾರಿಗಳು ತೆರಿಗೆ ಕಟ್ಟಬೇಕು. ಹೊರಗೆ ಖರೀದಿಸುವವರು ತೆರಿಗೆ ಕಟ್ಟುವಂತಿಲ್ಲ. ಹಾಗಾದಾಗ ಯಾರು ಎಪಿಎಂಸಿಗೆ ಬಂದು ಖರೀದಿಸುತ್ತಾರೆ? ಕೊಳ್ಳುವವರು ಇಲ್ಲ ಎಂದ ಮೇಲೆ ಮಾರುವವರು ತಮ್ಮ ಉತ್ಪನ್ನ ಎಲ್ಲಿ ಮಾರುವುದು? ರೈತರು ತಮ್ಮ ಹೊಲ ಗದ್ದೆಗಳಲ್ಲೇ ಮಾರಿದರೆ ಎಷ್ಟು ಬೆಲೆಗೆ ಮಾರಿದರು ಎಂದು ನೋಡುವುದು ಹೇಗೆ? ರೈತರನ್ನು ಒಬ್ಬಂಟಿಗಳಾಗಿಸಿ ಶೋಷಣೆ ಮಾಡಿದರೆ ಅದನ್ನು ಹೇಗೆ ನಿಲ್ಲಿಸುತ್ತೀರಿ? ಉತ್ಪನ್ನಗಳ ಬೆಲೆಯನ್ನು ಹೇಗೆ ನಿರ್ಣಯಿಸುತ್ತೀರಿ? ಎಪಿಎಂಸಿಗಳಿದ್ದರೆ ರೈತರು ತಮ್ಮ ಉತ್ಪನ್ನವನ್ನು ಮಳಿಗೆಗಳಲ್ಲಿಟ್ಟು ಸಾಲ ಪಡೆಯಬಹುದು. ಈಗ ಎಪಿಎಂಸಿಗಳೆಲ್ಲ ಖಾಸಗಿಯವರ ಪಾಲಾದರೆ ರೈತರು ಬದುಕುವುದು ಹೇಗೆ? ಎಪಿಎಂಸಿ ವ್ಯವಸ್ಥೆಯಲ್ಲಿ ಲೋಪಗಳಿಲ್ಲವೆಂತಲ್ಲ. ಅವುಗಳನ್ನು ಸರ್ಕಾರ-ರೈತರು ಒಟ್ಟಾಗಿ ಸೇರಿ ಸರಿ ಮಾಡಬೇಕಲ್ಲವೆ? ರೈತರೊಂದಿಗೆ ಚರ್ಚಿಸದೆ ಕೊರೊನಾ ಕರ್ಫ್ಯೂ ಇದ್ದಾಗ ಸುಗ್ರೀವಾಜ್ಞೆ ಮೂಲಕ ಯಾಕೆ ಹೊಸ ಕಾನೂನು ತಂದಿರಿ? ಸಂವಿಧಾನದಲ್ಲಿ ರಾಜ್ಯಗಳಿಗೆ ಇರುವ ಕೃಷಿ ಮಾರುಕಟ್ಟೆಗಳ ಮೇಲಿನ ಅಧಿಕಾರವನ್ನು ಯಾಕೆ ದಮನಿಸಿ ಒಕ್ಕೂಟ ವ್ಯವಸ್ಥೆಯನ್ನು ಹಾಳುಗೆಡವುತ್ತಿದ್ದೀರಿ? ಎಂದು ರೈತರು ಕೇಳುತ್ತಿದ್ದಾರೆ.


ಈ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಉತ್ತರಿಸುತ್ತಿಲ್ಲ. ಬದಲಿಗೆ, 'ಬೆಂಬಲ ಬೆಲೆ ರದ್ದು ಮಾಡಲಾಗುತ್ತದೆ ಎಂದು ಕೆಲವು ರೈತರು ಮತ್ತು ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ಇದು ಸುಳ್ಳು ಎಂದು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಜಾಹಿರಾತು ನೀಡುತ್ತಾರೆ. ಇದಕ್ಕೆ ರೈತರು 'ಆಯಿತಪ್ಪ, ರೈತರ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ನೀಡುವ ಕಾಯ್ದೆಯೊಂದನ್ನು ಜಾರಿಗೆ ತನ್ನಿ' ಎಂದರೆ ಕೇಂದ್ರ ಸರ್ಕಾರ ಬಾಯಿಯನ್ನೇ ಬಿಡದೆ ಮೌನವಾಗುತ್ತದೆ. ಪಂಜಾಬು ಮತ್ತು ಕೇರಳ ಸರ್ಕಾರಗಳು ಕನಿಷ್ಟ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಯಾರಾದರೂ ಕೊಂಡುಕೊಂಡರೆ ಅದು ಶಿಕ್ಷಾರ್ಹ ಅಪರಾಧ ಎಂದು ಕಾಯ್ದೆ ತಂದರೆ, ರಾಷ್ಟ್ರಪತಿಗಳು ಆ ಕಾಯ್ದೆಗೆ ಸಹಿ ಮಾಡದೆ ತಿರಸ್ಕರಿಸುತ್ತಾರೆ. ಏನಿದರ ಅರ್ಥ?


ಮತ್ತದೇ ಗೌರವಾನ್ವಿತ ರಾಷ್ಟ್ರಪತಿಗಳ ಬಾಯಲ್ಲಿ ಈ ಮೂರೂ ಕಾಯ್ದೆಗಳು ರೈತ ಪರವಾಗಿವೆ ಎಂದು ಕೇಂದ್ರ ಸರ್ಕಾರ ಭಾಷಣ ಮಾಡಿಸುತ್ತದೆ. ಹೇಗೆ ಸಹಾಯವಾಗ್ತದೆ ಹೇಳ್ರಪ್ಪಾ ಅಂದರೆ ಮತ್ತದೇ ಮಾತು ತಿರುಚುವ ಕೆಲಸ. ಪ್ರತಿಭಟನೆ ಮಾಡಿದರೆ ದೇಶದ್ರೋಹಿ ಎಂಬ ಕೇಸು. ಹಾಗಿದ್ದರೆ ರೈತರನ್ನು ಹೇಗೆ ರಕ್ಷಿಸಬೇಕು? ಗದುಗಿನ ಭಾರತ ಕೃತಿ ಬರೆದ ಕನ್ನಡದ ಹೆಮ್ಮೆಯ ಕವಿ ಕುಮಾರವ್ಯಾಸ ಹೇಳುತ್ತಾನೆ; 'ಕೃಷಿಯೇ ಮೊದಲು ಸರ್ವಕ್ಕೆ.. ಕೃಷಿ ವಿಹೀನನ ದೇಶವದು ದುರ್ದೇಶ ಎನ್ನುತ್ತಾನೆ.' ಇದು ಇವರಿಗೆ ಯಾಕೆ ಅರ್ಥವಾಗುವುದಿಲ್ಲ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.


 ಮಲೆನಾಡಿನಲ್ಲಿ ಕಾಮಾಂಧರ ಅಟ್ಟಹಾಸ : ಶೃಂಗೇರಿಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ; 17 ಮಂದಿ ವಿರುದ್ಧ 'FIR' ದಾಖಲು

ಮಲೆನಾಡಿನಲ್ಲಿ ಕಾಮಾಂಧರ ಅಟ್ಟಹಾಸ : ಶೃಂಗೇರಿಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ; 17 ಮಂದಿ ವಿರುದ್ಧ 'FIR' ದಾಖಲು


ಮಲೆನಾಡಿನಲ್ಲಿ ಕಾಮಾಂಧರ ಅಟ್ಟಹಾಸ : ಶೃಂಗೇರಿಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ; 17 ಮಂದಿ ವಿರುದ್ಧ 'FIR' ದಾಖಲು


ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಕಾಮಾಂಧರು ಅಟ್ಟಹಾಸ ಮೆರೆದಿದ್ದು, ಎಸ್ ಎಸ್ ಎಲ್ ಸಿ ಓದುತ್ತಿದ್ದ ಬಾಲಕಿ ಮೇಲೆ ಕಾಮುಕರು ಅತ್ಯಾಚಾರ ಎಸಗಿದ ಘಟನೆ ಶೃಂಗೇರಿ ತಾಲೂಕಿನಲ್ಲಿ ನಡೆದಿದೆ.


ಬಾಲಕಿ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಶೃಂಗೇರಿ ಪೊಲೀಸರು 17 ಮಂದಿ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ. ಇನ್ನೂ, ಅತ್ಯಾಚಾರಕ್ಕೆ ಸಹಕರಿಸಿದ ಬಾಲಕಿಯ ಚಿಕ್ಕಮ್ಮ ಗೀತಾ ಮೇಲೂ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ಸಂಬಂಧ. ಇದುವರೆಗೂ ಪೊಲೀಸರು 17 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಅಪ್ರಾಪ್ತೆ ಮೇಲೆ ಕಳೆದ ಸೆಪ್ಟೆಂಬರ್‌ನಿಂದ 30ಕ್ಕೂ ಹೆಚ್ಚು ಮಂದಿ ಅತ್ಯಾಚಾರವೆಸಗಿದ್ದರು.


ಘಟನೆ ಹಿನ್ನೆಲೆ


ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ 15 ವರ್ಷದ ಬಾಲಕಿ ತನ್ನ ತಾಯಿ ಮೃತಪಟ್ಟ ಬಳಿಕ ನಂತರ ಚಿಕ್ಕಮ್ಮನ ಜೊತೆ ಶೃಂಗೇರಿ ತಾಲೂಕಿನ ಗ್ರಾಮವೊಂದರಲ್ಲಿ ಆಶ್ರಯ ಪಡೆದಿದ್ದಳು. ಇದನ್ನೇ ದುರುಪಯೋಗ ಮಾಡಿಕೊಂಡ ಕಾಮುಕನೋರ್ವ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದು, ನಂತರ ಮೊಬೈಲ್‌ನಲ್ಲಿ ವಿಡಿಯೊ ಮಾಡಿಕೊಂಡಿದ್ದ ಎನ್ನಲಾಗಿದೆ. ಬಳಿಕ ಅದೇ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ ತನ್ನ ಸ್ನೇಹಿತರನ್ನು ಕಳಿಸಿ ಬಾಲಕಿ ಮೇಲೆ ಅತ್ಯಾಚಾರವೆಸಗಲು ಸಹಕರಿಸಿದ್ದ ಎಂದು ಹೇಳಲಾಗಿದೆ.


ಪ್ರಕರಣ ಬೆಳಕಿಗೆ ಬಂದ ಮೇಲೆ ಬಾಲಕಿಯನ್ನು ರಕ್ಷಿಸಿದ್ದ ಮಕ್ಕಳ ಕಲ್ಯಾಣ ಸಮಿತಿ ಎರಡು ದಿನಗಳ ಕಾಲ ಬಾಲಕಿಯನ್ನು ಸಾಂತ್ವನ ಕೇಂದ್ರದಲ್ಲಿರಿಸಿತ್ತು. ನಂತರ ನಗರದಲ್ಲಿನ ಸ್ವಾಧಾರ ಕೇಂದ್ರಕ್ಕೆ ಕಳಿಸಲಾಗಿತ್ತು. ಆರೋಪಿಗಳ ವಿರುದ್ಧ ದೂರು ದಾಖಲಿಸಲು ಮಕ್ಕಳ ಕಲ್ಯಾಣ ಸಮಿತಿ ಶೃಂಗೇರಿ ಪೊಲೀಸರಿಗೆ ಶನಿವಾರ ಸೂಚಿಸಿತ್ತು. ಅಂತೆಯೇ ಪ್ರಕರಣ ದಾಖಲಿಸಿಕೊಂಡ ಪೊಲೀಸರು 17 ಮಂದಿ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ. ಇನ್ನೂ, ಅತ್ಯಾಚಾರಕ್ಕೆ ಸಹಕರಿಸಿದ ಬಾಲಕಿಯ ಚಿಕ್ಕಮ್ಮ ಗೀತಾ ಮೇಲೂ ಪ್ರಕರಣ ದಾಖಲಿಸಲಾಗಿದೆ.


 'MBBS' ಪದವಿ ಪ್ರವೇಶಾತಿ ದಿನಾಂಕ ಫೆ.8 ರವರೆಗೆ ವಿಸ್ತರಿಸಿ 'ಸುಪ್ರೀಂಕೋರ್ಟ್' ಆದೇಶ

'MBBS' ಪದವಿ ಪ್ರವೇಶಾತಿ ದಿನಾಂಕ ಫೆ.8 ರವರೆಗೆ ವಿಸ್ತರಿಸಿ 'ಸುಪ್ರೀಂಕೋರ್ಟ್' ಆದೇಶ


'MBBS' ಪದವಿ ಪ್ರವೇಶಾತಿ ದಿನಾಂಕ ಫೆ.8 ರವರೆಗೆ ವಿಸ್ತರಿಸಿ 'ಸುಪ್ರೀಂಕೋರ್ಟ್' ಆದೇಶ


ನವದೆಹಲಿ : 2020-21 ನೇ ಸಾಲಿನ ಶೈಕ್ಷಣಿಕ ಸಾಲಿನ ಎಂಬಿಬಿಎಸ್ ಪದವಿ ಕೋರ್ಸ್ ಗಳು ಮತ್ತು ಸ್ಪೆಷಾಲಿಟಿ ಕೋರ್ಸ್ ಗಳಿಗೆ ಪ್ರವೇಶ ಪಡೆಯುವ ಅವಧಿಯನ್ನು ಸುಪ್ರೀಂ ಕೋರ್ಟ್ ಫೆ.8 ರವರೆಗೂ ವಿಸ್ತರಿಸಿದೆ.


ಇಂದು ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್ ಈ ಬಗ್ಗೆ ಆದೇಶ ಹೊರಡಿಸಿದೆ. ಈ ಹಿಂದೆ ಕೂಡ ರಾಷ್ಟ್ರೀಯ ವೈದ್ಯಕೀಯ ಮಂಡಳಿಯ ಮನವಿಯನ್ನು ಪುರಸ್ಕರಿಸಿ ಪ್ರವೇಶ ಪಡೆಯುವ ಅವಧಿಯನ್ನು ಆಗಸ್ಟ್ 31 ರಿಂದ ಜನವರಿ 15 ರವರೆಗೂ ವಿಸ್ತರಿಸಿತ್ತು. ಇದೀಗ ಎಂಬಿಬಿಎಸ್ ಪದವಿ ಕೋರ್ಸ್ ಗಳು ಮತ್ತು ಸ್ಪೆಷಾಲಿಟಿ ಕೋರ್ಸ್ ಗಳಿಗೆ ಪ್ರವೇಶ ಪಡೆಯುವ ಅವಧಿಯನ್ನು ಸುಪ್ರೀಂ ಕೋರ್ಟ್ ಫೆ.8 ರವರೆಗೂ ವಿಸ್ತರಿಸಿದೆ.

 114 ಕಾಂಬಾಟ್ ಯುದ್ಧ ವಿಮಾನಗಳ ಸ್ವಾಧೀನಕ್ಕೆ ಮುಂದಾದ 'ಭಾರತೀಯ ವಾಯುಸೇನೆ'

114 ಕಾಂಬಾಟ್ ಯುದ್ಧ ವಿಮಾನಗಳ ಸ್ವಾಧೀನಕ್ಕೆ ಮುಂದಾದ 'ಭಾರತೀಯ ವಾಯುಸೇನೆ'


114 ಕಾಂಬಾಟ್ ಯುದ್ಧ ವಿಮಾನಗಳ ಸ್ವಾಧೀನಕ್ಕೆ ಮುಂದಾದ 'ಭಾರತೀಯ ವಾಯುಸೇನೆ'


ನವದೆಹಲಿ : ಭಾರತೀಯ ವಾಯುಸೇನೆ 83 ಎಲ್ ಸಿ ಎ ತೇಜಸ್ ಮಾರ್ಕ್ ಐ ಎ ಯುದ್ಧ ವಿಮಾನಗಳ ವ್ಯವಹಾರಕ್ಕೆ ಸಹಿ ಹಾಕುವ ಮೂಲಕ ಇದೀಗ 1.3 ಲಕ್ಷ ಕೋಟಿ ವೆಚ್ಚದಲ್ಲಿ 114 ಕಾಂಬಾಟ್ ಯುದ್ಧ ವಿಮಾನಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ.


ಬೆಂಗಳೂರಿನಲ್ಲಿ ನಡೆಯುವ ಏರ್ ಇಂಡಿಯಾ ಶೋ ಕಾರ್ಯಕ್ರಮದಲ್ಲಿ ಇದಕ್ಕೆ ಸಹಿ ಬೀಳಲಿದೆ ಎನ್ನಲಾಗಿದೆ. ಇದು 50,000 ಕೋಟಿಯ ವ್ಯವಹಾರ ಎನ್ನುವ ಮಾಹಿತಿ ಲಭ್ಯವಾಗಿದೆ.


83 ಎಲ್ ಸಿ ಎ ತೇಜಸ್ ಮಾರ್ಕ್ ಐ ಎ ಯುದ್ಧ ವಿಮಾನಗಳ ಪ್ರಾಜೆಕ್ಟ್ ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್ ಕಮಿಟಿಯಲ್ಲಿ ಈಗಾಗಲೇ ಒಪ್ಪಿಗೆ ಸಿಕ್ಕಿದೆ ಎಂಬ ಮಾಹಿತಿ ಲಭ್ಯವಾಗಲಿದೆ.


 ಪ. ಬಂಗಾಳ ಚುನಾವಣೆ ನಡೆಯೋ ಹೊತ್ತಿಗೆ ʼದೀದಿʼ ಒಂಟಿಯಾಗಲಿದ್ದಾರೆ- ಅಮಿತ್ ಶಾ

ಪ. ಬಂಗಾಳ ಚುನಾವಣೆ ನಡೆಯೋ ಹೊತ್ತಿಗೆ ʼದೀದಿʼ ಒಂಟಿಯಾಗಲಿದ್ದಾರೆ- ಅಮಿತ್ ಶಾ


ಪ. ಬಂಗಾಳ ಚುನಾವಣೆ ನಡೆಯೋ ಹೊತ್ತಿಗೆ ʼದೀದಿʼ ಒಂಟಿಯಾಗಲಿದ್ದಾರೆ- ಅಮಿತ್ ಶಾ


ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್ ಹಾಗೂ ಇತರೆ ಪಾರ್ಟಿಯ ನಾಯಕರು ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಯಾಗ್ತಿದ್ದಾರೆ. ಚುನಾವಣೆ ನಡೆಯುವ ಹೊತ್ತಿಗೆ ಮಮತಾ ದೀದಿ ಒಂಟಿಯಾಗಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.


ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಅಮಿತ್ ಶಾ ವಿಡಿಯೋ ಕಾನ್ಫರೆನ್ಸ್ ಮೂಲಕ ಹೌರಾ ಜಿಲ್ಲೆಯ ಜನರನ್ನುದ್ದೇಶಿಸಿ ಮಾತನಾಡಿದ ಗೃಹ ಸಚಿವರು, ' ಮಮತಾ ಬ್ಯಾನರ್ಜಿ ಪ್ರತಿ ಹಂತದಲ್ಲೂ ಪಶ್ಚಿಮ ಬಂಗಾಳವನ್ನ ಹಿಂದುಳಿಯುವಂತೆ ಮಾಡಿದ್ದಾರೆ. ಕೇಂದ್ರದ ಎಷ್ಟೋ ಯೋಜನೆಗಳು ರಾಜ್ಯದಲ್ಲಿ ಜಾರಿಯಾಗಿಲ್ಲ. ಈ ರಾಜ್ಯದ ಜನರು ಅವರನ್ನ ಎಂದಿಗೂ ಕ್ಷಮಿಸೋದಿಲ್ಲ' ಎಂದು ಕಿಡಿಕಾರಿದರು.


ಪರೋಕ್ಷವಾಗಿಯೂ ʼಅತ್ಯಾಚಾರ ಸಂತ್ರಸ್ತೆʼಯ ಗುರುತು ಬಹಿರಂಗ ಪಡಿಸ್ಬೇಡಿ: ಮಾಧ್ಯಮಗಳಿಗೆ ʼಬಾಂಬೆ ಹೈಕೋರ್ಟ್ʼ ಸೂಚನೆ


ಇನ್ನು ಮಾತು ಮುಂದುವರೆಸಿದ ಅಮಿತ್‌ ಶಾ, 'ದೀದಿ ರೈತರ ಹೆಸರುಗಳನ್ನಷ್ಟೇ ಕೇಂದ್ರಕ್ಕೆ ನೀಡಿದ್ದಾರೆ. ಆದ್ರೆ, ಅವರ ಅಕೌಂಟ್​ ನಂಬರ್​ಗಳನ್ನ ನೀಡಿಲ್ಲ. ಅಕೌಂಟ್ ನಂಬರ್ ಇಲ್ಲದೇ ರೈತರ ಖಾತೆಗೆ ಹಣ ಹಾಕದಾದ್ರೂ ಹೇಗೆ..? ಅವ್ರು 10 ವರ್ಷಗಳಿಂದ ಇಲ್ಲಿ ಸರ್ಕಾರ ನಡೆಸುತ್ತಿದ್ದು, 10 ವರ್ಷಗಳಲ್ಲಿ ಈ ರಾಜ್ಯದಲ್ಲಾದ ಬದಲಾವಣೆ ಅಂದ್ರೆ ಟಿಎಂಸಿ ನಾಯಕರು ಬಿಜೆಪಿ ಸೇರಿಕೊಂಡಿದ್ದಷ್ಟೇ ಎಂದರು.


 'ಮನ್ ಕಿ ಬಾತ್' ನಲ್ಲಿ ಆಸ್ಟ್ರೇಲಿಯದಲ್ಲಿ ಟೀಮ್ ಇಂಡಿಯಾ ಸಾಧನೆ ಶ್ಲಾಘಿಸಿದ ಪ್ರಧಾನಿ

'ಮನ್ ಕಿ ಬಾತ್' ನಲ್ಲಿ ಆಸ್ಟ್ರೇಲಿಯದಲ್ಲಿ ಟೀಮ್ ಇಂಡಿಯಾ ಸಾಧನೆ ಶ್ಲಾಘಿಸಿದ ಪ್ರಧಾನಿ

 'ಮನ್ ಕಿ ಬಾತ್' ನಲ್ಲಿ ಆಸ್ಟ್ರೇಲಿಯದಲ್ಲಿ ಟೀಮ್ ಇಂಡಿಯಾ ಸಾಧನೆ ಶ್ಲಾಘಿಸಿದ ಪ್ರಧಾನಿ 

ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ತಿಂಗಳ ರೇಡಿಯೊ ಕಾರ್ಯಕ್ರಮ 'ಮನ್ ಕಿ ಬಾತ್' ನಲ್ಲ್ಲಿ ಆಸ್ಟ್ರೇಲಿಯ ನೆಲದಲ್ಲಿ ಆಸ್ಟ್ರೇಲಿಯದ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಜಯಿಸಿರುವ ಟೀಮ್ ಇಂಡಿಯಾದ ಸಾಧನೆಯನ್ನು ಕೊಂಡಾಡಿದರು. ಈ ತಂಡದ ಕಠಿಣ ಪರಿಶ್ರಮ ಹಾಗೂ ಸಂಘಟಿತ ಪ್ರದರ್ಶನ ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದರು.

ನಾವು ಈ ತಿಂಗಳು ಕ್ರಿಕೆಟ್ ಪಿಚ್ ನಿಂದ ಸಿಹಿಸುದ್ದಿ ಪಡೆದಿದ್ದೆವು. ಆರಂಭದಲ್ಲಿ ಏರಿಳಿತ ಕಂಡ ಭಾರತೀಯ ಕ್ರಿಕೆಟ್ ತಂಡ ದಿಟ್ಟವಾಗಿ ಮರು ಹೋರಾಟ ನೀಡಿತು. ಆಸ್ಟ್ರೇಲಿಯದಲ್ಲಿ ಸರಣಿಯನ್ನು ಜಯಿಸಿತು. ನಮ್ಮ ತಂಡದ ಕಠಿಣ ಪರಿಶ್ರಮ ಹಾಗೂ ಟೀಮ್ ವರ್ಕ್  ಸ್ಫೂರ್ತಿದಾಯಕವಾಗಿದೆ ಎಂದರು.

ಟೀಮ್ ಇಂಡಿಯಾವನ್ನು ಹೊಗಳಿದ ಪ್ರಧಾನಿ ಮೋದಿಗೆ ಬಿಸಿಸಿಐ ಧನ್ಯವಾದ ತಿಳಿಸಿದೆ.

 ಆಡಳಿತಾಧಿಕಾರಿ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಕೇರಳ ಮಾಜಿ ಸಿಎಂ ಅಚ್ಯುತಾನಂದನ್ ರಾಜೀನಾಮೆ

ಆಡಳಿತಾಧಿಕಾರಿ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಕೇರಳ ಮಾಜಿ ಸಿಎಂ ಅಚ್ಯುತಾನಂದನ್ ರಾಜೀನಾಮೆ

 

ಆಡಳಿತಾಧಿಕಾರಿ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಕೇರಳ ಮಾಜಿ ಸಿಎಂ ಅಚ್ಯುತಾನಂದನ್ ರಾಜೀನಾಮೆ

ತಿರುವನಂತಪುರ: ಹಿರಿಯ ಸಿಪಿಎಂ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಅವರು ಆರೋಗ್ಯದ ದೃಷ್ಟಿಯಿಂದ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹುದ್ದೆಯನ್ನು ತ್ಯಜಿಸಿದ್ದಾರೆ.

ಅಚ್ಯುತಾನಂದನ್ ಅವರು ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಇದು ಆಯೋಗದ ಚಟುವಟಿಕೆಗಳ ಮೇಲೆ ಭಾರೀ ಪರಿಣಾಮಬೀರಿತ್ತು.  ಮೆದುಳು ರಕ್ತಸ್ರಾವದ ನಂತರ ಕಳೆದ ಅಕ್ಟೋಬರ್ ನಲ್ಲಿ 97ನೇ ವರ್ಷಕ್ಕೆ ಕಾಲಿಟ್ಟ ಅನುಭವಿ ನಾಯಕನಿಗೆ ಸಂಪೂರ್ಣ ವಿಶ್ರಾಂತಿ ಹಾಗೂ ನಿರಂತರ ವೈದ್ಯಕೀಯ ಆರೈಕೆಯನ್ನು ವೈದ್ಯರು ಶಿಫಾರಸು ಮಾಡಿದ್ದರು.

ನಾನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆ ರಾಜೀನಾಮೆ ಸಲ್ಲಿಸಿದ್ದು, ಅನಾರೋಗ್ಯದಿಂದಾಗಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ ಎಂದು ಅಚ್ಯುತಾನಂದನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

 ರೈತರ ಹೋರಾಟಕ್ಕೆ ಏಕತೆ ಪ್ರದರ್ಶಿಸಲು ಸರ್ವಪಕ್ಷ ಸಭೆ ಕರೆದ ಅಮರಿಂದರ್ ಸಿಂಗ್

ರೈತರ ಹೋರಾಟಕ್ಕೆ ಏಕತೆ ಪ್ರದರ್ಶಿಸಲು ಸರ್ವಪಕ್ಷ ಸಭೆ ಕರೆದ ಅಮರಿಂದರ್ ಸಿಂಗ್


 ರೈತರ ಹೋರಾಟಕ್ಕೆ ಏಕತೆ ಪ್ರದರ್ಶಿಸಲು ಸರ್ವಪಕ್ಷ ಸಭೆ ಕರೆದ ಅಮರಿಂದರ್ ಸಿಂಗ್

ಚಂಡೀಗಡ: ದಿಲ್ಲಿ ಗಡಿಯಲ್ಲಿರುವ ತಮ್ಮ ಪ್ರತಿಭಟನಾ ಸ್ಥಳದಲ್ಲಿ ಪಂಜಾಬ್ ನ ರೈತರನ್ನು ಪೊಲೀಸರು ಥಳಿಸಿದ್ದಾರೆ ಹಾಗೂ ಗೂಂಡಾಗಳಿಂದ ಹಲ್ಲೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಮಂಗಳವಾರ ಸರ್ವಪಕ್ಷ ಸಭೆ ಕರೆದು ಏಕತೆ ತೋರಿಸಲು ಹಾಗೂ ಮೂರು ವಿವಾದಾತ್ಮಕ ಕೇಂದ್ರ ಕೃಷಿ ಕಾನೂನುಗಳ ಕುರಿತು ಮುಂದಿನ ಹಾದಿಯಲ್ಲಿ ಒಮ್ಮತ ರೂಪಿಸಲು ನಿರ್ಧರಿಸಿದ್ದಾರೆ.

ರವಿವಾರ ಹೊರಡಿಸಲಾಗಿರುವ ಸರಕಾರದ ಹೇಳಿಕೆಯಲ್ಲಿ ಸಭೆಯು ಬೆಳಗ್ಗೆ 11ಕ್ಕೆ ಪಂಜಾಬ್ ಭವನದಲ್ಲಿ ನಡೆಯಲಿದೆ.

ಇದು ಅಹಂಕಾರ ಪ್ರದರ್ಶಿಸುವ ಸಮಯವಲ್ಲ. ಆದರೆ ಇದು ನಮ್ಮ ರಾಜ್ಯ ಹಾಗೂ ನಮ್ಮ ಜನರನ್ನು ಉಳಿಸಲು ಒಗ್ಗೂಡಬೇಕಾದ ಸಮಯ. ರೈತರಿಗೆ ಬೆಂಬಲವಾಗಿ  ಹಾಗೂ ಪಂಜಾಬ್ ಹಿತದೃಷ್ಟಿಯಿಂದ ಎಲ್ಲಾ ಪಕ್ಷಗಳು ಏಕತೆಯ ಮನೋಭಾವದಿಂದ ಸಭೆಗೆ ಸೇರಬೇಕೆಂದು ಎಂದು ಸಿಎಂ ಅಮರಿಂದರ್ ಎಲ್ಲ ಪಕ್ಷಗಳಿಗೆ ಆಗ್ರಹಿಸಿದರು.

Saturday, 30 January 2021

 ದೇಶದ್ರೋಹ ಪ್ರಕರಣಗಳ ವಿರುದ್ಧ ಪತ್ರಕರ್ತರು ಒಂದೇ ಧ್ವನಿಯಲ್ಲಿ ಪ್ರತಿಭಟಿಸುವ ಸಮಯ ಬಂದಿದೆ: ರಾಜ್ ದೀಪ್ ಸರ್ದೇಸಾಯಿ

ದೇಶದ್ರೋಹ ಪ್ರಕರಣಗಳ ವಿರುದ್ಧ ಪತ್ರಕರ್ತರು ಒಂದೇ ಧ್ವನಿಯಲ್ಲಿ ಪ್ರತಿಭಟಿಸುವ ಸಮಯ ಬಂದಿದೆ: ರಾಜ್ ದೀಪ್ ಸರ್ದೇಸಾಯಿ


 ದೇಶದ್ರೋಹ ಪ್ರಕರಣಗಳ ವಿರುದ್ಧ ಪತ್ರಕರ್ತರು ಒಂದೇ ಧ್ವನಿಯಲ್ಲಿ ಪ್ರತಿಭಟಿಸುವ ಸಮಯ ಬಂದಿದೆ: ರಾಜ್ ದೀಪ್ ಸರ್ದೇಸಾಯಿ

ಹೊಸದಿಲ್ಲಿ: ದೇಶದ್ರೋಹ ಪ್ರಕರಣವನ್ನು ಎಲ್ಲಿ ಎದುರಿಸಬೇಕೋ ಅಲ್ಲಿ ಎದುರಿಸುತ್ತೇವೆ. ಇಂದು ಪತ್ರಕರ್ತರು ಸಂಕಷ್ಟದಲ್ಲಿದ್ದಾರೆ.‌ ದೇಶದ್ರೋಹ ಪ್ರಕರಣಗಳ ವಿಚಾರದಲ್ಲಿ ಎಲ್ಲ ಪತ್ರಕರ್ತರ ಅಭಿಪ್ರಾಯ ಒಂದೇ ಆಗಿರಬೇಕು ಎಂದು ಹಿರಿಯ ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ ಹೇಳಿದ್ದಾರೆ.

ಪತ್ರಕರ್ತರು ಮತ್ತು ಇತರರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿರುವ ಬಗ್ಗೆ ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ್ರೋಹದ ಪ್ರಕರಣದಲ್ಲಿ ಹೇಳುವುದಾದರೆ ನೀವು ಮಣಿಪುರದಲ್ಲಿ ಪತ್ರಕರ್ತರಾಗಿರಬಹುದು ಅಥವಾ ಕಾಶ್ಮೀರದ ಪತ್ರಕರ್ತರಾಗಿರಬಹುದು. ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ಅಥವಾ ಬಿಜೆಪಿ ಆಡಳಿತದ ರಾಜ್ಯದಲ್ಲಿ ಪತ್ರಕರ್ತರಾಗಿರಬಹುದು. ದೇಶದ್ರೋಹ ಪ್ರಕರಣಗಳ ವಿಚಾರದಲ್ಲಿ ಎಲ್ಲ ಪತ್ರಕರ್ತರ ಅಭಿಪ್ರಾಯ ಒಂದೇ ಆಗಿರಬೇಕು ಎಂದರು.

ಪತ್ರಕರ್ತರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸುವುದು ಸ್ವೀಕಾರಾರ್ಹವಲ್ಲ ಎಂದು ಎಲ್ಲಾ ಪತ್ರಕರ್ತರು ಒಂದೇ ಧ್ವನಿಯಲ್ಲಿ ಪ್ರತಿಭಟಿಸುವ ಸಮಯ ಬಂದಿದೆ. ಈ ವಿಚಾರ ಬಂದಾಗ ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆಯಬೇಕು. ಮಣಿಪುರದಲ್ಲಿ ಪತ್ರಕರ್ತರನ್ನು ಜೈಲಿಗಟ್ಟಲಾಗುತ್ತಿದೆ. ಕಾಶ್ಮೀರವಾಗಲೀ, ದೇಶದ ಎಲ್ಲೇ ಆಗಲಿ. ಇಂತಹ ಘಟನೆಗಳು ನಡೆಯುತ್ತಿವೆ ಎಂದವರು ಹೇಳಿದರು.

ಈ ಒಂದು ವಿಚಾರದಲ್ಲಿ ಪತ್ರಕರ್ತರೆಲ್ಲರೂ ಒಂದಾಗಬೇಕು. ನಮ್ಮಲ್ಲಿ ಭಿನ್ನಾಭಿಪ್ರಾಯಗಳು ಇರಬಹುದು. ಹಲವು ವಿಚಾರಗಳಿಗೆ ಸಂಬಂಧಿಸಿ ನಾವು ಜಗಳ ಮಾಡಿಕೊಳ್ಳಬಹುದು. ಪತ್ರಕರ್ತರಾಗಿ ನಮ್ಮಿಂದ ತಪ್ಪುಗಳಾಗಬಹುದು. ಆ ತಪ್ಪುಗಳನ್ನು ನಾವು ತಿದ್ದಿಕೊಳ್ಳಬಹುದು. ಆದರೆ ಪತ್ರಕರ್ತರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸುವುದು ಸರಿಯಲ್ಲ. ಬಿಜೆಪಿ ಇರಲಿ, ಕಾಂಗ್ರೆಸ್ ಇರಲಿ, ಯಾವುದೇ ಸರಕಾರಗಳಾಗಲಿ, ಅವು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತವೆ ಎಂದು ರಾಜ್ ದೀಪ್ ಹೇಳಿದರು.

ನಂತರ ಮಾತನಾಡಿದ ಹಿರಿಯ ಪತ್ರಕರ್ತ, ಹಿರಿಯ ಲೇಖಕ ಶೇಖರ್ ಗುಪ್ತಾ, “ದೇಶದ್ರೋಹ ಬಿಡಿ, ಈ ಪತ್ರಕರ್ತರ ವಿರುದ್ಧ ದೇಶದ ಯಾವುದೇ ಕಾನೂನಿನಡಿ ಕ್ರಮ‌ ಕೈಗೊಳ್ಳಲು ಸಾಧ್ಯವಿಲ್ಲ. ದೇಶದ್ರೋಹ ಪ್ರಕರಣವು ಅತ್ಯಂತ ಗಂಭೀರ ಪ್ರಕರಣ. ಪತ್ರಕರ್ತರಾಗಿ ತಪ್ಪುಗಳು ಸಹಜ. ಆದರೆ ಅವು ಅಪರಾಧವಲ್ಲ. ತಪ್ಪುಗಳನ್ನು ಪತ್ರಕರ್ತರು ತಿದ್ದಿಕೊಳ್ಳುತ್ತಾರೆ ಎಂದರು.

ಎರಡನೆಯದಾಗಿ ಪತ್ರಕರ್ತರ ಮೇಲಿನ ದೇಶದ್ರೋಹ ಪ್ರಕರಣಗಳು ಎಲ್ಲಾ ಪತ್ರಕರ್ತರಿಗೆ ಎಚ್ಚರಿಕೆಯಾಗಿದೆ. ನೀವು ಅವರು ಹೇಳಿದ ಹಾಗೆ ಕೇಳಿಕೊಂಡು ಇರದಿದ್ದರೆ ದೇಶದಲ್ಲಿರುವ ಕೆಟ್ಟ ಕಾನೂನುಗಳ ಮೂಲಕ ಅಂದರೆ‌ ಕಠಿಣ, ಜೀವಾವಧಿ ಶಿಕ್ಷೆಗಳನ್ನೂ ಒಳಗೊಂಡ ಕಾನೂನುಗಳಡಿ ಪ್ರಕರಣ ದಾಖಲಿಸಲಾಗುತ್ತಿದೆ. ಆದರೆ ನ್ಯಾಯಾಲಯಗಳಲ್ಲಿ ಇಂತಹ ಪ್ರಕರಣಗಳು ನಿಲ್ಲುವುದಿಲ್ಲ. ಆದರೆ ಈ ಪ್ರಕರಣಗಳ ಪ್ರಕ್ರಿಯೆಯೇ ಶಿಕ್ಷೆಯಂತಿರುತ್ತದೆ‌. ಈಗಾಗಲೇ ಹಲವರು ಇದನ್ನು ಎದುರಿಸಿದ್ದಾರೆ‌ ಎಂದರು.

ಮೂರನೆಯದಾಗಿ ನಾವೆಲ್ಲರೂ ಪತ್ರಕರ್ತರು. ನಾವು ಚಿಂತನೆಗಳು ಮತ್ತು ವಾದ-ವಿವಾದಗಳ ಜಗತ್ತಿ‌ನಲ್ಲಿ ಬದುಕುವವರು. ನಾವು ಪರಸ್ಪರ ವಾದ ವಿವಾದಗಳನ್ನು ನಡೆಸುತ್ತೇವೆ. ಪರಸ್ಪರರನ್ನು ಒಪ್ಪುವುದಿಲ್ಲ. ಆದರೆ‌ ನಾವು ಮಾಧ್ಯಮಗಳನ್ನು ಬಲಹೀನ ಮಾಡುವ ಯಾವುದೇ ಚಿಂತನೆಗಳನ್ನು ಒಪ್ಪಬಾರದು.‌ ಅಭಿವ್ಯಕ್ತಿ ಸ್ವಾತಂತ್ರ್ಯ, ಮಾಧ್ಯಮ ಸ್ವಾತಂತ್ರ್ಯ ಎಂಬ ವಿಷಯವೂ ಇದೆ. ನಮ್ಮಲ್ಲಿ ಏಕತೆ ಬೇಕು ಎಂದರು.

 ರೈತರನ್ನು ಪ್ರಚೋದಿಸುವ ಪಿತೂರಿ ವಿರುದ್ಧ ಮುಖಂಡರ ಎಚ್ಚರಿಕೆ

ರೈತರನ್ನು ಪ್ರಚೋದಿಸುವ ಪಿತೂರಿ ವಿರುದ್ಧ ಮುಖಂಡರ ಎಚ್ಚರಿಕೆ

 

ರೈತರನ್ನು ಪ್ರಚೋದಿಸುವ ಪಿತೂರಿ ವಿರುದ್ಧ ಮುಖಂಡರ ಎಚ್ಚರಿಕೆ

ಹೊಸದಿಲ್ಲಿ, ಜ.31: ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಪ್ರಚೋದಿಸುವ ಪಿತೂರಿ ನಡೆದಿದೆ ಎಂದು ರೈತ ಮುಖಂಡ ಬಲಬೀರ್ ಸಿಂಗ್ ರಾಜೇವಾಲ ಗಂಭೀರ ಆರೋಪ ಮಾಡಿದ್ದಾರೆ. ಆದರೆ ರೈತರು ಯಾವುದೇ ಹಿಂಸಾಕೃತ್ಯದಲ್ಲಿ ತೊಡಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

"ದಿಲ್ಲಿಯ ಗಡಿಗಳಲ್ಲಿ ನಾವು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೇವೆ. ಶನಿವಾರವೂ ಪ್ರತಿಭಟನೆ ಶಾಂತಿಯುತವಾಗಿತ್ತು" ಎಂದು ಭಾರತೀಯ ಕಿಸಾನ್ ಯೂನಿಯನ್ (ರಾಜೇವಾಲ್) ಸಂಘಟನೆಯ ಅಧ್ಯಕ್ಷರೂ ಆಗಿರುವ ಅವರು ಹೇಳಿದರು.

ಶಾಂತಿಯುತವಾಗಿ ಪ್ರತಿಭಟನೆ ಮುಂದುವರಿಸುವ ಅಗತ್ಯವನ್ನು ಒತ್ತಿ ಹೇಳಿದ ಅವರು, "ದಿಲ್ಲಿಯಲ್ಲಿ ನಡೆಯುತ್ತಿರುವ ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ನಾನು ರೈತರನ್ನು ಕೋರುತ್ತಿದ್ದೇನೆ. ಆದರೆ ನಿಮ್ಮನ್ನು ಕೆಲವರು ಪ್ರಚೋದಿಸಿದರೂ, ಭಾವೋದ್ರೇಕದಿಂದ ಯಾವುದೇ ಕ್ರಮ ಕೈಗೊಳ್ಳಬೇಡಿ ಎಂದು ಮನವಿ ಮಾಡುತ್ತೇನೆ. ನಾವು ಯುದ್ಧಕ್ಕೆ ಹೋಗುತ್ತಿಲ್ಲ. ಇದು ನಮ್ಮ ದೇಶ ಮತ್ತು ನಮ್ಮ ಸರಕಾರ ಎನ್ನುವುದು ಮನಸ್ಸಿನಲ್ಲಿರಲಿ" ಎಂದು ಅಭಿಪ್ರಾಯಪಟ್ಟರು.

ಸ್ಥಳೀಯರು ಎಂದು ಹೇಳಿಕೊಂಡ ಗುಂಪು ಪ್ರತಿಭಟನಾಕಾರರ ಮೇಲೆ ಕಲ್ಲೆಸೆದ ಪ್ರಕರಣದ ಬೆನ್ನಲ್ಲೇ ರಾಜೇವಾಲ ಈ ಹೇಳಿಕೆ ನೀಡಿರುವುದಕ್ಕೆ ವಿಶೇಷ ಮಹತ್ವ ಬಂದಿದೆ. ಸ್ಥಳೀಯರು ರೈತರ ಜತೆಗಿದ್ದಾರೆ ಎಂದು ಪ್ರತಿಪಾದಿಸಿದ ಅವರು, ಸಿಂಘು ಗಡಿಯ ಘಟನೆಯ ಹಿಂದಿರುವವರು ಬಿಜೆಪಿ ಮತ್ತು ಆರೆಸ್ಸೆಸ್ ಮಂದಿ ಎಂದು ಆಪಾದಿಸಿದರು.

"ಸರಕಾರ ನಮ್ಮನ್ನು ಹಿಂಸೆಗೆ ಪ್ರಚೋದಿಸುತ್ತಿದೆ. ಆದರೆ ನಾವು ಯಾವುದೇ ಹಿಂಸಾಕೃತ್ಯದಲ್ಲಿ ತೊಡಗುವುದಿಲ್ಲ. ಯವುದೇ ಹಿಂಸೆ ತಡೆಯಲು ನಾವು ಎಚ್ಚರದಿಂದ ಇದ್ದೇವೆ" ಎಂದು ಸ್ಪಷ್ಟಪಡಿಸಿದರು.

 ಪ್ರತಿಭಟನಾನಿರತ ರೈತರ ಕುಡಿಯುವ ನೀರಿನ ಟ್ಯಾಂಕ್ ತಡೆದ ಪೊಲೀಸರು!

ಪ್ರತಿಭಟನಾನಿರತ ರೈತರ ಕುಡಿಯುವ ನೀರಿನ ಟ್ಯಾಂಕ್ ತಡೆದ ಪೊಲೀಸರು!

 

ಪ್ರತಿಭಟನಾನಿರತ ರೈತರ ಕುಡಿಯುವ ನೀರಿನ ಟ್ಯಾಂಕ್ ತಡೆದ ಪೊಲೀಸರು!

ಪಂಚಕುಲ, ಜ.31: ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಕುಡಿಯುವ ನೀರು ಪೂರೈಸುವ ಟ್ಯಾಂಕರ್‌ಗಳನ್ನು ಕೂಡಾ ಪೊಲೀಸರು ತಡೆಯುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಮತ್ತು ದಿಲ್ಲಿ ಸಚಿವ ಸತ್ಯೇಂದ್ರ ಜೈನ್ ಗಂಭೀರ ಆರೋಪ ಮಾಡಿದ್ದಾರೆ.

"ಸಿಂಘು ಗಡಿಯಲ್ಲಿ ನೀರಿನ ಸಮಸ್ಯೆ ಬಗ್ಗೆ ರೈತರಿಂದ ನಮಗೆ ಕರೆ ಬರುತ್ತಿದೆ. ನಾನು ಸ್ವತಃ ಸ್ಥಳಕ್ಕೆ ಭೇಟಿ ನೀಡಿ ನೂರಾರು ಟ್ಯಾಂಕರ್ ನೀರನ್ನು ಅವರಿಗೆ ಕಳುಹಿಸಿದ್ದೇನೆ. ಆದರೆ ಬಿಜೆಪಿಯ ಸೂಚನೆಯಂತೆ ಈ ನೀರಿನ ಟ್ಯಾಂಕರ್‌ಗಳು ರೈತರನ್ನು ತಲುಪದಂತೆ ದಿಲ್ಲಿ ಪೊಲೀಸರು ತಡೆಯುತ್ತಿದ್ದಾರೆ" ಎಂದು ಅವರು ಆಪಾದಿಸಿದ್ದಾರೆ.

ಆಹಾರ ಧಾನ್ಯಗಳು, ಶೌಚಾಲಯ ಸ್ವಚ್ಛಗೊಳಿಸವ ಯಂತ್ರಗಳು ಮತ್ತು ವೈದ್ಯರನ್ನು ಕೂಡಾ ಪೊಲೀಸರು ತಡೆಯುತ್ತಿದ್ದು, ದಿಲ್ಲಿ ಸರಕಾರ ಪೂರೈಸುತ್ತಿರುವ ಈ ಸೌಲಭ್ಯಗಳು ರೈತರನ್ನು ತಲುಪದಂತೆ ತಡೆಯುತ್ತಿದ್ದಾರೆ ಎಂದು ಹೇಳಿದರು.

ಪ್ರತಿಭಟನಾ ಸ್ಥಳದಲ್ಲಿ ದೂರ ಸಂಪರ್ಕ ಸೇವೆಯನ್ನು ರದ್ದುಪಡಿಸಿರುವ, ರೈತರ ಮೇಲೆ ಅಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗಿಸಿರುವ ಹರ್ಯಾಣ ಸರಕಾರದ ಕ್ರಮವನ್ನು ಸಚಿವರು ಕಟುವಾಗಿ ಟಿಕಿಸಿದರು.

"ಜೆಜೆಪಿ ಮತ್ತು ಖಟ್ಟರ್ ಸರಕಾರಗಳೆರಡೂ ರೈತರನ್ನು ದಮನಿಸುತ್ತಿವೆ. ನಾವು ರೈತರ ಜತೆ ಇದ್ದೇವೆ ಎಂದು ಅವರು ಹೇಳಿಕೊಳ್ಳುತ್ತಾರೆ. ಆದರೆ ಅದಕ್ಕೆ ವಿರುದ್ಧವಾದ್ದನ್ನು ಮಾಡುತ್ತಾರೆ. ಜೆಜೆಪಿ ರೈತರ ಮೇಲೆ ಅಶ್ರುವಾಯು ಮತ್ತು ಜಲಫಿರಂಗಿ ದಾಳಿ ನಡೆಸುವಂತೆ ಸೂಚಿಸುತ್ತಿದೆ" ಎಂದು ಹೇಳಿದರು.

 ಮಹಾರಾಷ್ಟ್ರ ಸಿಎಂ ಉದ್ದಟತನವನ್ನು ಸಹಿಸಲು ಸಾಧ್ಯವಿಲ್ಲ : ಸಿದ್ದರಾಮಯ್ಯ

ಮಹಾರಾಷ್ಟ್ರ ಸಿಎಂ ಉದ್ದಟತನವನ್ನು ಸಹಿಸಲು ಸಾಧ್ಯವಿಲ್ಲ : ಸಿದ್ದರಾಮಯ್ಯ


 ಮಹಾರಾಷ್ಟ್ರ ಸಿಎಂ ಉದ್ದಟತನವನ್ನು ಸಹಿಸಲು ಸಾಧ್ಯವಿಲ್ಲ : ಸಿದ್ದರಾಮಯ್ಯ

ಬೆಂಗಳೂರು,ಜ.31- ಗಡಿಯ ವಿಚಾರವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಅನಗತ್ಯವಾಗಿ ಮಾತನಾಡುತ್ತಿದ್ದಾರೆ. ಇವರ ಉದ್ದಟತನವನ್ನು ಸಹಿಸಲು ಸಾಧ್ಯವಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 190ನೇ ಹುತಾತ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಮಹಾರಾಷ್ಟ್ರದ ಮುಖ್ಯಮಂತ್ರಿ ತಮ್ಮ ಉಳಿವಿಗಾಗಿ ಗಡಿ ವಿಚಾರವನ್ನು ಬಳಸಿಕೊಳ್ಳುತ್ತಿದ್ದಾರೆ. ಇಲ್ಲಿನ ಒಂದೇ ಒಂದು ಇಂಚು ಜಾಗ ಸಹ ಮಹಾರಾಷ್ಟ್ರಕ್ಕೆ ಸೇರಿದ್ದಲ್ಲ. ಕನ್ನಡಿಗರಾದ ನಾವು ನಮ್ಮ ನೆಲ, ನೀರು, ಸಂಸ್ಕøತಿ ಮತ್ತು ಭಾಷೆಯನ್ನು ರಕ್ಷಿಸುವ ಜವಾಬ್ದಾರಿ ಹೊಂದಿದ್ದೇವೆ ಎಂದರು.

ಬೆಳಗಾವಿ ಸೇರಿದಂತೆ ಗಡಿಯ ಎಲ್ಲಾ ಜಿಲ್ಲೆಗಳು ಕರ್ನಾಟಕದ ಅವಿಭಾಜ್ಯ ಅಂಗ. ಆದರೆ ಉದ್ಧವ್ ಠಾಕ್ರೆ ಅವರು ಮಾತ್ರ ಈ ವಿಚಾರದಲ್ಲಿ ಇಲ್ಲಸಲ್ಲದ ಹೇಳಿಕೆ ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು.

ನಮ್ಮ ಸ್ಥಳಗಳ ಬಗ್ಗೆ ಮಾತನಾಡುವ ಯಾವುದೇ ಹಕ್ಕು ಅವರಿಗಿಲ್ಲ. ನಮ್ಮ ಔದಾರ್ಯದಿಂದಾಗಿ ನಾವು ಅನ್ಯ ಭಾಷಿಗರೊಂದಿಗೂ ನಾವು ಅವರ ಭಾಷೆಯಲ್ಲೇ ಮಾತನಾಡುತ್ತೇವೆ. ಇದು ನಮ್ಮಲ್ಲಿನ ಕೊರತೆ. ಆದರೆ ಕನ್ನಡ ನಾಡಿನಲ್ಲಿ ಕನ್ನಡವೇ ಅನಿವಾರ್ಯ ಎಂಬ ವಾತಾವರಣ ನಿರ್ಮಾಣವಾಗಬೇಕು ಎಂದು ಅಭಿಪ್ರಾಯಪಟ್ಟರು.

ನಿತ್ಯ ಒಂದೊಂದು ವಿಷಯವಾಗಿ ಮಹಾರಾಷ್ಟ್ರ ಸಿಎಂ ಕ್ಯಾತೆ ತೆಗೆಯುತ್ತಿದ್ದಾರೆ. ಸುಪ್ರೀಂಕೋರ್ಟ್‍ನಲ್ಲಿರುವ ಗಡಿ ತಕರಾರಿನ ಬಗ್ಗೆ ತೀರ್ಪು ಬರುವವರೆಗೂ ಕಾಯಲೇಬೇಕು. ಅನಗತ್ಯವಾಗಿ ಕಾಲು ಕೆರೆದುಕೊಂಡುಬಂದರೆ ನಾವು ಸಿಂಹಸ್ವಪ್ನವಾಗಬೇಕಾಗುತ್ತದೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಎಚ್ಚರಿಸಿದರು.

ಸಮಾರಂಭದಲ್ಲಿ ವೇದಿಕೆಯ ಯುವ ಘಟಕದ ಅಧ್ಯಕ್ಷ ಟಿ.ಎ.ಧರ್ಮರಾಜ್ ಗೌಡ, ಎಚ್.ರವೀಂದ್ರ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಮತ್ತಿತರರು ಇದ್ದರು.

 ರಾಯ್ತ ತಯಾರಿಸಿ ಬಿರಿಯಾನಿ ಸವಿದ ರಾಹುಲ್​- 'ನಲ್ಲ ಇರಕು', ಅಮೆರಿಕಕ್ಕೂ ಕಳಿಸ್ತೇನೆ ಎಂದರು!

ರಾಯ್ತ ತಯಾರಿಸಿ ಬಿರಿಯಾನಿ ಸವಿದ ರಾಹುಲ್​- 'ನಲ್ಲ ಇರಕು', ಅಮೆರಿಕಕ್ಕೂ ಕಳಿಸ್ತೇನೆ ಎಂದರು!


 ರಾಯ್ತ ತಯಾರಿಸಿ ಬಿರಿಯಾನಿ ಸವಿದ ರಾಹುಲ್​- 'ನಲ್ಲ ಇರಕು', ಅಮೆರಿಕಕ್ಕೂ ಕಳಿಸ್ತೇನೆ ಎಂದರು!

ಚೆನ್ನೈ: ತಮಿಳುನಾಡಿನ ಪ್ರವಾಸದಲ್ಲಿದ್ದ ಸಂಸದ ರಾಹುಲ್​ಗಾಂಧಿ ಇದಾಗಲೇ ಹಲವಾರು ವಿಡಿಯೋಗಳ ಮೂಲಕ ಭಾರಿ ಸುದ್ದಿಯಲ್ಲಿದ್ದಾರೆ. ದಿನವೂ ಅವರು ಮಾಡಿರುವ ಭಾಷಣಗಳ ವಿಡಿಯೋ ಟ್ರೋಲ್​ ಆಗುತ್ತಲೇ ಇವೆ. ಈ ಬಾರಿ ತಮಿಳಿನ ಚಾನೆಲ್​ ಒಂದರಲ್ಲಿ ಬಿರಿಯಾನಿಗಾಗಿ ಖುದ್ದು ರಾಯತ ತಯಾರಿಸಿ, ಅದನ್ನು ಸವಿದಿದ್ದಾರೆ. ಇದರ ವಿಡಿಯೋ ಈಗ ವೈರಲ್​ ಆಗಿದೆ.

ತಮಿಳಿನ 'ವಿಲೇಜ್ ಕುಕ್ಕಿಂಗ್' ಯುಟ್ಯೂಬ್​ ಚಾನೆಲ್​ನಲ್ಲಿ ಕಾಣಿಸಿಕೊಂಡಿರುವ ರಾಹುಲ್​, ಅಲ್ಲಿ ಅಣಬೆಯ ಬಿರಿಯಾನಿ ಸವಿದಿದ್ದಾರೆ. ಚಾಪೆಯ ಮೇಲೆ ಕುಳಿತು ಗ್ರಾಮಸ್ಥರ ಜತೆ ಚರ್ಚಿಸುತ್ತಾ, ಬಿರಿಯಾನಿ ಸವಿಯುತ್ತಿರುವ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ.

ಬಿರಿಯಾನಿ ಸವಿಯುಂಡ ರಾಹುಲ್ ಗಾಂಧಿ ತಮಿಳಿನಲ್ಲಿ 'ನಲ್ಲ ಇರಕು' (ಇದು ಚೆನ್ನಾಗಿದೆ) ಎಂದು ಹೇಳಿರುವುದನ್ನು ವಿಡಿಯೋದಲ್ಲಿ ಕೇಳಬಹುದು. ಕಾಡಿನ ಮಧ್ಯೆ ಸೌದೆ ಒಲೆಯಲ್ಲಿ ಸಿದ್ಧವಾದ ಬಿರಿಯಾನಿಯನ್ನು ಬಾಳೆ ಎಲೆಯಲ್ಲಿ ಬಡಿಸಿಕೊಂಡು ಸವಿದರು.

ಸೌದೆ ಒಲೆಯಲ್ಲಿ ದೊಡ್ಡದಾದ ಬಾಣಲಿಯಲ್ಲಿ ತಯಾರಾದ ಈ ಬಿರಿಯಾನಿಯನ್ನು ಮೆಚ್ಚಿಕೊಂಡ ಅವರು, ಅದನ್ನು ಸಿದ್ಧಪಡಿಸುವ ಬಗೆಯನ್ನೂ ತಿಳಿದುಕೊಂಡರು. ರಾಹುಲ್ ಗಾಂಧಿ ಅವರ ಈ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ರಾಹುಲ್ ಗಾಂಧಿ ತಮಿಳುನಾಡು ಪ್ರವಾಸದಲ್ಲಿದ್ದ ವೇಳೆ ಅವರು ಕೊಯಮತ್ತೂರು ಮತ್ತು ತಿರುಪ್ಪೂರಿಗೆ ಭೇಟಿ ನೀಡಿದ್ದರು. ಅಲ್ಲಿ ಅವರು ಕೈಗಾರಿಕೆ ಹಾಗೂ ಕೃಷಿ ವಲಯದ ಅಭಿವೃದ್ಧಿ ಮತ್ತು ಕೇಂದ್ರ ಸರ್ಕಾರವು ಅಂಗೀಕರಿಸಿದ ಹೊಸ ಕೃಷಿ ಕಾನೂನುಗಳ ಬಗ್ಗೆ ಸಂವಹನ ನಡೆಸಿದ್ದರು.

ನನ್ನ ಆತ್ಮೀಯ ಸ್ನೇಹಿತನೊಬ್ಬ ಅಮೆರಿಕದಲ್ಲಿದ್ದಾನೆ. ಆತನಿಗೆ ನಾನು ಹೇಳಿ ನಿಮ್ಮ ಅಡುಗೆ ಶೋ ನಡೆಸಲು ವ್ಯವಸ್ಥೆ ಮಾಡಿಸುತ್ತೇನೆ. ಅಮೆರಿಕಕ್ಕೂ ಹೋಗಿ ಭಾರತೀಯ ಅಡುಗೆ ಮಾಡಿಬನ್ನಿ. ಹಾಗೇ, ಕರ್ನಾಟಕ, ಕೇರಳ ಸೇರಿದಂತೆ ಭಾರತದ ಬೇರೆ ರಾಜ್ಯಗಳಿಗೂ ಹೋಗಿ ಅಡುಗೆ ಮಾಡುವಂತೆ ಸಲಹೆ ನೀಡಿದರು.

ತಮಿಳುನಾಡಿನ ಕರೂರ್ ಕಾಂಗ್ರೆಸ್ ಸಂಸದೆ ಜ್ಯೋತಿಮಣಿ ಭಾಗವಹಿಸಿ, ಇಂಗ್ಲಿಷ್​ನಲ್ಲಿ ಮಾಹಿತಿ ನೀಡಿದರು.

 ದೇಶದಲ್ಲಿ ಒಂದೇ ದಿನದಲ್ಲಿ 13,052 ಕೊರೋನಾ ಪ್ರಕರಣ ದಾಖಲು : 127 ಮಂದಿ ಸಾವು

ದೇಶದಲ್ಲಿ ಒಂದೇ ದಿನದಲ್ಲಿ 13,052 ಕೊರೋನಾ ಪ್ರಕರಣ ದಾಖಲು : 127 ಮಂದಿ ಸಾವು

 

ದೇಶದಲ್ಲಿ ಒಂದೇ ದಿನದಲ್ಲಿ 13,052 ಕೊರೋನಾ ಪ್ರಕರಣ ದಾಖಲು : 127 ಮಂದಿ ಸಾವು

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 13,052 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,07,46,183ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಇನ್ನು ಒಂದೇ ದಿನ ವೈರಸ್ ನಿಂದ 127 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 1,54,274ಕ್ಕೆ ಏರಿಕೆಯಾಗಿದೆ.

ಈ ನಡುವೆ ಒಟ್ಟಾರೆ 1,07,46,183ಮಂದಿ ಸೋಂಕಿತರ ಪೈಕಿ ನಿನ್ನೆ ಒಂದೇ ದಿನ 13,965 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 1,04,23,125ಕ್ಕೆ ಏರಿಕೆಯಾಗಿದೆ. ಪ್ರಸ್ತುತ ದೇಶದಲ್ಲಿ 1,68,784 ಸಕ್ರಿಯ ಪ್ರಕರಣಗಳಿವೆ.

ಇನ್ನು ಭಾರತದಲ್ಲಿ ಒಂದೇ ದಿನ 7,42,306 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೂ ದೇಶದಲ್ಲಿ 19,50,81,079 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

 ಭಾರತಕ್ಕೆ ಮತ್ತೊಂದು ಕೊರೋನಾ ಲಸಿಕೆ : ಜೂನ್ ನಲ್ಲಿ 'ಕೊವೊವಾಕ್ಸ್' ಬಿಡುಗಡೆ ಸಾಧ್ಯತೆ

ಭಾರತಕ್ಕೆ ಮತ್ತೊಂದು ಕೊರೋನಾ ಲಸಿಕೆ : ಜೂನ್ ನಲ್ಲಿ 'ಕೊವೊವಾಕ್ಸ್' ಬಿಡುಗಡೆ ಸಾಧ್ಯತೆ


ಭಾರತಕ್ಕೆ ಮತ್ತೊಂದು ಕೊರೋನಾ ಲಸಿಕೆ : ಜೂನ್ ನಲ್ಲಿ 'ಕೊವೊವಾಕ್ಸ್' ಬಿಡುಗಡೆ ಸಾಧ್ಯತೆ


ನವದೆಹಲಿ : ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ ಐಐ) ನೊವಾಕ್ಸ್ ಕೊರೊನಾವೈರಸ್ ಲಸಿಕೆಯ ಸಣ್ಣ ದೇಶೀಯ ಪ್ರಯೋಗವನ್ನು ನಡೆಸಲು ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ ಅನುಮತಿಯನ್ನು ಕೋರಿದ ಮರುದಿನ, ಅದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದರ್ ಪೂನಾವಾಲಾ ಅವರು ಈ ವರ್ಷಜೂನ್ ನಲ್ಲಿ ಲಸಿಕೆಯನ್ನು ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.


ಸ್ಥಳೀಯ ಬ್ರ್ಯಾಂಡ್ ಕೊವೊವಾಕ್ಸ್ ಅಡಿಯಲ್ಲಿ ಲಸಿಕೆಯನ್ನು ಬಿಡುಗಡೆ ಮಾಡಲಾಗುವುದು. ಹೊಸ ಕೊರೊನಾ ವೈರಸ್ ವಿರುದ್ಧ ಪರಿಣಾಮಕಾರಿತ್ವಕ್ಕಾಗಿ ಪ್ರಯೋಗಗಳನ್ನು ಕೈಗೊಳ್ಳುತ್ತಿರುವ ನೊವಾಕ್ಸ್ ನೊಂದಿಗಿನ SII ನ ಪಾಲುದಾರಿಕೆಯು 'ಅತ್ಯುತ್ತಮ ಪರಿಣಾಮಕಾರಿಫಲಿತಾಂಶಗಳನ್ನು' ಪ್ರಕಟಿಸಿದೆ ಎಂದು ಪೂನಾವಾಲಾ ಹೇಳಿದರು.


'@Novavax ಜೊತೆಒಂದು COVID-19 ಲಸಿಕೆಗಾಗಿ ನಮ್ಮ ಸಹಭಾಗಿತ್ವವು ಅತ್ಯುತ್ತಮ ಪರಿಣಾಮಕಾರಿ ಫಲಿತಾಂಶಗಳನ್ನು ಪ್ರಕಟಿಸಿದೆ. ಭಾರತದಲ್ಲಿ ಟ್ರಯಲ್ಸ್ ಆರಂಭಿಸಲು ನಾವು ಅರ್ಜಿ ಸಲ್ಲಿಸಿದ್ದೇವೆ. ಜೂನ್ 2021ರ ವೇಳೆಗೆ #COVOVAX ಆರಂಭಿಸುವ ಭರವಸೆ ಇದೆ ಎಂದು ಟ್ವೀಟ್ ಮಾಡಿದ್ದಾರೆ.


ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಸಂಸ್ಥೆಯಾಗಿರುವ ಪುಣೆ ಮೂಲದ ಎಸ್ ಐಐ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಂಸ್ಥೆ ಈ ಕಂಪನಿಯೊಂದಿಗೆ ಸಂಬಂಧ ಹೊಂದಿದ್ದು, ನಿಯಂತ್ರಕರು ಒಪ್ಪಿಗೆ ನೀಡಿದ ನಂತರ ಬ್ರಿಡ್ಜಿಂಗ್ ಅಧ್ಯಯನ ನಡೆಸಲಾಗುವುದು.


ಸೆಪ್ಟೆಂಬರ್ 2020ರಲ್ಲಿ, ಕೊವಿಡ್-19 ಲಸಿಕೆಗಳ 2 ಬಿಲಿಯನ್ ಡೋಸ್ ಗಳನ್ನು ಉತ್ಪಾದಿಸುವ ಸಲುವಾಗಿ ಸೀರಮ್ ಇನ್ಸ್ಟಿಟ್ಯೂಟ್ ನೊಂದಿಗೆ ನೊವಾಕ್ಸ್ ಒಪ್ಪಂದಮಾಡಿಕೊಂಡಿತು. ಭಾರತದಲ್ಲಿ, ಈ ಲಸಿಕೆಯನ್ನು ಕೊವೊವಾಕ್ಸ್ ಎಂದು ಕರೆಯಲಾಗುತ್ತದೆ, ಇದನ್ನು ನೋವಾವಾಕ್ಸ್ ಅಭಿವೃದ್ಧಿಪಡಿಸಿದೆ ಮತ್ತು SII ನಿಂದ ಮೇಲ್ದರ್ಜೆಗೆ ಏರಿಸಲಾಗುತ್ತದೆ.


 ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ: ಗಂಡನ ಮನೆಯವರಿಂದಲೇ ಕೊಲೆ ಆರೋಪ

ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ: ಗಂಡನ ಮನೆಯವರಿಂದಲೇ ಕೊಲೆ ಆರೋಪ


ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ: ಗಂಡನ ಮನೆಯವರಿಂದಲೇ ಕೊಲೆ ಆರೋಪ


ಬೆಂಗಳೂರು: ಬೆಂಗಳೂರಿನ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿದ್ದು, ಪತಿಯ ಮನೆಯವರು ವರದಕ್ಷಿಣೆಗಾಗಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.


ಉಷಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ಹೇಳಲಾಗಿದೆ. 2015 ರಲ್ಲಿ ಉಷಾ ಮತ್ತು ರಂಜಿತ್ ಮದುವೆಯಾಗಿದ್ದು, ಪತಿ ಕುಟುಂಬದವರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದ ರಂಜಿತ್ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಕುಟುಂಬದವರೊಂದಿಗೆ ಸೇರಿ ಕೊಲೆ ಮಾಡಿ ಆತ್ಮಹತ್ಯೆ ಕತೆ ಕಟ್ಟಿದ್ದಾರೆ ಎಂದು ಕುಟುಂಬದವರು ದೂರಿದ್ದಾರೆ. ವರ್ತೂರು ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆನ್ನಲಾಗಿದೆ.


 ವೇತನದ ನಿರೀಕ್ಷೆಯಲ್ಲಿರುವ ಸಾರಿಗೆ ನೌಕರರಿಗೆ ಸಿಹಿಸುದ್ದಿ

ವೇತನದ ನಿರೀಕ್ಷೆಯಲ್ಲಿರುವ ಸಾರಿಗೆ ನೌಕರರಿಗೆ ಸಿಹಿಸುದ್ದಿ


ವೇತನದ ನಿರೀಕ್ಷೆಯಲ್ಲಿರುವ ಸಾರಿಗೆ ನೌಕರರಿಗೆ ಸಿಹಿಸುದ್ದಿ


ಮಂಗಳೂರು : ವೇತನದ ನಿರೀಕ್ಷೆಯಲ್ಲಿರುವ ಸಾರಿಗೆ ನೌಕರರಿಗೆ ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಿಹಿಸುದ್ದಿ ನೀಡಿದ್ದು, ಶೀಘ್ರವೇ ಸಾರಿಗೆ ನೌಕರರ ವೇತನ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಎಸ್ ಆರ್ ಟಿಸಿ 4 ನಿಗಮಗಳ ಸಾರಿಗೆ ಸಿಬ್ಬಂದಿಗೆ ಬಾಕಿಯುಳಿದ ಅರ್ಧ ವೇತನವನ್ನು ಡಿಸೆಂಬರ್ ಅಂತ್ಯದೊಳಗೆ ಬಿಡುಗಡೆಗೊಳಿಸಲಾಗಿದೆ. ಅಲ್ಲದೆ ಜನವರಿ ತಿಂಗಳ ವೇತನವನ್ನೂ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.


 ವಿದೇಶಿಯರಿಗೂ ಪೌರತ್ವ ನೀಡಲಿದೆ ಯುಎಇ! | ಯಾರೆಲ್ಲ ಅರ್ಜಿ ಹಾಕಬಹುದು.. ಇಲ್ಲಿದೆ ವಿವರ!

ವಿದೇಶಿಯರಿಗೂ ಪೌರತ್ವ ನೀಡಲಿದೆ ಯುಎಇ! | ಯಾರೆಲ್ಲ ಅರ್ಜಿ ಹಾಕಬಹುದು.. ಇಲ್ಲಿದೆ ವಿವರ!


ವಿದೇಶಿಯರಿಗೂ ಪೌರತ್ವ ನೀಡಲಿದೆ ಯುಎಇ! | ಯಾರೆಲ್ಲ ಅರ್ಜಿ ಹಾಕಬಹುದು.. ಇಲ್ಲಿದೆ ವಿವರ!


ದುಬೈ: ವಿದೇಶಿಯರಿಗೆ ಪೌರತ್ವ ನೀಡುವ ಕಾನೂನನ್ನು ಯುಎಇ ಜಾರಿಗೆ ತಂದಿದೆ. ಹೂಡಿಕೆದಾರರು, ವಿಜ್ಞಾನಿಗಳು, ವೈದ್ಯರು, ಎಂಜಿನಿಯರ್‌ಗಳು, ಬರಹಗಾರರು ಮತ್ತು ಕಲಾವಿದರಿಗೆ ಯುಎಇ ಪೌರತ್ವ ನೀಡಲಿದೆ. ಯುಎಇ ಉಪಾಧ್ಯಕ್ಷ ಮತ್ತು ಪ್ರಧಾನಿ ಮತ್ತು ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅವರು ಈ ಪ್ರಮುಖ ಬದಲಾವಣೆಯನ್ನು ಘೋಷಿಸಿದ್ದಾರೆ. ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿರುವ ಈ ವಿಭಾಗಗಳಿಗೆ ಪೌರತ್ವ ನೀಡುವುದರೊಂದಿಗೆ ದೇಶವು ಹೆಚ್ಚಿನ ಹುರುಪಿನೊಂದಿಗೆ ಮುಂದುವರಿಯಲಿದೆ ಎಂದು ಶೇಖ್ ಮೊಹಮ್ಮದ್ ಹೇಳಿದ್ದಾರೆ.


ಅರ್ಹತೆ ಇರುವವರ ದಾಖಲೆಗಳನ್ನು ಸ್ಥಳೀಯ ನ್ಯಾಯಾಲಯಗಳು ಮತ್ತು ಕಾರ್ಯಕಾರಿ ಮಂಡಳಿಗಳು ಪರಿಶೀಲಿಸಿದ ನಂತರ ಪೌರತ್ವವನ್ನು ನೀಡಲಾಗುತ್ತದೆ. ಪೌರತ್ವ ಪಡೆಯುವ ವ್ಯಕ್ತಿಯ ಕುಟುಂಬಕ್ಕೂ ಈ ಪ್ರಯೋಜನವು ಲಭ್ಯವಾಗಲಿದೆ. ಹೂಡಿಕೆದಾರರು ತಮ್ಮ ಹೆಸರಿನಲ್ಲಿ ಯುಎಇಯಲ್ಲಿ ಸಂಸ್ಥೆಯನ್ನು ಹೊಂದಿರಬೇಕು. ವೈದ್ಯರು ಕನಿಷ್ಠ 10 ವರ್ಷಗಳ ಕಾಲ ದೇಶದಲ್ಲಿ ಸೇವೆ ಸಲ್ಲಿಸಿರಬೇಕು. ವಿಶೇಷ ದಾಖಲೆಗಳನ್ನು ಸಹ ಹೊಂದಿರಬೇಕು. ವಿಜ್ಞಾನಿಗಳು ಯುಎಇಯಲ್ಲಿ 10 ವರ್ಷಗಳ ಕಾಲ ಕೆಲಸ ಮಾಡಿರಬೇಕು. ಮತ್ತು ಅವರು ಕೆಲಸ ಮಾಡಿದ ಸಂಸ್ಥೆಯ ಶಿಫಾರಸನ್ನು ಹೊಂದಿರಬೇಕು. ಕಲಾವಿದರು ಅಂತರರಾಷ್ಟ್ರೀಯ ಗುಣಮಟ್ಟದ ಪ್ರಶಸ್ತಿಗಳನ್ನು ಪಡೆದವರಾಗಿರಬೇಕು.


 ಫೆ.21ರಂದು ಬೆಳಗಾವಿಯಲ್ಲಿ 1 ಲಕ್ಷ ಕನ್ನಡಿಗರಿಂದ ಬೃಹತ್ ಪ್ರತಿಭಟನೆ : ವಾಟಾಳ್ ನಾಗರಾಜ್

ಫೆ.21ರಂದು ಬೆಳಗಾವಿಯಲ್ಲಿ 1 ಲಕ್ಷ ಕನ್ನಡಿಗರಿಂದ ಬೃಹತ್ ಪ್ರತಿಭಟನೆ : ವಾಟಾಳ್ ನಾಗರಾಜ್


ಫೆ.21ರಂದು ಬೆಳಗಾವಿಯಲ್ಲಿ 1 ಲಕ್ಷ ಕನ್ನಡಿಗರಿಂದ ಬೃಹತ್ ಪ್ರತಿಭಟನೆ : ವಾಟಾಳ್ ನಾಗರಾಜ್


ಬೆಂಗಳೂರು : ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆ ಖಂಡಿಸಿ, ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ದುಗೊಳಿಸುವಂತೆ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆಗೆ ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳು ಇಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿವೆ.

ಪ್ರತಿಭಟನೆಯ ಹಿನ್ನೆಲೆಯಲ್ಲಿ, ಇಂದು ರಾಜ್ಯಾದ್ಯಂತ ‘ರೈಲು ಬಂದ್’ ಹೋರಾಟಕ್ಕೆ ಕರೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ನಿಲ್ದಾಣದಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಉದ್ಧವ್ ಠಾಕ್ರೆ ವಿರುದ್ಧ ಹೋರಾಟ ನಡೆಯಲಿದೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ದಾಗಬೇಕು. ಯಡಿಯೂರಪ್ಪ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಇಂದು ರೈಲು ತಡೆಗೆ ಕರೆ ಕೊಟ್ಟಿದ್ದೆವು. ಎಲ್ಲಾ ರೈಲು ನಿಲ್ದಾಣಗಳಲ್ಲಿ ಪೊಲೀಸ್ ಹಾಕಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದು ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್ ಹೇಳಿದ್ದಾರೆ.  

ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ದುಗೊಳಿಸುವಂತೆ ಒತ್ತಾಯಿಸಿ ಮತ್ತು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆ ಖಂಡಿಸಿ, ಫೆ.21ರಂದು ಒಂದು ಲಕ್ಷ ಜನರೊಂದಿಗೆ ಬೆಳಗಾವಿಗೆ ಮುತ್ತಿಗೆ ಹಾಕಿ, ಹೋರಾಟ ಕೈಗೊಳ್ಳಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.


ಕನ್ನಡ ಒಕ್ಕೂಟ ಫೆ.21ರಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಉಗ್ರ ಹೋರಾಟ ಕೈಗೊಳ್ಳಲಿದೆ. ವಾಟಾಳ್ ನಾಗರಾಜ್ ಅವರಿಗೆ ನಮ್ಮ ಬೆಂಬಲ ಸಂಪೂರ್ಣವಿದೆ ಎಂದು ಕರವೇ ಶಿವರಾಮೇಗೌಡ ತಿಳಿಸಿದ್ದಾರೆ.


ರಾಜ್ಯ ಸರಕಾರ ಕನ್ನಡಪರ ಹೋರಾಟಗಾರರ ಮೇಲೆ ದ್ವೇಷ ಕಾರುತ್ತಿದೆ. ಉದ್ಧವ್ ಠಾಕ್ರೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಇದಕ್ಕೆ ನೇರ ಹೊಣೆ ಯಡಿಯೂರಪ್ಪನವರೇ ಆಗಿದ್ದಾರೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ಮಾಡದಿರುತ್ತಿದ್ದರೆ, ಈ ಬೆಳವಣಿಗೆ ಆಗ್ತಿರಲಿಲ್ಲ ಎಂದು ಕನ್ನಡ ಹೋರಾಟಗಾರ ಸಾ.ರಾ. ಗೋವಿಂದ್ ಆಪಾದಿಸಿದ್ದಾರೆ.


ಫೆ.21ರಂದು ಎಲ್ಲಾ ಕನ್ನಡಿಗರು ಬೆಳಗಾವಿಗೆ ಬರಬೇಕು. ಮರಾಠಿ ಅಭಿವೃದ್ಧಿ ಪ್ರಾಧಿಕಾರ ಹಿಂಪಡೆಯೇ ಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ಹಲವು ಕನ್ನಡ ಪರ ಹೋರಾಟಗಾರರು, ಪ್ರಮುಖರು ಉಪಸ್ಥಿತರಿದ್ದರು.


 ರೈತರ ಹೋರಾಟ ಹತ್ತಿಕ್ಕಲು ಕೇಂದ್ರ ಸರ್ಕಾರದಿಂದ ಗೂಂಡಾಗಳ ಬಳಕೆ: ಸಿದ್ದರಾಮಯ್ಯ

ರೈತರ ಹೋರಾಟ ಹತ್ತಿಕ್ಕಲು ಕೇಂದ್ರ ಸರ್ಕಾರದಿಂದ ಗೂಂಡಾಗಳ ಬಳಕೆ: ಸಿದ್ದರಾಮಯ್ಯ


ರೈತರ ಹೋರಾಟ ಹತ್ತಿಕ್ಕಲು ಕೇಂದ್ರ ಸರ್ಕಾರದಿಂದ ಗೂಂಡಾಗಳ ಬಳಕೆ: ಸಿದ್ದರಾಮಯ್ಯ


ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಹೋರಾಟವನ್ನು ಹತ್ತಿಕ್ಕಲು ಗೂಂಡಾಗಳನ್ನು ಬಳಸುತ್ತಿರುವ ಕೇಂದ್ರ ಸರ್ಕಾರದ ವರ್ತನೆ ನಾಚಿಕೆಗೇಡು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ವಿವಿಧ ಸಂಘಟನೆಗಳು ನಡೆಸಿದ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯ, ಇಂತಹ ವರ್ತನೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಚಿಕೆ ಆಗುವುದಿಲ್ಲವೇ ? ಎಂದು ಖಾರವಾಗಿ ಪ್ರಶ್ನಿಸಿದರು.


ತಪ್ಪು ಮಾಡುವವರನ್ನು ಜನ ಸಹಿಸುವುದಿಲ್ಲ. ಪದೇ ಪದೇ ಜನರನ್ನು ದಾರಿ ತಪ್ಪಿಸಲು ಆಗದು. ಕಾನೂನು ವಾಪಸ್ ಪಡೆಯುವ ವರೆಗೆ ಹೋರಾಟ ನಿಲ್ಲಿಸುವುದಿಲ್ಲ. ಸರ್ವಾಧಿಕಾರಿ ಹಿಟ್ಲರ್ ಕಥೆ ಕೊನೆಗೆ ಏನಾಯಿತು ಎಂಬುದನ್ನು ಪ್ರಧಾನಿಯವರು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಕುಟುಕಿದರು.

ಕೃಷಿ, ಹೈನುಗಾರಿಕೆ ಮತ್ತು ರೈತರನ್ನು ನಾಶ ಮಾಡುವ ಕಾಯಿದೆಗಳನ್ನು ಜಾರಿಗೆ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಿವೆ. ಬಂಡವಾಳಶಾಹಿಗಳ ಕುಮ್ಮಕ್ಕು ಇದಕ್ಕೆ ಕಾರಣ. ಅವರು ಹೇಳಿದಂತೆ ಕೇಳುವವರು ಪ್ರಧಾನಿ ನರೇಂದ್ರ ಮೋದಿ. ದೇಶದ ಜಿಡಿಪಿ ಬೆಳವಣಿಗೆ ಕುಸಿಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಕಿಸಿದಿದ್ದಾದರೂ ಏನು ? ರೈತರಿಗೆ ಮಾರಕವಾದ ಕರಾಳ ಶಾಸನಗಳನ್ನು ಅವರು ಜಾರಿಗೆ ತರುತ್ತಿದ್ದಾರೆ. ಎಪಿಎಂಸಿಗಳನ್ನು ಮುಚ್ಚಿ ಮಾರುಕಟ್ಟೆಗಳನ್ನು ಆರಂಭಿಸಲು ಖಾಸಗಿಯವರಿಗೆ ಅವಕಾಶ ನೀಡಬೇಕೆಂತೆ. ಮಾರುಕಟ್ಟೆ ಖಾಸಗಿಯವರ ಪಾಲಾದರೆ ಅವರೇ ನಿಯಂತ್ರಣ ಮಾಡುತ್ತಾರೆ. ಆಗ ರೈತರು ಬೆಳೆದ ಬೆಳೆಗಳಿಗೆ ಸ್ಪರ್ಧಾತ್ಮಕ ಬೆಲೆಯೂ ಸಿಗುವುದಿಲ್ಲ. ಇಂಥ ಕಾಯಿದೆ, ಕಾನೂನು ಒಪ್ಪಬೇಕು ಎಂದು ಹೇಳುವುದು ಯಾವ ನ್ಯಾಯ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಮಹಾತ್ಮ ಗಾಂಧಿಯವರು ಹಿಂದೂ ಅಲ್ಲವೇ ? ನಾವು ಮತ್ತು ಎಲ್ಲರೂ ಅನುಸರಿಸುವುದು ಗಾಂಧಿಯವರು ಪ್ರತಿಪಾದಿಸಿದ ಹಿಂದುತ್ವ. ಆದರೆ, ಬಿಜೆಪಿಯವರು ಹೇಳುವುದು ಸಾವರ್ಕರ್ ಅವರ ಹಿಂದುತ್ವ. ನಾವು ಭಾರತೀಯವರು. ಇಲ್ಲಿ ಹಿಂದೂ, ಮುಸ್ಲಿಂ ಎಂಬ ಪ್ರಶ್ನೆ ಬರುವುದಿಲ್ಲ. ದೇಶದಲ್ಲಿ 280 ಮಿಲಿಯನ್ ಟನ್ ಆಹಾರ ಉತ್ಪಾದನೆಯಾಗುತ್ತಿದೆ. ಆರ್ ಎಸ್ ಆರ್ ನವರು ಅದನ್ನು ಉತ್ಪಾದನೆ ಮಾಡುತ್ತಿದ್ದಾರಾ ? ಅವರು ನೇಗಿಲೇ ಹಿಡಿದಿಲ್ಲ. ಈಗ ಗೋ ಹತ್ಯೆ ನಿಷೇಧ ಕಾಯಿದೆಯ ಜಪ ಮಾಡುತ್ತಿದ್ದಾರೆ. ಹಾಗಾದರೆ ವಯಸ್ಸಾದ ರಾಸುಗಳನ್ನು ರೈತರು ಏನು ಮಾಡಬೇಕು ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ವಿದೇಶದಿಂದ ಬರುವ ಗೋಮಾಂಸ ಸೇವಿಸಬಹುದಂತೆ. ಗೋವಾ, ಕೇರಳದಲ್ಲಿ ತಿನ್ನಬಹುದಂತೆ. ಕರ್ನಾಟಕದಲ್ಲಿ ಮಾತ್ರ ಗೋಮಾತೆಯಂತೆ. ಏಕೆ ವಿದೇಶದಲ್ಲಿರುವ ಹಸುಗಳು, ಹೊರ ರಾಜ್ಯದಲ್ಲಿರುವ ರಾಸುಗಳು ಗೋಮಾತೆ ಅಲ್ಲವೇ ? ಎಂದು ಪ್ರಶ್ನಿಸಿದರು.

ತ್ಯಾಗ, ಬಲಿದಾನದಿಂದ ಸಿಕ್ಕಿರುವ ಸ್ವಾತಂತ್ರ್ಯವನ್ನು ನಾವು ಉಳಿಸಿಕೊಂಡು ಹೋಗಬೇಕು. ದೇಶದ ಜನತೆ ಒಗ್ಗಟ್ಟಾಗಿ ಇದ್ದಾಗ ಮಾತ್ರ ಅದು ಸಾಧ್ಯ. ಗಾಂಧಿಯವರು ಸೌಹಾರ್ದತೆ ಮತ್ತು ಸಾಮರಸ್ಯ ಇರಬೇಕು ಎಂದು ಹೋರಾಟ ಮಾಡಿ ಪ್ರಾಣ ಕಳೆದುಕೊಂಡರು. ಆ ಉದ್ದೇಶ ಈಡೇರಿಲ್ಲ. ಮತ್ತೊಂದು ಧರ್ಮದ ಬಗ್ಗೆ ಸಹಿಷ್ಣುತೆ ಇರಬೇಕು ಎಂದು ಸಂವಿಧಾನ ಹೇಳುತ್ತದೆ. ಸಮಾನತೆ, ಸಮ ಸಮಾಜದ ನಿರ್ಮಾಣದ ಬಗ್ಗೆ ಸಂವಿಧಾನದಲ್ಲಿ ಉಲ್ಲೇಖವಿದೆ. ಹೀಗಾಗಿಯೇ ಆರ್ ಎಸ್ ಎಸ್ ನವರು ಸಂವಿಧಾನವನ್ನು ವಿರೋಧಿಸುತ್ತಾರೆ. ಅವರಿಗೆ ಸಮ ಸಮಾಜದಲ್ಲಿ ನಂಬಿಕೆ ಇಲ್ಲ. ದೇಶ ಆಹಾರದಲ್ಲಿ ಸ್ವಾವಲಂಬನೆ ಸಾಧಿಸಿದ್ದರೆ ಅದಕ್ಕೆ ರೈತರು ಕಾರಣ. ಅಂತಹ ರೈತರ ಬಾಳು ಹಾಳು ಮಾಡಲು ಕೇಂದ್ರ ಸರ್ಕಾರ ಹೊರಟಿದೆ ಎಂದು ಟೀಕಿಸಿದರು.

ರೈತ ಸಂಘಟನೆಗಳ ಮುಖಂಡರಾದ ಬಡಗಲಪುರ ನಾಗೇಂದ್ರ, ಕೋಡಿಹಳ್ಳಿ ಚಂದ್ರಶೇಖರ, ಚಾಮರಸ ಮಾಲಿ ಪಾಟೀಲ್, ಸಿಪಿಐಎಂನ ನಾಗರಾಜ್, ಜನವಾದಿ ಮಹಿಳಾ ಸಂಘಟನೆಯ ವಿಮಲಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.


 ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಚ್.ಡಿ. ದೇವೇಗೌಡರ ಕನಸು: ಸಂಸದ ಪ್ರಜ್ವಲ್‌

ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಚ್.ಡಿ. ದೇವೇಗೌಡರ ಕನಸು: ಸಂಸದ ಪ್ರಜ್ವಲ್‌


ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಚ್.ಡಿ. ದೇವೇಗೌಡರ ಕನಸು: ಸಂಸದ ಪ್ರಜ್ವಲ್‌


ಹಾಸನ: ನಗರದ ಹೊರವಲಯದ ಬೂವನಹಳ್ಳಿಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಬೇಕೆಂಬುದು ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡರ ಕನಸು. ಹಾಸನ ವಿಶ್ವ ಭೂಪಟದಲ್ಲಿ ಕಾಣಿಸಿಕೊಳ್ಳಬೇಕೆ ಹೊರತು ಕೇವಲ ಇಂಡಿಯಾ ಮ್ಯಾಪ್‍ನಲ್ಲಿ ಅಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.


ವಿಮಾನ ನಿಲ್ದಾಣಕ್ಕಾಗಿ ದಶಕಗಳ ಹಿಂದೆಯೇ 600 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಈಗ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬೇಕಿಲ್ಲ, ಶಿವಮೊಗ್ಗ ಮಾದರಿಯ ನಿಲ್ದಾಣ ಸಾಕೆಂದರೆ ಹೇಗೆ ಸಾಧ್ಯ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಶನಿವಾರ ಪ್ರಶ್ನಿಸಿದರು.


'ವಿಮಾನ ನಿಲ್ದಾಣಕ್ಕೆ 300 ಎಕರೆ ಸಾಕು, ಉಳಿದ ಭೂಮಿ ರೈತರಿಗೆ ವಾಪಸ್ ನೀಡುತ್ತೇವೆ' ಎಂಬ ಶಾಸಕ ಪ್ರೀತಂ ಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸಚಿವರೊಂದಿಗೆ ಚರ್ಚಿಸಿ ಅನುದಾನ ಪಡೆಯಲು ಸಿದ್ಧರಿದ್ದೇವೆ. ರಾಜ್ಯ ಸರ್ಕಾರ ಜಮೀನು ನೀಡಿರುವ ರೈತರಿಗೆ ಸೂಕ್ತ ಪರಿಹಾರ ನೀಡಲಿ. ಅದನ್ನು ಬಿಟ್ಟು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬೇಡ ಎನ್ನುವುದು ಸರಿಯಲ್ಲ' ಎಂದು ಹೇಳಿದರು.


ಈಗಾಗಲೇ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದೇನೆ. ಬಜೆಟ್ ಅಧಿವೇಶನ ಮುಗಿದ ಬಳಿಕ ಎಚ್.ಡಿ. ದೇವೇಗೌಡರ ಜತೆಗೆ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು. ಹಾಸನ ಜಿಲ್ಲೆ ಬೆಂಗಳೂರು-ಮಂಗಳೂರು ಮಹಾನಗರಗಳಿಗೆ ಹತ್ತಿರದಲ್ಲಿದ್ದು, ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾದರೆ ಸಾಕಷ್ಟು ಅಭಿವೃದ್ಧಿ ಹೊಂದಬಹುದು. ಕಾರ್ಗೋ ವಿಮಾನ ನಿಲ್ದಾಣದ ಪ್ರಸ್ತಾವನೆಯೂ ಇದ್ದು, ಬೆಳೆಗಳನ್ನು ವಿದೇಶಕ್ಕೆ ರಫ್ತು ಮಾಡಬಹುದು. ಪ್ರವಾಸಿ ಕೇಂದ್ರಗಳ ಅಭಿವೃದ್ಧಿಗೆ ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.


ಶಿವಮೊಗ್ಗಕ್ಕಿಂತ ಮೊದಲೇ ಹಾಸನದಲ್ಲಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದರೆ, 2008ರಲ್ಲಿ ಯೋಜನೆಯನ್ನು ಶಿವಮೊಗ್ಗಕ್ಕೆ ವರ್ಗಾಯಿಸಲಾಯಿತು. ರಾಜ್ಯದ ಎಲ್ಲ ಜಿಲ್ಲೆಗಳು ಅಭಿವೃದ್ಧಿಯಾಗಬೇಕು ಎಂದರು.


ರೈತರ ಹಿತ ಬಲಿಕೊಡುವ ಯಾವ ಕಾಯ್ದೆಗಳು ಬೇಕಿಲ್ಲ. ಗಣರಾಜ್ಯೋತ್ಸವ ದಿನ ದೆಹಲಿಯಲ್ಲಿ ನಡೆದ ಘಟನೆಯಿಂದ ಬೇಸರವಾಗಿದೆ. ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರು ಏಕಾಏಕಿ ಆಕ್ರೋಶಗೊಂಡಿದ್ದು ಏಕೆ ಎಂಬುದಕ್ಕೆ ಉತ್ತರವಿಲ್ಲ. ಹೋರಾಟಕ್ಕೆ ಕೇಂದ್ರ ಸ್ಪಂದಿಸಲಿಲ್ಲ ಎಂಬ ಕಾರಣಕ್ಕೆ ರೈತರು ಕೆಂಪುಕೋಟೆಗೆ ನುಗ್ಗಿರಬಹುದು. ರೈತರು ತಾಳ್ಮೆ ವಹಿಸಬೇಕಿತ್ತು. ಈ ವಿಚಾರದಲ್ಲಿ ಕೇಂದ್ರ ಹಾಗೂ ರೈತರಿಂದ ತಪ್ಪಾಗಿದೆ. ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುವ ಕಾಯ್ದೆಗಳು ಯಾವ ಕಾರಣಕ್ಕೂ ಜಾರಿಯಾಗುವುದು ಬೇಡ ಎಂದು ತಿಳಿಸಿದರು.


ಯುಎಇ ವಿರುದ್ಧದ ವಿವಾದಾತ್ಮಕ ಹೇಳಿಕೆ ; ಇಸ್ರೇಲ್ ವಿಷಾದ

ಯುಎಇ ವಿರುದ್ಧದ ವಿವಾದಾತ್ಮಕ ಹೇಳಿಕೆ ; ಇಸ್ರೇಲ್ ವಿಷಾದ


ಯುಎಇ ವಿರುದ್ಧದ ವಿವಾದಾತ್ಮಕ ಹೇಳಿಕೆ ; ಇಸ್ರೇಲ್ ವಿಷಾದ

ಯುಎಇ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡಿರುವುದಕ್ಕಾಗಿ ಇಸ್ರೇಲ್ ವಿಷಾದ ವ್ಯಕ್ತಪಡಿಸಿದೆ. ಯುಎಇ ಕೊರೋನಾ ವೈರಸ್ ಹರಡುತ್ತಿದೆ ಎಂದು ಇಸ್ರೇಲ್ ಪ್ರತಿನಿಧಿಯೊಬ್ಬರು ಹೇಳಿಕೆ ನೀಡಿದ್ದರು. ಇದು ವ್ಯಾಪಕ ಟೀಕೆಗೆ ಕಾರಣವಾದ ಹಿನ್ನೆಲೆಯಲ್ಲಿ ಇಸ್ರೇಲ್ ವಿಷಾದ ವ್ಯಕ್ತಪಡಿಸಿದೆ. ಇಸ್ರೇಲ್ ಆರೋಗ್ಯ ಸಚಿವಾಲಯದ ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯಸ್ಥ ಶರೋನ್ ಅಲ್ರೋ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಕಚೇರಿ ವಿಷಾದ ವ್ಯಕ್ತಪಡಿಸಿದೆ.

ಇದು “ಯಶಸ್ವಿಯಾಗದ ತಮಾಷೆ” ಮತ್ತು ಈ ವಿಷಯದ ಬಗ್ಗೆ ಇಸ್ರೇಲ್ ನ ಅಭಿಪ್ರಾಯಗಳನ್ನು ಹೇಳುವ ಅಧಿಕಾರ ಶರೋನ್ ಅಲ್ರೊಗೆ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. 70 ವರ್ಷಗಳ ಯುದ್ಧಕ್ಕಿಂತ ಹೆಚ್ಚಿನ ಜನರು ಯುಎಇಯೊಂದಿಗಿನ ಎರಡು ವಾರಗಳ ಶಾಂತಿ ಒಪ್ಪಂದದ ನಂತರ ಸಾವನ್ನಪ್ಪಿದ್ದಾರೆ ಎಂದು ಅಲ್ರೋ ವಿವಾದಾತ್ಮಕ ಹೆಳಿಕೆ ನೀಡಿದ್ದರು. ಕೋವಿಡ್ ಹರಡುತ್ತಿರುವ ಹಿನ್ನೆಲೆಯಲ್ಲಿ ಇಸ್ರೇಲ್ ನ ಬಂಗೂರಿಯನ್ ವಿಮಾನ ನಿಲ್ದಾಣವನ್ನು ಮುಚ್ಚುವ ವಿಷಯಕ್ಕೆ ಸಂಬಂಧಿಸಿ ಈ ವಿವಾದಾತ್ಮಕ ಹೇಳಿಕೆಯನ್ನು ಅವರು ನೀಡಿದ್ದರು.


 

 ಪ್ರಜಾಪ್ರಭುತ್ವದ ಘನತೆಗೆ ಧಕ್ಕೆ ತಂದ ಬಿಜೆಪಿ: ಪ್ರಿಯಾಂಕಾ ಗಾಂಧಿ ಆರೋಪ

ಪ್ರಜಾಪ್ರಭುತ್ವದ ಘನತೆಗೆ ಧಕ್ಕೆ ತಂದ ಬಿಜೆಪಿ: ಪ್ರಿಯಾಂಕಾ ಗಾಂಧಿ ಆರೋಪ


ಪ್ರಜಾಪ್ರಭುತ್ವದ ಘನತೆಗೆ ಧಕ್ಕೆ ತಂದ ಬಿಜೆಪಿ: ಪ್ರಿಯಾಂಕಾ ಗಾಂಧಿ ಆರೋಪ


ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತು ಆರು ಪತ್ರಕರ್ತರ ವಿರುದ್ಧ ಎಫ್‌ಐಆರ್ ದಾಖಲಾಗಿರುವುದನ್ನು ವಿರೋಧಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, 'ಆಡಳಿತಾರೂಢ ಬಿಜೆಪಿ ಪಕ್ಷವು ಪ್ರಜಾಪ್ರಭುತ್ವದ ಘನತೆಯನ್ನು ಚೂರು ಚೂರು ಮಾಡಿದೆ' ಎಂದು ಶನಿವಾರ ಆರೋಪಿಸಿದ್ದಾರೆ.


'ಜನಪ್ರತಿನಿಧಿಗಳು ಮತ್ತು ಪತ್ರಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸುವ ಮೂಲಕ ಬೆದರಿಸುತ್ತಿರುವ ಬಿಜೆಪಿ ಸರ್ಕಾರದ ನಡೆಯು ಬಲು ಅಪಾಯಕಾರಿಯಾದದ್ದು' ಎಂದೂ ಅವರು ದೂರಿದ್ದಾರೆ.


'ಪ್ರಜಾಪ್ರಭುತ್ವವನ್ನು ಗೌರವಿಸುವುದು ಸರ್ಕಾರದ ಅಧಿಕಾರವಷ್ಟೇ ಅಲ್ಲ, ಅದು ಜವಾಬ್ದಾರಿ ಕೂಡಾ ಆಗಿದೆ. ಬೆದರಿಕೆಯಂಥ ತಂತ್ರಗಳು ಪ್ರಜಾಪ್ರಭುತ್ವಕ್ಕೆ ವಿಷಕಾರಿಯಾಗಿವೆ' ಎಂದೂ ಪ್ರಿಯಾಂಕಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

'ದೆಹಲಿಯ ಟ್ರ್ಯಾಕ್ಟರ್ ರ‍್ಯಾಲಿ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿ‌ಸಿದಂತೆ ಜನರನ್ನು ತಪ್ಪು ದಾರಿಗೆಳೆಯುವ ಟ್ವೀಟ್ ಮಾಡಿದ ಆರೋಪದ ಮೇರೆಗೆ ಸಂಸದ ಶಶಿ ತರೂರ್, ಪತ್ರಕರ್ತರಾದ ರಾಜ್‌ದೀಪ್ ಸರ್‌ದೇಸಾಯಿ, ಮೃಣಾಲ್ ಪಾಂಡೆ, ವಿನೋದ್ ಜೋಸೆ, ಜಫರ್ ಅಘಾ, ಪ್ರಾಣೇಶ್ ನಾಥ್, ಅನಂತ್‌ನಾಥ್ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿದೆ' ಎಂದು ಮೂಲಗಳು ತಿಳಿಸಿವೆ.


 ತೈಲ ಬೆಲೆ ಏರಿಕೆಯಾಗುತ್ತಿದ್ದರೂ, ಜನ ಮೋದಿ ಮಾತಿಗೆ ಚಪ್ಪಾಳೆ ತಟ್ಟುತ್ತಾರೆ : ಸಿದ್ದರಾಮಯ್ಯ ವ್ಯಂಗ್ಯ

ತೈಲ ಬೆಲೆ ಏರಿಕೆಯಾಗುತ್ತಿದ್ದರೂ, ಜನ ಮೋದಿ ಮಾತಿಗೆ ಚಪ್ಪಾಳೆ ತಟ್ಟುತ್ತಾರೆ : ಸಿದ್ದರಾಮಯ್ಯ ವ್ಯಂಗ್ಯ


 ತೈಲ ಬೆಲೆ ಏರಿಕೆಯಾಗುತ್ತಿದ್ದರೂ, ಜನ ಮೋದಿ ಮಾತಿಗೆ ಚಪ್ಪಾಳೆ ತಟ್ಟುತ್ತಾರೆ : ಸಿದ್ದರಾಮಯ್ಯ ವ್ಯಂಗ್ಯ

ಬೆಂಗಳೂರು : ದೇಶದಲ್ಲಿ ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಂಡ ಬಗ್ಗೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರಲ್ ಕಚ್ಚಾತೈಲ ಬೆಲೆ 100ಕ್ಕೂ ಹೆಚ್ಚು ಡಾಲರ್ ಇತ್ತು. ಆ ಸಂದರ್ಭದಲ್ಲಿ 60 ರೂಪಾಯಿಗೆ ಪೆಟ್ರೋಲ್ ಸಿಗುತ್ತಿತ್ತು. ಈಗ ಬ್ಯಾರಲ್ ಕಚ್ಚಾತೈಲ ಬೆಲೆ 40ರಿಂದ 50 ಡಾಲರ್ ಇದೆ. ಆದರೂ ಕೂಡ ಲೀಟರ್ ಪೆಟ್ರೋಲ್ ಬೆಲೆ 90 ರೂ. ಆಗಿದೆ ಎಂದಿದ್ದಾರೆ.

ಪೆಟ್ರೋಲ್, ಡಿಸೇಲ್ ಬೆಲೆ ನಿರಂತರ ಏರಿಕೆಯಾಗುತ್ತಿದ್ದರೂ ನಮ್ಮ ಜನ ಮೋದಿ ಹೇಳಿದಂತೆ ಮಾಡ್ತಿದ್ದಾರೆ. ಪ್ರಧಾನಿ ಮೋದಿ ಹೇಳಿದಂತೆ ಜನರು ಚಪ್ಪಾಳೆ ತಟ್ಟುತ್ತಿದ್ದಾರೆ. ನನಗೆ ಏನ್ ಮಾಡಬೇಕೆಂದು ಅರ್ಥವಾಗ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಜಿಎಸ್‌ಟಿ ಬಂದ ಮೇಲೆ ಆರ್ಥಿಕತೆಯೇ ನೆಲ ಕಚ್ಚಿಹೋಯ್ತು. ನಾನು‌ 13 ಬಾರಿ ಬಜೆಟ್ ಮಂಡಿಸಿದ್ದೀನಿ ಆದ್ರೆ ಇಂತಹ ಹರ್ಕತ್​ ನೋಡಿಲ್ಲ ಎಂದು ಪ್ರಧಾನಿ ವಿರುದ್ಧ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.

 ರೈತರ ಪ್ರತಿಭಟನೆ: ದೆಹಲಿಯ ಗಡಿ ಭಾಗಗಳಲ್ಲಿ 2 ದಿನ ಅಂತರ್ಜಾಲ ಸೇವೆ ಸ್ಥಗಿತ

ರೈತರ ಪ್ರತಿಭಟನೆ: ದೆಹಲಿಯ ಗಡಿ ಭಾಗಗಳಲ್ಲಿ 2 ದಿನ ಅಂತರ್ಜಾಲ ಸೇವೆ ಸ್ಥಗಿತ

 

ರೈತರ ಪ್ರತಿಭಟನೆ: ದೆಹಲಿಯ ಗಡಿ ಭಾಗಗಳಲ್ಲಿ 2 ದಿನ ಅಂತರ್ಜಾಲ ಸೇವೆ ಸ್ಥಗಿತ

ನವದೆಹಲಿ: ದೆಹಲಿಯ ಗಡಿ ಪ್ರದೇಶಗಳಲ್ಲಿ ಎರಡು ದಿನ ಅಂತರ್ಜಾಲ ಸೇವೆಗಳನ್ನು ಕಡಿತಗೊಳಿಸುತ್ತಿರುವುದಾಗಿ ಕೇಂದ್ರ ಗೃಹ ಇಲಾಖೆ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಕೇಂದ್ರದ ಹೊಸ ಕೃಷಿ ಕಾಯ್ದೆಗಳನ್ನು ರದ್ದು ಪಡಿಸುವಂತೆ ಎರಡು ತಿಂಗಳಿಂದ ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು, ಗಾಜಿಪುರ್ ಹಾಗೂ ಟಿಕ್ರಿ ಪ್ರದೇಶಗಳಲ್ಲಿ ಅಂತರ್ಜಾಲ ಸೇವೆಗಳನ್ನು ಕಡಿತಗೊಳಿಸಲಾಗಿದೆ.

ಜನವರಿ 29ರ ರಾತ್ರಿ 11ರಿಂದ ಜನವರಿ 31ರ ರಾತ್ರಿ 11ರ ವರೆಗೂ ತಾತ್ಕಾಲಿಕವಾಗಿ ಅಂತರ್ಜಾಲ ಸೇವೆಗಳನ್ನು ಕಡಿತಗೊಳಿಸುವುದು ಅವಶ್ಯವಿರುವುದರಿಂದ ಆದೇಶ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 ನಾಥೂರಾಮ್‌ ಗೋಡ್ಸೆ ಓರ್ವ ಹೇಡಿ ಮತ್ತು ಭಯೋತ್ಪಾದಕ: ನಟ ಸಿದ್ದಾರ್ಥ್

ನಾಥೂರಾಮ್‌ ಗೋಡ್ಸೆ ಓರ್ವ ಹೇಡಿ ಮತ್ತು ಭಯೋತ್ಪಾದಕ: ನಟ ಸಿದ್ದಾರ್ಥ್


 ನಾಥೂರಾಮ್‌ ಗೋಡ್ಸೆ ಓರ್ವ ಹೇಡಿ ಮತ್ತು ಭಯೋತ್ಪಾದಕ: ನಟ ಸಿದ್ದಾರ್ಥ್

ಹೈದರಾಬಾದ್‌,ಜ.30: ಭಾರತದ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರನ್ನು ನಾಥೂರಾಮ್‌ ಗೋಡ್ಸೆ ಗುಂಡಿಕ್ಕಿ ಕೊಂದು 73 ವರ್ಷಗಳು ಕಳೆದಿವೆ. ಹಲವಾರು ಭಾರತೀಯರಿಗೆ ಇದೊಂದು ದುಃಖದ ದಿನವಾಗಿದ್ದು, ಜನವರಿ 30ರಂದು ಹುತಾತ್ಮ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದೀಗ ಈ ಕುರಿತಾದಂತೆ ಖ್ಯಾತ ಬಹುಭಾಷಾ ನಟ ಸಿದ್ಧಾರ್ಥ್‌ ಟ್ವೀಟ್‌ ಮಾಡಿದ್ದಾರೆ.

ಟ್ವಿಟರ್‌ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಅವರು, "ನಾಥೂರಾಮ್‌ ಗೋಡ್ಸೆ ಓರ್ವ ಹೇಡಿ, ಓರ್ವ ಭಯೋತ್ಪಾದಕ, ಆರೆಸ್ಸೆಸ್ಸಿಗ ಮತ್ತು ಓರ್ವ ಕೊಲೆಗಾರ. ಗೋಡ್ಸೆಯ ನೆನಪು ಮತ್ತು ಆತನ ಹೆಸರು ಎಲ್ಲ ಭಾರತೀಯರಿಗೂ ಕಳಂಕ ಮತ್ತು ಮುಜುಗರ ತರಿಸುತ್ತದೆ. ಗಾಂಧೀಜಿ ಅಮರ್‌ ರಹೇ" ಎಂದು ಟ್ವೀಟ್‌ ಮಾಡಿದ್ದಾರೆ.

ಈ ನಡುವೆ ಟ್ವಿಟರ್‌ ನಾದ್ಯಂತ ಮಹಾತ್ಮ ಗಾಂಧಿಯ ಹೆಸರಿನೊಂದಿಗೆ ನಾಥೂರಾಮ್‌ ಗೋಡ್ಸೆಯ ಹೆಸರು ಕೂಡಾ ಟ್ರೆಂಡಿಂಗ್‌ ಆಗುತ್ತಿದ್ದು, ಹಲವಾರು ಮಂದಿ ಸಂಘಪರಿವಾರ ಬೆಂಬಲಿಗರು ನಾಥೂರಾಮ್‌ ಗೋಡ್ಸೆಯನ್ನು ಪ್ರಶಂಸಿಸಿ ಟ್ವೀಟ್‌ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

 ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ವಿವಾದಾಸ್ಪದ ತೀರ್ಪು ನೀಡಿದ್ದ ಜಡ್ಜ್ ಕುರಿತು ಸುಪ್ರೀಂ ಕೋರ್ಟ್‌ ಹೇಳಿದ್ದೇನು?

ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ವಿವಾದಾಸ್ಪದ ತೀರ್ಪು ನೀಡಿದ್ದ ಜಡ್ಜ್ ಕುರಿತು ಸುಪ್ರೀಂ ಕೋರ್ಟ್‌ ಹೇಳಿದ್ದೇನು?


 ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ವಿವಾದಾಸ್ಪದ ತೀರ್ಪು ನೀಡಿದ್ದ ಜಡ್ಜ್ ಕುರಿತು ಸುಪ್ರೀಂ ಕೋರ್ಟ್‌ ಹೇಳಿದ್ದೇನು?

ಹೊಸದಿಲ್ಲಿ,ಜ.30: ಎರಡು ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ವಿವಾದಾಸ್ಪದ ತೀರ್ಪುಗಳನ್ನು ನೀಡಿದ ಬಾಂಬೆ ಹೈಕೋರ್ಟಿನ ನಾಗ್ಪುರ್ ಪೀಠದ ನ್ಯಾಯಾಧೀಶೆ ಪುಷ್ಪಾ ಗನೇಡಿವಾಲ ಅವರ ಖಾಯಮಾತಿ ಕುರಿತಂತೆ ತಾನು ನೀಡಿದ ಶಿಫಾರಸನ್ನು ಸುಪ್ರೀಂ ಕೋರ್ಟ್ ಕೊಲೀಜಿಯಂ ಅಪರೂಪದ ನಿರ್ದಶನದಲ್ಲಿ ವಾಪಸ್ ಪಡೆದಿದೆ.

"ವೈಯಕ್ತಿಕವಾಗಿ ಆಕೆಯ ವಿರುದ್ಧ ಯಾವುದೇ  ಅಭಿಪ್ರಾಯವಿಲ್ಲ. ಆದರೆ ಆಕೆಗೆ ಇನ್ನಷ್ಟು ಅನುಭವದ ಅಗತ್ಯವಿದೆ ಹಾಗೂ ಪ್ರಾಯಶಃ ವಕೀಲೆಯಾಗಿದ್ದಾಗ ಆಕೆ ಇಂತಹ ಪ್ರಕರಣಗಳನ್ನು ನಿಭಾಯಿಸದೇ ಇರಲಿಕ್ಕಿಲ್ಲ. ಆಕೆಗೆ ಇನ್ನಷ್ಟು ತರಬೇತಿ ಅಗತ್ಯವಿದೆ" ಎಂದು ಸುಪ್ರೀಂ ಕೋರ್ಟ್ ಮೂಲವೊಂದು ತಿಳಿಸಿದೆ.

ನಾಗ್ಪುರ್ ಪೀಠದ ಖಾಯಂ ನ್ಯಾಯಾಧೀಶೆಯಾಗಿ ಆಕೆಯ ಹೆಸರನ್ನು ಕೊಲೀಜಿಯಂ ಜನವರಿ 20ರಂದು ದೃಢೀಕರಿಸಿತ್ತು. ಆದರೆ ಆಕೆ ಇತ್ತೀಚೆಗೆ ನೀಡಿದ್ದ ಕೆಲವೊಂದು ತೀರ್ಪುಗಳು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದವು.

ವಸ್ತ್ರದ ಮೇಲಿನಿಂದ ಅಪ್ರಾಪ್ರೆಯೊಬ್ಬಳ ಎದೆ ಸವರುವುದು ಪೋಕ್ಸೋ ಕಾಯಿದೆಯಡಿ ಲೈಂಗಿಕ ದೌರ್ಜನ್ಯವಲ್ಲ ಎಂದು ಜನವರಿ 19ರಂದು ನೀಡಿದ್ದ ಒಂದು ತೀರ್ಪಿನಲ್ಲಿ ಆಕೆ ಹೇಳಿದ್ದರು. ಈ ತೀರ್ಪಿಗೆ ಸುಪ್ರೀಂ ಕೋರ್ಟ್ ಬುಧವಾರ ತಡೆ ಹೇರಿತ್ತಲ್ಲದೆ ಇಂತಹ ತೀರ್ಪುಗಳು ಕಳವಳಕಾರಿ ಹಾಗೂ ಅಪಾಯಕಾರಿ ಪೂರ್ವನಿರ್ದಶನವಾಗಬಹುದು ಎಂದು ಹೇಳಿತ್ತು.

ಗುರುವಾರ ಇನ್ನೊಂದು ಪ್ರಕರಣದಲ್ಲಿ  ಆಕೆ  ಸಂತ್ರಸ್ತೆಯ ಕೈಗಳನ್ನು ಹಿಡಿಯುವುದು ಅಥವಾ ಆರೋಪಿ ತನ್ನ ಪ್ಯಾಂಟ್ ಜಿಪ್ ತೆರೆಯುವುದು  ಲೈಂಗಿಕ ಕಿರುಕುಳವೆಂದು ಎಣಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರಲ್ಲದೆ ಪೋಕ್ಸೋ ಅಡಿ ದೋಷಿ ಎಂದು ಘೋಷಿತವಾಗಿದ್ದ ಆರೋಪಿಯನ್ನು ಖುಲಾಸೆಗೊಳಿಸಿದ್ದರು. ಈ ಪ್ರಕರಣದಲ್ಲಿ ಸಂತ್ರಸ್ತೆ 5 ವರ್ಷದ ಬಾಲಕಿಯಾಗಿದ್ದಳು.

 ದೇಶಪ್ರೇಮದ ಪಾಠ ಹೇಳುವ ಸಂಘಟನೆಯ ನಾಯಕ ಗೋಡ್ಸೆ, ಗಾಂಧೀಜಿ ಹತ್ಯೆ ಮಾಡಿದ: ಸಿದ್ದರಾಮಯ್ಯ

ದೇಶಪ್ರೇಮದ ಪಾಠ ಹೇಳುವ ಸಂಘಟನೆಯ ನಾಯಕ ಗೋಡ್ಸೆ, ಗಾಂಧೀಜಿ ಹತ್ಯೆ ಮಾಡಿದ: ಸಿದ್ದರಾಮಯ್ಯ

 

ದೇಶಪ್ರೇಮದ ಪಾಠ ಹೇಳುವ ಸಂಘಟನೆಯ ನಾಯಕ ಗೋಡ್ಸೆ, ಗಾಂಧೀಜಿ ಹತ್ಯೆ ಮಾಡಿದ: ಸಿದ್ದರಾಮಯ್ಯ

ಬೆಂಗಳೂರು: ಮಹಾತ್ಮ ಗಾಂಧೀಜಿಯವರು ಯಾರನ್ನೂ ಶತ್ರುಗಳೆಂದು ತಿಳಿದು ಅವರ ವಿರುದ್ಧ ಹೋರಾಡಿದರೋ, ಅವರು ಗಾಂಧೀಜಿಯವರನ್ನು ಹತ್ಯೆಮಾಡಲಿಲ್ಲ. ದೇಶಪ್ರೇಮದ ಪಾಠ ಹೇಳುವ ಸಂಘಟನೆಯ ನಾಯಕ ನಾಥುರಾಮ್ ಗೋಡ್ಸೆ ಗಾಂಧೀಜಿಯವರನ್ನು ಹತ್ಯೆಮಾಡಿದ್ದ ಎಂಬುದನ್ನು ನಾವು ಮರೆಯಬಾರದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಮಹಾತ್ಮ ಗಾಂಧಿಯವರ ಪುಣ್ಯ ಸ್ಮರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮಹಾತ್ಮಾಗಾಂಧಿಯವರನ್ನು ಹತ್ಯೆಗೈದ ಕೊಲೆಗಡುಕನನ್ನೇ ಆರಾಧಿಸುವ ದೇಶದ್ರೋಹಿಗಳು ಹೆಚ್ಚಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಮಹಾತ್ಮಗಾಂಧೀಜಿಯವರು ಹುತಾತ್ಮರಾದ ದಿನವನ್ನು ನಾವು ಹುತಾತ್ಮರ ದಿನವಾಗಿ ಆಚರಿಸುತ್ತಿದ್ದೇವೆ. ಈ ಮೂಲಕ ಸ್ವಾತಂತ್ರ್ಯಹೋರಾಟಕ್ಕಾಗಿ ಪ್ರಾಣಾರ್ಪಣೆ ಮಾಡಿದ ಸಾವಿರಾರು ದೇಶಭಕ್ತರಿಗೆ ಗೌರವವನ್ನು ಅರ್ಪಿಸುತ್ತಿದ್ದೇವೆ. ಇವರಲ್ಲಿ ಬಹಳಷ್ಟು ಹುತಾತ್ಮರು ಅನಾಮಿಕರಾಗಿಯೇ ಉಳಿದಿದ್ದಾರೆ. ಅವರ ನಿಸ್ವಾರ್ಥವಾದ ದೇಶಭಕ್ತಿ ನಮಗೆಲ್ಲರಿಗೂ ಆದರ್ಶವಾಗಬೇಕು ಎಂದರು.

ಗಾಂಧೀಜಿ ಕಾಂಗ್ರೆಸ್ ಪಕ್ಷದ ನಾಯಕರಾಗಿ ಸ್ವಾತಂತ್ರ್ಯಹೋರಾಟವನ್ನು ಮುನ್ನಡೆಸಿದ್ದರೂ ಅಂತರಂಗದಲ್ಲಿ ಅವರೊಬ್ಬ ಸಮಾಜ ಸುಧಾರಕರಾಗಿದ್ದರು. ಪ್ರೀತಿ, ಸೋದರತೆ, ಅನುಕಂಪ, ಸತ್ಯ ಮತ್ತು ಅಹಿಂಸೆ ಎಂಬ ಪಂಚ ಸೂತ್ರಗಳ ಮೇಲೆ ತಮ್ಮ ಜೀವನ ಪಯಣ ನಡೆಸಿದ ಗಾಂಧೀಜಿ ಮಹಾನ್ ಸಮಾಜ ಪರಿವರ್ತಕ ಎಂದು ಸಿದ್ದರಾಮಯ್ಯ ತಿಳಿಸಿದರು.

 ಪಾಸ್‌ಗಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ BMTCಯಿಂದ ಮಹತ್ವದ ಮಾಹಿತಿ

ಪಾಸ್‌ಗಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ BMTCಯಿಂದ ಮಹತ್ವದ ಮಾಹಿತಿ

 

ಪಾಸ್‌ಗಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ BMTCಯಿಂದ ಮಹತ್ವ
 ಮಾಹಿತಿ 

ಬೆಂಗಳೂರು: 2020-21ನೇ ಸಾಲಿನ ವಿದ್ಯಾರ್ಥೀಗಳು ಪಾಸಿಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ, 100 ಬೆಂಗಳೂರು ಒನ್‌ ಕೇಂದ್ರಗಳಲ್ಲಿ ಪಾಸ್‌ ಪಡೆಯಲು ದಿನಾಂಕ 21.12.20ರಿಂದ ಅವಕಾಶ ಕಲ್ಪಿಸಿದೆ. ಹೀಗಾಗಿ ಶಿಕ್ಷಣ ಸಂಸ್ಥೆಗಳು ಸಂಸ್ಥೆಯ ವೆಬ್‌ಐಟ್‌ (www.mybmtc.karnataka.nic.in) ಮೂಲಕ ನೋಂದಣಿಯಾಗದೇ ಇದ್ದಲ್ಲಿ, ನೊಂದಣಿ ಮಾಡಿಕೊಳ್ಳುವಂತೆ ಸಂಸ್ಥೆ ಕೋರಿದೆ. ಇದಲ್ಲದೇ ಈಗಾಗಲೇ ವಿದ್ಯಾರ್ಥಿ ಪಾಸಿಗಾಗಿ, ಅರ್ಜಿ ಸಲ್ಲಿಸಿ ಪಾಸು ಪಡೆಯದೇ ಇರುವ ವಿದ್ಯಾರ್ಥಿಗಳು ಪಾಸು ಪಡೆಯುವ ಸ್ಥಳ ದಿನಾಂಕವನ್ನು ನಿಗದಿಪಡಿಸಿಕೊಂಡ ಪಾಸು ಪಡೆದುಕೊಳ್ಳಲು ಕೋರಿದೆ.

 ಗಾಂಧೀಜಿಯನ್ನು ಹತ್ಯೆಗೈದ ಕೊಲೆಗಡುಕನನ್ನೇ ಆರಾಧಿಸುವ ಮಂದಿ ಹೆಚ್ಚಾಗಿದ್ದಾರೆ: ಸಿದ್ದರಾಮಯ್ಯ

ಗಾಂಧೀಜಿಯನ್ನು ಹತ್ಯೆಗೈದ ಕೊಲೆಗಡುಕನನ್ನೇ ಆರಾಧಿಸುವ ಮಂದಿ ಹೆಚ್ಚಾಗಿದ್ದಾರೆ: ಸಿದ್ದರಾಮಯ್ಯ


 ಗಾಂಧೀಜಿಯನ್ನು ಹತ್ಯೆಗೈದ ಕೊಲೆಗಡುಕನನ್ನೇ ಆರಾಧಿಸುವ ಮಂದಿ ಹೆಚ್ಚಾಗಿದ್ದಾರೆ: ಸಿದ್ದರಾಮಯ್ಯ

ಬೆಂಗಳೂರು: ಮಹಾತ್ಮಾ ಗಾಂಧಿಯವರನ್ನು ಹತ್ಯೆಗೈದ ಕೊಲೆಗಡುಕನನ್ನೇ ಆರಾಧಿಸುವ ದೇಶದ್ರೋಹಿಗಳು ಹೆಚ್ಚಾಗುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದರು.

ಮಹಾತ್ಮ ಗಾಂಧಿಯವರ ಪುಣ್ಯ ಸ್ಮರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಹಾತ್ಮಗಾಂಧೀಜಿಯವರು ಹುತಾತ್ಮರಾದ ದಿನವನ್ನು ನಾವು ಹುತಾತ್ಮರ ದಿನವಾಗಿ ಆಚರಿಸುತ್ತಿದ್ದೇವೆ. ಈ ಮೂಲಕ ಸ್ವಾತಂತ್ರ್ಯ ಹೋರಾಟಕ್ಕಾಗಿ ಪ್ರಾಣಾರ್ಪಣೆ ಮಾಡಿದ ಸಾವಿರಾರು ದೇಶಭಕ್ತರಿಗೆ ಗೌರವವನ್ನು ಅರ್ಪಿಸುತ್ತಿದ್ದೇವೆ. ಇವರಲ್ಲಿ ಬಹಳಷ್ಟು ಹುತಾತ್ಮರು ಅನಾಮಿಕರಾಗಿಯೇ ಉಳಿದಿದ್ದಾರೆ. ಅವರ ನಿಸ್ವಾರ್ಥವಾದ ದೇಶಭಕ್ತಿ ನಮಗೆಲ್ಲರಿಗೂ ಆದರ್ಶವಾಗಬೇಕು. ಮಹಾತ್ಮ ಗಾಂಧೀಜಿಯವರು ಯಾರನ್ನೂ ಶತ್ರುಗಳು ತಿಳಿದು ಅವರ ವಿರುದ್ಧ ಹೋರಾಡಿದರೋ, ಅವರು ಗಾಂಧೀಜಿಯವರನ್ನು ಹತ್ಯೆಮಾಡಲಿಲ್ಲ. ದೇಶಪ್ರೇಮದ ಪಾಠ ಹೇಳುವ ಸಂಘಟನೆಯ ನಾಯಕ ನಾಥುರಾಮ್ ಗೋಡ್ಸೆ ಎಂಬ ದೇಶದ್ರೋಹಿ ಗಾಂಧೀಜಿಯವರನ್ನು ಹತ್ಯೆಮಾಡಿದ್ದ ಎಂಬುದನ್ನು ನಾವು ಮರೆಯಬಾರದು ಎಂದರು.

ಗಾಂಧೀಜಿ ಕಾಂಗ್ರೆಸ್ ಪಕ್ಷದ ನಾಯಕರಾಗಿ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದ್ದರೂ ಅಂತರಂಗದಲ್ಲಿ ಅವರೊಬ್ಬ ಸಮಾಜ ಸುಧಾರಕರಾಗಿದ್ದರು. ಪ್ರೀತಿ, ಸೋದರತೆ, ಅನುಕಂಪ, ಸತ್ಯ ಮತ್ತು ಅಹಿಂಸೆ ಎಂಬ ಪಂಚ ಸೂತ್ರಗಳ ಮೇಲೆ ತಮ್ಮ ಜೀವನ ಪಯಣ ನಡೆಸಿದ ಗಾಂಧೀಜಿ ಮಹಾನ್ ಸಮಾಜ ಪರಿವರ್ತಕ. ಗಾಂಧೀಜಿ ಜೀವನ ಮತ್ತು ಸಾಧನೆ ಹೇಗೆ ನಮ್ಮ ಆದರ್ಶಪ್ರಾಯವೋ, ಅದೇ ರೀತಿ ಅವರ ಸಾವು ಕೂಡಾ ನಮಗೆ ಪಾಠವಾಗಿದೆ. ಗಾಂಧೀಜಿಯವರು ಕೇವಲ ಸ್ವಾತಂತ್ರ್ಯಕ್ಕಾಗಿ, ಅಸ್ಪೃರ್ಶತೆಯ ನಿವಾರಣೆಗಾಗಿ, ಗ್ರಾಮೀಣ ಪ್ರದೇಶದ ಅಭಿವೃದ್ದಿಗಾಗಿ ಮಾತ್ರ ಹೋರಾಡಲಿಲ್ಲ. ಅವರು ಬಹುಮುಖ್ಯವಾದ ಕೋಮು ಸಾಮರಸ್ಯಕ್ಕಾಗಿ ಕೂಡಾ ತನ್ನ ಕೊನೆ ಉಸಿರಿರುವ ತನಕ ಹೋರಾಡಿದರು. ಈ ತನ್ನ ಹೋರಾಟಕ್ಕಾಗಿಯೇ ತನ್ನ ಪ್ರಾಣವನ್ನು ಕಳೆದುಕೊಂಡರು ಎಂದು ಸಿದ್ದರಾಮಯ್ಯ ಹೇಳಿದರು.

ಆದರೆ ಗಾಂಧೀಜಿ ಅವರು ಯಾವ ಉದ್ದೇಶಕ್ಕಾಗಿ ಹೋರಾಡಿದರೋ, ಆ ಕೋಮುಸೌಹಾರ್ದತೆಯ ಸ್ಥಾಪನೆಯ ಕಾರ್ಯ ಇನ್ನೂ ಅಪೂರ್ಣವಾಗಿಯೇ ಉಳಿದಿದೆ. ಗಾಂಧೀಜಿಯವರ ಚಿಂತನೆಗಳು ಒಂದೊಂದಾಗಿ ನಮ್ಮ ಕಣ್ಣಮುಂದೆಯೇ ನಾಶಗೊಳಿಸುವ ಪ್ರಯತ್ನ ನಡೆಯುತ್ತಿದೆ. ಧರ್ಮಧರ್ಮಗಳ ನಡುವೆ ವೈಮನಸ್ಸು ಹುಟ್ಟಿಸಿ, ಗಲಭೆ ಸೃಷ್ಟಿಸಿ ಅದರ ಮೂಲಕ ರಾಜಕೀಯ ಲಾಭ ಪಡೆಯುವ ಹುನ್ನಾರ ನಡೆದಿದೆ ಎಂದು ಟೀಕಿಸಿದರು.

ಸ್ವಾತಂತ್ರ್ಯ ಹೋರಾಟದ ಮೂಲಕ ಬ್ರಿಟಿಷರ ಗುಲಾಮಗಿರಿಯಿಂದ ನಮ್ಮನ್ನು ಬಿಡುಗಡೆಗೊಳಿಸಿ ನಮಗೆ ರಾಜಕೀಯ ಸ್ವಾತಂತ್ರ್ಯವನ್ನು ನಮಗೆ ಗಳಿಸಿಕೊಟ್ಟರು. ಈಗ ನಾವು ನವ ವಸಾಹತುಷಾಹಿಗಳ ವಿರುದ್ಧ ಹೋರಾಡಿ ಸಾಮಾಜಿಕ ಸ್ವಾತಂತ್ರ್ಯವನ್ನು ಪಡೆಯಲು ಇನ್ನೊಂದು ಸ್ವಾತಂತ್ರ್ಯಹೋರಾಟ ನಡೆಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇಂದಿನ ಭಾರತದಲ್ಲಿ ಅತ್ಯಂತ ಶೋಷಿತ ಸಮುದಾಯಗಳಾದ ರೈತರು, ಕಾರ್ಮಿಕರು, ಮಹಿಳೆಯರು, ದಲಿತರು ಮಾತ್ರವಲ್ಲ ಈ ದೇಶದ ಯಾವ ಸಾಮಾನ್ಯ ಮನುಷ್ಯ ಕೂಡಾ ಸುರಕ್ಷಿತವಾಗಿಲ್ಲ. ಈ ಅನ್ಯಾಯ, ಶೋಷಣೆ, ಅವಮಾನದ ವಿರುದ್ದ ನಾವು ದನಿ ಎತ್ತದೆ ಹೋದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ. ಇಂದು ಕೃಷಿ ವಿರೋಧಿ ಕಾನೂನುಗಳನ್ನು ವಿರೋಧಿಸಿ ಹೋರಾಡುತ್ತಿರುವ ರೈತರ ಮೇಲೆ ಕೇಂದ್ರ ಸರ್ಕಾರ ದೌರ್ಜನ್ಯ ನಡೆಸುತ್ತಿದೆ. ಇದು ಹಿಂಸೆಯನ್ನು ಕೂಡಾ ಅಹಿಂಸೆಯ ಮೂಲಕ ಹೋರಾಡಿ ಗೆದ್ದ ಮಹಾತ್ಮ ಗಾಂಧೀಜಿ ಅವರಿಗೆ ತೋರುವ ಅಗೌರವವಾಗಿದೆ ಎಂದರು.

ಪ್ರಸನ್ನವದನ ಪ್ರಧಾನಿ: ರೈತರು ಎರಡು ತಿಂಗಳಿನಿಂದ ದೆಹಲಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಆದರೂ ಪ್ರಧಾನಿಯವರು ಏನೂ ನಡೆದಿಲ್ಲ ಎಂಬಂತೆ ಪ್ರಸನ್ನವದನರಾಗಿದ್ದಾರೆ. ಕಾಯಿದೆಗಳು ರೈತರ ಪರ ಎಂದು ರಾಷ್ಟ್ರಪತಿಯವರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರ ರಾಷ್ಡ್ರಪತಿಗಳಿಂದ ಸುಳ್ಳು ಹೇಳಿಸಿದೆ ಎಂದು ಸಿದ್ದರಾಮಯ್ಯ ಅವರು ಟೀಕಿಸಿದರು.

ಗಣರಾಜ್ಯೋತ್ಸವ ದಿನ ನಡೆದ ಹಿಂಸಾಚಾರ ಖಂಡಿಸುತ್ತೇನೆ, ಪ್ರಧಾನಿ ಮದ್ಯಪ್ರವೇಶಕ್ಕೆ ಮನವಿ ಮಾಡಿದ ಕೆನಡಾ ಸಂಸದ

ಗಣರಾಜ್ಯೋತ್ಸವ ದಿನ ನಡೆದ ಹಿಂಸಾಚಾರ ಖಂಡಿಸುತ್ತೇನೆ, ಪ್ರಧಾನಿ ಮದ್ಯಪ್ರವೇಶಕ್ಕೆ ಮನವಿ ಮಾಡಿದ ಕೆನಡಾ ಸಂಸದ


ಗಣರಾಜ್ಯೋತ್ಸವ ದಿನ ನಡೆದ ಹಿಂಸಾಚಾರ ಖಂಡಿಸುತ್ತೇನೆ, ಪ್ರಧಾನಿ ಮದ್ಯಪ್ರವೇಶಕ್ಕೆ ಮನವಿ ಮಾಡಿದ ಕೆನಡಾ ಸಂಸದ

ನವದೆಹಲಿ : ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆದ ರೈತರ ಟ್ರಾಕ್ಟರ್ ರ್ಯಾಲಿ ಹಿಂಸಾಚಾರವನ್ನು ಕೆನಡಾ ಸಂಸದ ಖಂಡಿಸಿದ್ದು, ಪ್ರಧಾನಿ ಮಧ್ಯಪ್ರವೇಶಕ್ಕೆ ಮನವಿ ಮಾಡಿದ್ದಾರೆ.

ರಾಷ್ಟ್ರೀಯ ಗಣರಾಜ್ಯೋತ್ಸವದಂದು ನಡೆದ ಹಿಂಸಾಚಾರವನ್ನು ಕೂಡಲೇ ಖಂಡಿಸುವಂತೆ ಕೆನಡಾ ಸಂಸದ ಹಾಗೂ ನ್ಯೂ ಡೆಮಾಕ್ರಟಿಕ್ ಪಾರ್ಟಿ (ಎನ್ ಡಿಪಿ) ಮುಖ್ಯಸ್ಥ ಪ್ರಧಾನಿ ಜಸ್ಟಿನ್ ಟ್ರುಡೆವ್ ಮದ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.

'ಭಾರತದಲ್ಲಿ ರೈತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ನನಗೆ ತೀವ್ರ ಕಳವಳವಿದೆ. ರೈತರಿಗೆ ತೊಂದರೆ ನೀಡುವವರನ್ನು ಹೊಣೆಗಾರರು ಮಾಡಬೇಕು ಮತ್ತು ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ರಕ್ಷಿಸಬೇಕು. ಈ ಹಿಂಸಾಚಾರವನ್ನು ಖಂಡಿಸಲು ನಾನು ಪ್ರಧಾನಿ ಜಸ್ಟಿನ್ ಟ್ರುಡ್ಯೂ ಅವರನ್ನು ಭೇಟಿ ಮಾಡುತ್ತಿದ್ದೇನೆ' ಎಂದು ಪ್ರತಿಭಟನಾನಿರತ ರೈತರ ಟ್ರ್ಯಾಕ್ಟರ್ ರ್ಯಾಲಿ ಹಿಂಸಾಚಾರದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.

Friday, 29 January 2021

 ದೆಹಲಿ ಬಾಂಬ್ ಸ್ಫೋಟ : ಶಂಕಿತ ಆರೋಪಿಗಳ ರೇಖಾ ಚಿತ್ರ ಸಿದ್ಧ

ದೆಹಲಿ ಬಾಂಬ್ ಸ್ಫೋಟ : ಶಂಕಿತ ಆರೋಪಿಗಳ ರೇಖಾ ಚಿತ್ರ ಸಿದ್ಧ


 ದೆಹಲಿ ಬಾಂಬ್ ಸ್ಫೋಟ : ಶಂಕಿತ ಆರೋಪಿಗಳ ರೇಖಾ ಚಿತ್ರ ಸಿದ್ಧ

ನವದೆಹಲಿ, ಜ.27- ದೆಹಲಿಯ ಇಸ್ರೇಲ್ ರಾಯಬಾರ ಕಚೇರಿ ಸಮೀಪ ನಡೆದಿರುವ ಸ್ಫೋಟದ ತನಿಖೆ ಚುರುಕುಗೊಂಡಿದ್ದು, ಕ್ಯಾಬ್ ಚಾಲಕನ ಮಾಹಿತಿ ಆಧರಿಸಿ ಶಂಕಿತ ಆರೋಪಿಗಳ ರೇಖಾ ಚಿತ್ರಗಳನ್ನು ಸಿದ್ಧ ಪಡಿಸಲಾಗಿದೆ. ದೆಹಲಿಯ ಪ್ರತಿಷ್ಠಿತ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಇಸ್ರೇಲ್ ರಾಯಬಾರ ಕಚೇರಿಯ ಸಮೀಪ ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಐಇಡಿ ಬಳಸಿ ಸ್ಫೋಟ ನಡೆಸಲಾಗಿದೆ. ಇದು ಲಘು ಪ್ರಮಾಣದ ಸ್ಫೋಟವಾಗಿರುವುದರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ. ನಾಲ್ಕೈದು ಕಾರುಗಳಿಗೆ ಸಣ್ಣ ಪ್ರಮಾಣದ ಹಾನಿಯಾಗಿದೆ.

ಘಟನೆ ಬಳಿಕ ಪ್ರತಿಕ್ರಿಯಿಸಿರುವ ಇಸ್ರೇಲ್, ಇದು ಭಯೋತ್ಪಾದನೆಯ ಕೃತ್ಯ ಎಂದು ವ್ಯಾಖ್ಯಾನಿಸಿದೆ. ಭಾರತೀಯ ಸಂಸ್ಥೆಗಳ ಜೊತೆಗೆ ಇಸ್ರೇಲ್‍ನ ಸಂಸ್ಥೆಗಳು ತನಿಖೆಗೆ ಕೈ ಜೋಡಿಸಲಿವೆ. ಭಾರತ ಮತ್ತು ಇಸ್ರೇಲ್‍ನ ಸೌಹಾರ್ದಯುತ ಸಂಬಂಧವನ್ನು ಕದಡಲು ನಡೆಸಿರುವ ಈ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದು ಹೇಳಿದೆ.

2020ರ ಜನವರಿಯಲ್ಲಿ ಅಮೇರಿಕಾದ ಅಧ್ಯಕ್ಷ ರಾಗಿದ್ದ ಡೋನಾಲ್ಡ್ ಟ್ರಂಪ್ ಅವರ ಆದೇಶದ ಮೇರೆಗೆ ಇರಾನ್‍ನ ಜನರಲ್ ಕ್ವಾಸೀಮ್ ಸೋಲೇಮಾನಿ ಮತ್ತು ಪರಮಾಣು ತಜ್ಞ ಮೋಸೇನ್ ಫಕ್ರೇದಾರನ್ನು ಹತ್ಯೆ ಮಾಡಲಾಗಿತ್ತು. ಬಾಗ್ದಾಗ್ ವಿಮಾನ ನಿಲ್ದಾಣದಲ್ಲಿ ದ್ರೋಣ್ ಮೂಲಕ ಏರ್ ಸ್ಟ್ರೈಕ್ ಮಾಡಿ ಹತ್ಯೆ ಮಾಡಲಾಗಿತ್ತು. ಅದಕ್ಕೆ ಪ್ರತಿಕಾರವಾಗಿ ಈ ಸ್ಫೋಟ ನಡೆಸಿರಬಹುದು ಎಂದು ಶಂಕಿಸಲಾಗಿದೆ.

ಸ್ಫೋಟದ ಬಳಿಕ ನಡೆದ ಸ್ಥಳ ಪರಿಶೀಲನೆಯಲ್ಲಿ ಮುಚ್ಚಿದ ಲಕೋಟೆಯಲ್ಲಿರುವ ಪತ್ರವೊಂದು ಪತ್ತೆಯಾಗಿದ್ದು, ಅದರಲ್ಲಿ ಇದು ಟ್ರೇಲರ್ ಮಾತ್ರ ಸಿನಿಮಾ ಇನ್ನೂ ಮುಂದೆ ಇದೆ ಎಂದು ಬರೆದಿರುವುದಾಗಿ ಮೂಲಗಳು ತಿಳಿಸಿವೆ. ಮುಚ್ಚಿದ ಲಕೋಟೆಯಲ್ಲಿರುವ ಪತ್ರ ವಶ ಪಡಿಸಿಕೊಂಡಿರುವುದನ್ನು ಖಚಿತ ಪಡಿಸಿರುವ ದೆಹಲಿ ಪೊಲೀಸ್ ಹೆಚ್ಚುವರಿ ಸಾರ್ವಜನಿಕ ಸಂಪರ್ಕಾಧಿಕಾರಿ ಅನಿಲ್ ಮಿತ್ತಲ್ ಅವರು, ಪತ್ರದಲ್ಲಿರುವ ಮಾಹಿತಿಯನ್ನು ಬಹಿರಂಗ ಪಡಿಸಲು ನಿರಾಕರಿಸಿದ್ದಾರೆ.

ಐಇಡಿ ಸ್ಫೋಟಕದಲ್ಲಿ ತಂಪುಪಾನಿಯದ ಬಾಟಲ್‍ನ ಗಾಜಿನ ಚೂರು ಮತ್ತು ಬೇರಿಂಗ್ ಬಾಲ್‍ಗಳನ್ನು ಬಳಸಿರುವುದು ಸ್ಥಳ ಪರಿಶೀಲನೆ ನಡೆಸಿದ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರಿಗೆ ತಿಳಿದು ಬಂದಿದೆ. ಬಾಲ್ ಬೇರಿಂಗ್ ಕಾರುಗಳಿಗೆ ಬಡಿದು ಹಾನಿಯಾಗಿದೆ

ದೆಹಲಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿರುವ ಸ್ಫೋಟಕಗಳನ್ನು ಎಸೆದು ಹೋಗಲು ಬಳಸಿದ ಕ್ಯಾಬ್‍ನ್ನು ಪತ್ತೆ ಹಚ್ಚಿದ್ದಾರೆ. ಕ್ಯಾಬ್‍ನ ಚಾಲಕನನ್ನು ವಶಕ್ಕೆ ಪಡೆದು, ಆತ ನೀಡಿದ ಮಾಹಿತಿ ಆಧರಿಸಿ ಇಬ್ಬರು ಶಂಕಿತರ ರೇಖಾ ಚಿತ್ರ ಸಿದ್ಧ ಪಡಿಸಲಾಗಿದೆ. ಈ ಮೂಲಕ ಸ್ಫೋಟದ ತನಿಖೆಯನ್ನು ಚುರುಕುಗೊಳಿಸಲಾಗಿದೆ.

 ಕ್ಯಾಲಿಫೋರ್ನಿಯಾದಲ್ಲಿ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು

ಕ್ಯಾಲಿಫೋರ್ನಿಯಾದಲ್ಲಿ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು

 

ಕ್ಯಾಲಿಫೋರ್ನಿಯಾದಲ್ಲಿ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು

ನವದೆಹಲಿ: ಅಮೆರಿಕದ ಕ್ಯಾಲಿಫೋರ್ನಿಯಾದ ಡೇವಿಸ್ ನಗರದ ಸೆಂಟ್ರಲ್ ಪಾರ್ಕ್ ನಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ದುಶ್ಕರ್ಮಿಗಳು ಧ್ವಂಸಗೊಳಿಸಿದ್ದು, ವಿದೇಶಾಂಗ ಸಚಿವಾಲಯ ಬಲವಾಗಿ ಖಂಡಿಸಿದೆ.

ಜನವರಿ 28ರಂದು ದುಷ್ಕರ್ಮಿಗಳು ಕ್ಯಾಲಿಫೋರ್ನಿಯಾದ ಡೇವಿಸ್ ಸೆಂಟ್ರಲ್ ಪಾರ್ಕ್ ನಲ್ಲಿ ಗಾಂಧೀಜಿ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿತ್ತು. ಪ್ರತಿಮೆಯನ್ನು ಭಾರತ ಸರ್ಕಾರ 2016ರಲ್ಲಿ ಉಡುಗೊರೆಯಾಗಿ ನೀಡಿತ್ತು.

ಪ್ರಪಂಚವೇ ನೆಚ್ಚಿಕೊಂಡ ಶಾಂತಿ ಮತ್ತು ನ್ಯಾಯದ ಪ್ರತೀಕವಾಗಿದ್ದ ನಾಯಕನ ಪ್ರತಿಮೆಯನ್ನು ಧ್ವಂಸಗೊಳಿಸಿರುವ ಕ್ರಮ ದುರುದ್ದೇಶಪೂರ್ವಕವಾಗಿದ್ದು ಖಂಡನೀಯ ಕೃತ್ಯವೆಂದು ವಿದೇಶಾಂಗ ಸಚಿವಾಲಯ ಹೇಳಿದೆ.

ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಅಮೆರಿಕ ಸರ್ಕಾರ ಸಮಗ್ರ ತನಿಖೆ ನಡೆಸಿ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

 ಪ್ರತಿಭಟನೆಗೆ ಪಾಕ್​ನಿಂದ ಶಸ್ತ್ರಾಸ್ತ್ರ ಪೂರೈಕೆ: ಸ್ಫೋಟಕ ಮಾಹಿತಿ ನೀಡಿದ ಪಂಜಾಬ್​ ಸಿಎಂ

ಪ್ರತಿಭಟನೆಗೆ ಪಾಕ್​ನಿಂದ ಶಸ್ತ್ರಾಸ್ತ್ರ ಪೂರೈಕೆ: ಸ್ಫೋಟಕ ಮಾಹಿತಿ ನೀಡಿದ ಪಂಜಾಬ್​ ಸಿಎಂ

 

ಪ್ರತಿಭಟನೆಗೆ ಪಾಕ್​ನಿಂದ ಶಸ್ತ್ರಾಸ್ತ್ರ ಪೂರೈಕೆ: ಸ್ಫೋಟಕ ಮಾಹಿತಿ ನೀಡಿದ ಪಂಜಾಬ್​ ಸಿಎಂ

ಚಂಡೀಗಢ: ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ರೈತರ ಹೆಸರಿನಲ್ಲಿ ನಡೆಯುತ್ತಿರುವ ಪ್ರತಿಭಟನೆ, ಆನಂತರ ದೆಹಲಿಯಲ್ಲಿ ನಡೆದಿರುವ ಹಿಂಸಾಚಾರ, ಬಾಂಬ್​ಸ್ಫೋಟ ಎಲ್ಲವನ್ನೂ ತಾಳೆಹಾಕಿ ನೋಡಿದಾಗ ಇದರ ಹಿಂದಿರುವ ಶಕ್ತಿ ಯಾವುದು ಇರಬಹುದು ಎಂದು ಎಲ್ಲೆಡೆ ಲೆಕ್ಕಾಚಾರ ಶುರುವಾಗಿದೆ. ಈ ನಡುವೆಯೇ ಪಂಜಾಬ್​ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸ್ಫೋಟಕ ಮಾಹಿತಿಯನ್ನು ನೀಡಿದ್ದಾರೆ.

ಹಿಂಸಾಚಾರದಲ್ಲಿ ರೈತರು ಭಾಗಿಯಾಗಿದ್ದಾರೆ ಎನ್ನುವುದನ್ನು ನಾನು ನಂಬುವುದಿಲ್ಲ. ತನಿಖಾ ಸಂಸ್ಥೆಗಳು ಸರಿಯಾಗಿ ತನಿಖೆ ನಡೆಸಿ, ಕೃತ್ಯ ನಡೆಸಿದವರಿಗೆ ಶಿಕ್ಷೆ ನೀಡಬೇಕು ಎಂದು ದೆಹಲಿ ಹಿಂಸಾಚಾರದ ನಂತರ ಸಿಂಗ್​ ಅವರು ಪ್ರತಿಕ್ರಿಯೆ ನೀಡಿದ್ದರು. ಗಣರಾಜ್ಯೋತ್ಸದ ದಿನ ನಡೆದ ಘಟನೆ ಯಾವುದೇ ಭಾರತೀಯ ಹೆಮ್ಮೆಯಿಂದ ಹೇಳಿಕೊಳ್ಳುವಂಥದ್ದು ಅಲ್ಲ. ಕೆಂಪುಕೋಟೆ ನಮ್ಮ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ಸಂಕೇತ. ಆ ದಿನ ನಡೆದ ಕೃತ್ಯ ನೋಡಿ ನನಗೆ ಬೇಸರವಾಗಿತ್ತು ಎಂದು ಅವರು ನೋವು ತೋಡಿಕೊಂಡಿದ್ದರು.

ಇದರ ಬೆನ್ನಲ್ಲೇ ಇದೀಗ ಆತಂಕಕಾರಿ ವಿಷಯವನ್ನು ಮುಖ್ಯಮಂತ್ರಿ ಸಿಂಗ್​ ಬಹಿರಂಗಪಡಿಸಿದ್ದಾರೆ. ರೈತರು ಪ್ರತಿಭಟನೆ ಶುರು ಮಾಡಿದ ಆರಂಭದಿಂದ ಅಂದರೆ ಅಕ್ಟೋಬರ್‌ ತಿಂಗಳಿನಿಂದಲೇ ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳು ಬರುತ್ತಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. ರೈತರ ಹೆಸರಿನಲ್ಲಿ ಉಗ್ರ ಶಕ್ತಿಗಳು ಹಿಂಸೆಯನ್ನು ಸೃಷ್ಟಿಮಾಡಲು ಹೊಂಚು ಹಾಕಿರುವ ಬಗ್ಗೆ ಕೇಂದ್ರವನ್ನು ಎಚ್ಚರಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಪಾಕಿಸ್ತಾನವು ಡ್ರೋಣ್​ಗಳ ಮೂಲಕ ಶಸ್ತ್ರಾಸ್ತ್ರಗಳನ್ನು ಕಳುಹಿಸುತ್ತಿದೆ ಮತ್ತು ಒಳನುಸುಳುವಿಕೆಗೆ ಸಹ ಪ್ರಯತ್ನಿಸುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಪ್ರತಿಭಟನೆಗೆ ಹಣದ ಹರಿವು ವಿದೇಶಗಳಿಂದ ಬರುತ್ತಿದೆ ಎಂಬುದಾಗಿ ಇದಾಗಲೇ ಹಲವಾರು ತನಿಖಾ ಸಂಸ್ಥೆಗಳು ವರದಿ ನೀಡಿರುವ ಬೆನ್ನಲ್ಲೇ ಇದೀಗ ಖುದ್ದು ಪಂಜಾಬ್​ ಮುಖ್ಯಮಂತ್ರಿಗಳೇ ಈ ಮಾಹಿತಿ ನೀಡಿರುವುದು ಪ್ರತಿಭಟನೆಯ ಹಿನ್ನೆಲೆಯಲ್ಲಿ ಬಿಚ್ಚಿಡುವಂತಾಗಿದೆ.

ಗಡಿ ಪ್ರದೇಶಗಳಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸಲು ಅತ್ತ ಚೀನಾ, ಇತ್ತ ಪಾಕಿಸ್ತಾನ ರೆಡಿಯಾಗಿ ನಿಂತಿವೆ. ಪಾಕಿಸ್ತಾನದಿಂದ ಡ್ರೋಣ್​ಗಳು ಬರುತ್ತಿರುವುದು ಹೆಚ್ಚಾಗಿವೆ. ಈ ಬಗ್ಗೆ ಹಿಂದೆಯೂ ನಾನು ಕೇಂದ್ರವನ್ನು ಎಚ್ಚರಿಸಿದ್ದೆ. ಪ್ರತಿಭಟನೆ ಶುರುವಾದಾಗಿನಿಂದಲೂ ಡ್ರೋಣ್​ ಚಟುವಟಿಕೆ ಹೆಚ್ಚಾಗಿದೆ. ಇದು ಅತ್ಯಂತ ಕಳವಳಕಾರಿಯಾದ ವಿಷಯವಾಗಿದೆ. ಈ ಬಗ್ಗೆ ಇನ್ನಾದರೂ ಕೇಂದ್ರ ಸರ್ಕಾರ ಎಚ್ಚರಿಕೆ ವಹಿಸಬೇಕಿದೆ ಎಂದು ಹೇಳಿದ್ದಾರೆ.

ಮಾಸ್ಕ್​ ಹಾಕಿಕೊಂಡು ದಾಳಿ ನಡೆಸಿದವರನ್ನು ಪತ್ತೆ ಮಾಡಬೇಕು. ಅವರು ಎಲ್ಲಿಂದ ಬಂದಿದ್ದಾರೆ ಎನ್ನುವುದನ್ನು ಪತ್ತೆ ಮಾಡಬೇಕು. ಸ್ಥಳೀಯರು ರೈತರ ವಿರುದ್ಧ ಈ ರೀತಿ ವರ್ತನೆ ಮಾಡಿದ್ದಾರೆ ಎನ್ನುವುದನ್ನು ನಾನು ನಂಬುವುದಿಲ್ಲ. ರೈತರ ಪ್ರತಿಭಟನೆಯ ದಿಕ್ಕು ತಪ್ಪಿಸಲು ಕೆಲ ಉದ್ರಿಕ್ತರನ್ನು ಬೇರೆ ಕಡೆಯಿಂದ ಕರೆಸಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದರು. ಅಲ್ಲದೇ ಪಾಕಿಸ್ತಾನ ಬಯಸಿದಂತೆ ಸಿಂಘೂ ಗಡಿಯಲ್ಲಿ ನಡೆಯುತ್ತಿದೆ ಹಾಗೂ ನಡೆದಿದೆ. ಪಂಜಾಬ್‌ನ ಶಾಂತಿ ಕದಡಲು ಪಾಕಿಸ್ತಾನ ಶ್ರಮಿಸುತ್ತಿರುವ ಬಗ್ಗೆ ಮಾಹಿತಿ ಇದ್ದಾಗ್ಯೂ ಘಟನೆ ನಡೆದಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

 ಮೊರಾದಾಬಾದ್: ಟ್ರಕ್‌-ಬಸ್‌ ನಡುವೆ ಭೀಕರ ಅಪಘಾತ, 10 ಮಂದಿ ಸಾವು

ಮೊರಾದಾಬಾದ್: ಟ್ರಕ್‌-ಬಸ್‌ ನಡುವೆ ಭೀಕರ ಅಪಘಾತ, 10 ಮಂದಿ ಸಾವು

 

ಮೊರಾದಾಬಾದ್: ಟ್ರಕ್‌-ಬಸ್‌ ನಡುವೆ ಭೀಕರ ಅಪಘಾತ, 10 ಮಂದಿ ಸಾವು

ಮೊರಾದಾಬಾದ್: ಉತ್ತರ ಪ್ರದೇಶದ ಮೊರಾದಾಬಾದ್‌ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 10 ಮಂದಿ ಮೃತಪಟ್ಟಿದ್ದಾರೆ.

ಟ್ರಕ್‌ ಹಾಗೂ ಬಸ್‌ನ ನಡುವೆ ಅಪಘಾತ ಸಂಭವಿಸಿದ್ದು, ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

₹2 ಲಕ್ಷ ಪರಿಹಾರ: ಮೃತರ ಕುಟುಂಬಸ್ಥರಿಗೆ ₹ 2 ಲಕ್ಷ, ಗಾಯಗೊಂಡವರಿಗೆ ₹50 ಸಾವಿರ ಪರಿಹಾರ ನೀಡುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ‌ ಘೋಷಿಸಿದ್ದಾರೆ.

 ಗಾಂಧಿ ಪುಣ್ಯಸ್ಮರಣೆ: ಶಾಂತಿದೂತನ ಸಮಾಧಿಗೆ ಪ್ರಧಾನಿ ಮೋದಿ ಸೇರಿ ಗಣ್ಯರ ಪುಷ್ಟನಮನ

ಗಾಂಧಿ ಪುಣ್ಯಸ್ಮರಣೆ: ಶಾಂತಿದೂತನ ಸಮಾಧಿಗೆ ಪ್ರಧಾನಿ ಮೋದಿ ಸೇರಿ ಗಣ್ಯರ ಪುಷ್ಟನಮನ

 

ಗಾಂಧಿ ಪುಣ್ಯಸ್ಮರಣೆ: ಶಾಂತಿದೂತನ ಸಮಾಧಿಗೆ ಪ್ರಧಾನಿ ಮೋದಿ ಸೇರಿ ಗಣ್ಯರ ಪುಷ್ಟನಮನ

ನವದೆಹಲಿ: ಗಾಂಧಿ ಪುಣ್ಯಸ್ಮರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ರಾಜ್​ಘಾಟ್​ನಲ್ಲಿರುವ ಶಾಂತಿಧೂತನ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.

ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಹಾಗೂ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಸಹ ಸಹ ಗಾಂಧಿ ಸಮಾಧಿಗೆ ಗೌರವ ಸಲ್ಲಿಸಿದರು.

ಇದಕ್ಕೂ ಮುನ್ನ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಬಾಪು ಅವರ ಪುಣ್ಯ ತಿಥಿಯಂದು ನಮ್ಮ ಗೌರವ. ಅವರ ಆದರ್ಶಗಳು ನಿರಂತರವಾಗಿ ಜನರನ್ನು ಉತ್ತೇಜಿಸಲಿ ಎಂದಿದ್ದಾರೆ.

ಹುತಾತ್ಮರ ದಿನದಂದು ಭಾರತದ ಸ್ವಾತಂತ್ರ್ಯ ಮತ್ತು ಪ್ರತಿಯೊಬ್ಬ ಭಾರತೀಯರ ಯೋಗಕ್ಷೇಮಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡ ಎಲ್ಲ ಮಹಾನ್ ಮಹಿಳೆಯರು ಮತ್ತು ಪುರುಷರ ವೀರರ ತ್ಯಾಗವನ್ನು ನಾವು ನೆನಪಿಸಿಕೊಳ್ಳುತ್ತೇವೆ ಎಂದು ಪ್ರಧಾನಿ ತಿಳಿಸಿದ್ದಾರೆ.

ಗಾಂಧಿ ಅವರನ್ನು 1948ರಂದು ನಾಥೂರಾಮ್​ ಗೋಡ್ಸೆ ಗುಂಡಿಟ್ಟು ಹತ್ಯೆಗೈದರು. ಹೀಗಾಗಿ ಗಾಂಧಿ ಹತ್ಯೆ ದಿನವನ್ನು ಹುತಾತ್ಮರ ದಿನವೆಂದು ಆಚರಿಸಲಾಗುತ್ತದೆ.

ಸದ್ಭಾವನಾ ದಿನ ಆಚರಿಸುವ ಮೂಲಕ ಒಂದು ದಿನ ಉಪವಾಸಕ್ಕೆ ರೈತರ ನಿರ್ಧಾರ

ಸದ್ಭಾವನಾ ದಿನ ಆಚರಿಸುವ ಮೂಲಕ ಒಂದು ದಿನ ಉಪವಾಸಕ್ಕೆ ರೈತರ ನಿರ್ಧಾರ


ಸದ್ಭಾವನಾ ದಿನ ಆಚರಿಸುವ ಮೂಲಕ ಒಂದು ದಿನ ಉಪವಾಸಕ್ಕೆ ರೈತರ ನಿರ್ಧಾರ


ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಪುಣ್ಯತಿಥಿಯಾದ ಇಂದು 'ಸದ್ಭಾವನಾ ದಿನ'ವನ್ನು ಆಚರಿಸುವ ಉಪವಾಸ ಸತ್ಯಾಗ್ರಹ ನಡೆಸಲು ಮುಂದಾಗಿದ್ದಾರೆ. ಹೆಚ್ಚಿನ ಸಂಖ್ಯೆಯ ರೈತರು ಸೇರಿಕೊಳ್ಳುವುದರಿಂದ ಮುಂದಿನ ದಿನಗಳಲ್ಲಿ ತಮ್ಮ ಆಂದೋಲನ ಮತ್ತಷ್ಟು ಬಲಗೊಳ್ಳುತ್ತದೆ ಎಂದು ರೈತ ಮುಖಂಡರು ಪ್ರತಿಪಾದಿಸಿದ್ದಾರೆ.

ದೆಹಲಿಯ ಸಿಂಘು ಗಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರೈತರು, ವಿವಾದಿತ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ನಮ್ಮ ಹೋರಾಟವನ್ನು ನಾಶಮಾಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು.

"ರೈತರನ್ನು ನಾಶಮಾಡಲು ಆಡಳಿತಾರೂಢ ಬಿಜೆಪಿಯ ಸಂಚು ಬಟಾ ಬಯಲಾಗಿದೆ ' ಎಂದು ಭಾರತೀಯ ಕಿಸಾನ್ ಯೂನಿಯನ್‌ನ ಜಗ್ಜೀತ್ ಸಿಂಗ್ ದಲ್ಲೇವಾಲ್ ಆರೋಪಿಸಿದ್ಧಾರೆ.

ರೈತ ಮುಖಂಡ ರಾಕೇಶ್ ಟಿಕಾಯತ್ ಅವರನ್ನು ಗುರುವಾರ ರಾತ್ರಿ ಗಾಜಿಪುರ ಗಡಿಯಿಂದ ಹೊರಹಾಕಲು ಪೊಲೀಸರು ಪ್ರಯತ್ನಿಸಿದ ನಂತರ ಎಲ್ಲಾ ಪ್ರಮುಖ ಪ್ರತಿಭಟನಾ ಸ್ಥಳಗಳಾದ ಗಾಜಿಪುರ, ಸಿಂಗು ಮತ್ತು ಟಿಕ್ರಿಗಳಲ್ಲಿ ಚಳವಳಿಗಾರರ ಸಂಖ್ಯೆ ಹೆಚ್ಚುತ್ತಿದೆ ಎಂದು ರೈತ ಮುಖಂಡರು ಪ್ರತಿಪಾದಿಸಿದರು.

"ಈ (ಬಿಜೆಪಿ) ಜನರಿಂದ ರಾಷ್ಟ್ರಧ್ವಜವನ್ನು ಗೌರವಿಸುವ ಕುರಿತು ನಮಗೆ ಉಪನ್ಯಾಸ ಅಗತ್ಯವಿಲ್ಲ. ಇಲ್ಲಿ ಕುಳಿತಿರುವ ಬಹುಪಾಲು ರೈತರ ಮಕ್ಕಳು ಗಡಿಯಲ್ಲಿ ಹೋರಾಡುತ್ತಿದ್ದಾರೆ" ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ಯುಧ್ವೀರ್ ಸಿಂಗ್ ಹೇಳಿದರು.

ರೈತರ ಆಂದೋಲನವನ್ನು ಹತ್ತಿಕ್ಕುವ ಸರ್ಕಾರದ ಹತಾಶ ಕ್ರಮ, ಅದರಲ್ಲೂ ವಿಶೇಷವಾಗಿ ಗಾಜಿಪುರ ಗಡಿಯನ್ನು ಖಾಲಿ ಮಾಡುವಂತೆ ಒತ್ತಾಯಿಸುವ ಮೂಲಕ ಹೋರಾಟ ಮತ್ತಷ್ಟು ಪ್ರವರ್ಧಮಾನಕ್ಕೆ ಬಂದಿದೆ ಎಂದು ಅವರು ಹೇಳಿದ್ದಾರೆ.

ಜನವರಿ 26 ರಂದು ನಡೆದ ಟ್ರಾಕ್ಟರ್ ಮೆರವಣಿಗೆಯಲ್ಲಿ ಸಾವಿರಾರು ಪ್ರತಿಭಟನಾನಿರತ ರೈತರು ಪೊಲೀಸರೊಂದಿಗೆ ಘರ್ಷಣೆ ನಡೆಸಿದರು. ಅವರಲ್ಲಿ ಹಲವರು ಟ್ರಾಕ್ಟರುಗಳ ಮೂಲಕ ಕೆಂಪು ಕೋಟೆಗೆ ನುಗ್ಗಿ ದಾಂಧಲೆ ನಡೆಸಿದ್ದರು. ಬಳಿಕ ಅನ್ಯ ಧ್ವಜ ಹಾರಿಸಿದ್ದರು.

ಶಾಂತಿಯುತ ರೈತರ ಆಂದೋಲನಕ್ಕೆ ಬಿಜೆಪಿ ಸರ್ಕಾರ ಕೋಮು ಬಣ್ಣವನ್ನು ಹಚ್ಚುತ್ತಿದೆ ಎಂದು ಸಂಯುಕ್ತಾ ಕಿಸಾನ್ ಮೋರ್ಚಾ ಹೇಳಿಕೆ ಬಿಡುಗಡೆ ಮಾಡಿತ್ತು.


 

 ಕೋವಿಡ್‌ ಮೊದಲ ಪ್ರಕರಣಕ್ಕೆ ವರ್ಷ, ಇನ್ನೂ ಇದೆ ಯುದ್ಧ

ಕೋವಿಡ್‌ ಮೊದಲ ಪ್ರಕರಣಕ್ಕೆ ವರ್ಷ, ಇನ್ನೂ ಇದೆ ಯುದ್ಧ


ಕೋವಿಡ್‌ ಮೊದಲ ಪ್ರಕರಣಕ್ಕೆ ವರ್ಷ, ಇನ್ನೂ ಇದೆ ಯುದ್ಧ


ದೇಶದಲ್ಲಿ ಕೋವಿಡ್‌ನ‌ ಮೊದಲ ಪ್ರಕರಣ ಪತ್ತೆಯಾಗಿ ಇಂದಿಗೆ ಒಂದು ವರ್ಷ. ಮೊದಲ ಪ್ರಕರಣ ದೇಶಾದ್ಯಂತ ಹುಟ್ಟುಹಾಕಿದ ಆತಂಕ ಅಷ್ಟಿಷ್ಟಲ್ಲ. 138 ಕೋಟಿ ಜನಸಂಖ್ಯೆಯಿರುವ ಭಾರತದಲ್ಲಿ ಪ್ರಕರಣ, ಸಾವುಗಳ ಸಂಖ್ಯೆ ಮಿತಿಮೀರಲಿದೆ ಎಂದು ಜಾಗತಿಕ ತಜ್ಞರು ಎಚ್ಚರಿಸಿದ್ದರು.


ಲಾಕ್‌ಡೌನ್‌, ಹಲವು ಕಠಿನ ನಿರ್ಬಂಧಗಳಿಲ್ಲದೇ ನಿಯಂತ್ರಣ ಸಾಧಿಸುವುದು ಗಂಭೀರ ಸವಾಲೇ ಆಗಿತ್ತು. ಆದರೆ ಹಲವಾರು ನಿರ್ಬಂಧ ಗಳ ಹೊರತಾಗಿಯೂ ಒಂದು ವರ್ಷದಲ್ಲಿ ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖೆ 1.72 ಕೋಟಿಗೆ ತಲುಪಿದೆ. ಇದು ವರೆಗೂ 1.52 ಲಕ್ಷ ಭಾರತೀಯರು ಸೋಂಕಿನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವನ್ನು ಅಂಕಿಸಂಖ್ಯೆಗಳಲ್ಲೇ ಅಳೆಯುವುದಕ್ಕೆ ಸಾಧ್ಯವಾಗದು. ಪ್ರತಿಯೊಂದು ಜೀವವೂ ಅಮೂಲ್ಯವಾದದ್ದು. ಒಂದು ಸಾವು, ಆ ಇಡೀ ಕುಟುಂಬದ ಮೇಲೆ ದೀರ್ಘಾವಧಿ ಉಂಟುಮಾಡುವ ಪರಿಣಾಮ ಅಷ್ಟಿಷ್ಟಲ್ಲ. ಅದರಲ್ಲೂ ಕುಟುಂಬಕ್ಕೆ ಆಧಾರವಾಗಿದ್ದವರೇ ತೀರಿ ಹೋದಾಗ, ಅತಂತ್ರದ ಕಾರ್ಮೋಡ ಕುಟುಂಬದ ಮೇಲೆ ಕವಿದುಬಿಡುತ್ತದೆ.


ಹೀಗಾಗಿ ಈ ಮಹಾಮಾರಿಯ ಮೇಲೆ ಸಂಪೂರ್ಣ ಜಯ ಸಾಧಿಸುವುದು ಅತ್ಯಗತ್ಯ. ಗಮನಾರ್ಹ ಸಂಗತಿಯೆಂದರೆ ಈಗ ಭಾರತ ಲಸಿಕೆ ಪ್ರಕ್ರಿಯೆಯನ್ನು ಆರಂಭಿಸಿದೆ. ಕೊವಿಶೀಲ್ಡ್‌ ಮತ್ತು ಕೊವ್ಯಾಕ್ಸಿನ್‌ ಲಸಿಕೆಗಳು ಭಾರತೀಯರಿಗೆ ಸಂಜೀವಿನಿಯಾಗಿ ಪರಿಣಮಿಸಲಿವೆ. ಇನ್ನು ಪರೀಕ್ಷೆಯ ಕಿಟ್‌ಗಳು, ಪಿಪಿಇ ಕಿಟ್‌ಗಳ ಅಭಾವವನ್ನೂ ಮೆಟ್ಟಿನಿಂತು ಅನ್ಯ ದೇಶಗಳಿಗೆ ರಫ್ತುಮಾಡುವಷ್ಟು ಉತ್ಪಾದನೆ ಹೆಚ್ಚಾಗಿದೆ. ಇದುವರೆಗೂ 19.5 ಕೋಟಿ ಜನರನ್ನು ಪರೀಕ್ಷಿಸಲಾಗಿದೆ. ದೇಶದಲ್ಲೀಗ ಚೇತರಿಕೆ ಪ್ರಮಾಣ 96.96 ಪ್ರತಿಶತಕ್ಕೆ ಏರಿಕೆಯಾಗಿದೆ.


ಈಗಲೂ ಜಗತ್ತಿನ ಕೋವಿಡ್‌ ಹಾಟ್‌ಸ್ಪಾಟ್‌ಗಳಲ್ಲಿ ಅಮೆರಿಕ ಅನಂತರ ಭಾರತ ಎರಡನೇ ಸ್ಥಾನದಲ್ಲಿದೆಯಾದರೂ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗುತ್ತಿದ್ದು, ಭಾರತವೀಗ ಹದಿನೈದನೇ ಸ್ಥಾನಕ್ಕೆ ಜಾರಿದೆ. ಶುಕ್ರವಾರದ ವೇಳೆಗೆ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1.72 ಲಕ್ಷಕ್ಕೆ ಇಳಿದಿರುವುದು ಗಮನಾರ್ಹ. ಇನ್ನು ದೇಶದ 146 ಜಿಲ್ಲೆಗಳಲ್ಲಿ ಕಳೆದ ಏಳು ದಿನಗಳಿಂದ ಒಂದೇ ಒಂದು ಕೊರೊನಾ ಸೋಂಕಿನ ಪ್ರಕರಣ ಪತ್ತೆಯಾಗಿಲ್ಲ. ಸೋಂಕಿನ ಪ್ರಭಾವ ತಗ್ಗಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್‌ ಹೇಳಿದ್ದಾರೆ.


ಇವೆಲ್ಲ ಗುಣಾತ್ಮಕ ಬೆಳವಣಿಗೆಯ ಮಧ್ಯೆಯೇ, ಈಗಲೂ ಹಣೆಯಲ್ಲಿ ಚಿಂತೆಯ ಗೆರೆಗಳು ಮೂಡುವಂತೆ ಮಾಡುತ್ತಿರುವ ಸಂಗತಿಯೆಂದರೆ, ಜನಸಾಮಾನ್ಯರ ವರ್ತನೆ. ಎಲ್ಲ ಆಶಾದಾಯಕ ಬೆಳವಣಿಗೆಯನ್ನು ಗಮನಿಸಿ ಕೋವಿಡ್‌ ದೂರವಾಗಿಬಿಟ್ಟಿದೆಯೇನೋ ಎಂಬಂತೆ ಜನರು ವರ್ತಿಸುತ್ತಿದ್ದಾರೆ.


ನೆನಪಿರಲಿ, ಲಸಿಕೆ ಪ್ರಕ್ರಿಯೆ ಆರಂಭವಾಗಿದೆಯಾದರೂ, ಅಗತ್ಯ ಇರುವ ಎಲ್ಲರಿಗೂ ಲಸಿಕೆಗಳು ತಲುಪುವುದಕ್ಕೆ ಇನ್ನೂ ಸಮಯ ಹಿಡಿಯ ಲಿದೆ. ಹೀಗಾಗಿ ಮುಂದಿನ ಕೆಲವು ತಿಂಗಳುಗಳು ಭಾರತಕ್ಕೆ ಅತ್ಯಂತ ನಿರ್ಣಾಯಕ ಘಳಿಗೆಗಳಾಗಲಿವೆ. ಈ ಹೊತ್ತಿನಲ್ಲಿ ನಾವೆಲ್ಲ ಮೈಮರೆತು ಬೇಜ ವಾಬ್ದಾರಿಯಿಂದ ವರ್ತಿಸಿದರೆ, ಆರೋಗ್ಯ ವಲಯದ ಮೇಲೆ ಮತ್ತೆ ಅಪಾರ ಹೊರೆ ಸೃಷ್ಟಿಯಾಗುವುದು ಖಚಿತ. ಹೀಗಾಗಿ ಪ್ರತಿದಿನವೂ ತಪ್ಪದೇ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವಿಕೆ, ಕೈಗಳನ್ನು ಆಗಾಗ ಸೋಪಿನಿಂದ ತೊಳೆಯುವ ಎಚ್ಚರಿಕೆ ಕ್ರಮಗಳು ಮುಂದುವರಿಯಲಿ.


ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ!

ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ!


ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ!


ಬೆಂಗಳೂರು: ಮೇ 24ರಿಂದ ಜೂ.10ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್​ ಕುಮಾರ್ ಹೇಳಿದ್ದಾರೆ. ಅವರು ಇಂದು ಶುಕ್ರವಾರ ಸಮಗ್ರ ಶಿಕ್ಷಣ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ.


ಕೊರೋನಾದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಈಡಾಗಿ ಮಕ್ಕಳ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಶುಲ್ಕವನ್ನು ಕಟ್ಡುವ ಸ್ಥಿತಿಯಲ್ಲಿಲ್ಲ.  ಹೀಗಾಗಿ 2019ರ ಬೋಧನಾ ಶುಲ್ಕದ ಶೇ.70ರಷ್ಟು ಪಡೆಯಬೇಕು. ಶಾಲೆಗಳು ಯಾವುದೇ ಅಭಿವೃದ್ಧಿ ಶುಲ್ಕ ಪಡೆಯಬಾರದು. 1, 2 ಅಥವಾ 3 ಕಂತುಗಳ ಮೂಲಕ ಹಣವನ್ನು ಪಡೆದುಕೊಳ್ಳಬಹುದೆಂದು ಸಚಿವರು ತಿಳಿಸಿದ್ದಾರೆ. ಒಂದು ವೇಳೆ ಹೆಚ್ಚಿನ ಶುಲ್ಕವನ್ನು ಪಡೆದುಕೊಂಡಿದ್ದರೆ ಮುಂದಿನ ವರ್ಷಕ್ಕೆ ಸರಿದೂಗಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ರೈತ ಕ್ರಾಂತಿ | ನಾಳೆ ಸಂಜೆ 5 ಗಂಟೆ ವರೆಗೆ ಹರ್ಯಾಣದಲ್ಲಿ ಇಂಟರ್ನೆಟ್ ಬಂದ್

ರೈತ ಕ್ರಾಂತಿ | ನಾಳೆ ಸಂಜೆ 5 ಗಂಟೆ ವರೆಗೆ ಹರ್ಯಾಣದಲ್ಲಿ ಇಂಟರ್ನೆಟ್ ಬಂದ್


ರೈತ ಕ್ರಾಂತಿ | ನಾಳೆ ಸಂಜೆ 5 ಗಂಟೆ ವರೆಗೆ ಹರ್ಯಾಣದಲ್ಲಿ ಇಂಟರ್ನೆಟ್ ಬಂದ್


ನವದೆಹಲಿ : ದೆಹಲಿ ಗಡಿ ಭಾಗಗಳಲ್ಲಿ ರೈತ ಹೋರಾಟ ಗಂಟೆಗಂಟೆಗೂ ತೀವ್ರಗೊಳ್ಳುತ್ತಿರುವ ನಡುವೆ, ಹರ್ಯಾಣದ ಬಿಜೆಪಿ ಸರಕಾರ ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿದೆ.

ನಾಳೆ ಸಂಜೆ 5 ಗಂಟೆ ವರೆಗೆ ಹರ್ಯಾಣದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ. ಸುಮಾರು 14 ರಾಜ್ಯಗಳಲ್ಲಿ ಇದರಿಂದ ಇಂಟರ್ ನೆಟ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ವರದಿಗಳಾಗಿವೆ.  ರೈತ ಹೋರಾಟವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಸರಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಮುಖ್ಯವಾಹಿನಿ ಮಾಧ್ಯಮಗಳು ಬಿಜೆಪಿ ಸರಕಾರದ ಪರವಾಗಿ ರೈತ ಹೋರಾಟದ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಅಪಪ್ರಚಾರದಲ್ಲಿ ತೊಡಗಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟನಾ ಸ್ಥಳದಿಂದ ಸತ್ಯ ಸುದ್ದಿಗಳು ಹರಡುತ್ತಿರುವುದರಿಂದ ಅದನ್ನು ತಡೆಯಲು ಹರ್ಯಾಣದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ ಎನ್ನಲಾಗುತ್ತಿದೆ.

 ವಿಧಾನ ಪರಿಷತ್ತಿನಲ್ಲಿ ನೀಲಿ ಚಿತ್ರ ವೀಕ್ಷಣೆ? ಸ್ಪಷ್ಟನೆ ನೀಡಿದ ಕಾಂಗ್ರೆಸ್ ಸದಸ್ಯ!

ವಿಧಾನ ಪರಿಷತ್ತಿನಲ್ಲಿ ನೀಲಿ ಚಿತ್ರ ವೀಕ್ಷಣೆ? ಸ್ಪಷ್ಟನೆ ನೀಡಿದ ಕಾಂಗ್ರೆಸ್ ಸದಸ್ಯ!

 

ವಿಧಾನ ಪರಿಷತ್ತಿನಲ್ಲಿ ನೀಲಿ ಚಿತ್ರ ವೀಕ್ಷಣೆ? ಸ್ಪಷ್ಟನೆ ನೀಡಿದ ಕಾಂಗ್ರೆಸ್ ಸದಸ್ಯ!

ಬೆಂಗಳೂರು: ವಿಧಾನ ಪರಿಷತ್ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಅವರು ನೀಲಿ ಚಿತ್ರ ವೀಕ್ಷಣೆ ಮಾಡಿರುವ ಆರೋಪ ಕೇಳಿಬಂದಿದೆ. ಆದರೆ ಪ್ರಕಾಶ್ ರಾಥೋಡ್ ಈ ವಿಚಾರವನ್ನು ಅಲ್ಲಗಳೆದಿದ್ದು, ಕೇವಲ ಮೆಸೇಜ್ ಡಿಲೀಟ್ ಮಾಡುತ್ತಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಕಾಶ್ ರಾಥೋಡ್ ಅವರು ಕಲಾಪದಲ್ಲಿ ನೀಲಿ ಚಿತ್ರ ವೀಕ್ಷಣೆ ಮಾಡಿದ್ದಾರೆಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದರ ಕುರಿತು ಸ್ಪಷ್ಟಪಡಿಸಿದ ಅವರು, ನಾನು ಅಂತಹದ್ದೇನು ನೋಡಲಿಲ್ಲ. ಮೊಬೈಲ್ ನಲ್ಲಿ ಕೆಲವು ಮೆಸೇಜ್ ಗಳು ಹೆಚ್ಚಾಗಿದ್ದವು. ಅದನ್ನು ಡಿಲೀಟ್ ಮಾಡುತ್ತಿದ್ದೆ. ಅಂತಹ ಕೆಲಸವನ್ನ ನಾನು ಮಾಡುವುದಿಲ್ಲ. ದಯಮಾಡಿ ತಪ್ಪು ಮಾಹಿತಿ ಕೊಡಬಾರದು ಎಂದಿದ್ದಾರೆ.

ನಾನು ಯಾವುದೇ ಚಿತ್ರವನ್ನ ನೋಡಿಲ್ಲ. ದಿನ ನಿತ್ಯ ಸಾವಿರಾರು ಮೆಸೇಜ್ ಬರುತ್ತದೆ, ನನ್ನ ಮೊಬೈಲ್ ನಲ್ಲಿ 15 ಸಾವಿರ ಮೆಸೇಜ್ ಇತ್ತು. ಅವುಗಳನ್ನು ಅಳಿಸುತ್ತಿದ್ದೆ. ಮೊಬೈಲ್ ನಲ್ಲಿ ಸ್ಟೋರೇಜ್ ಜಾಸ್ತಿಯಾಗಿದೆ. ಜನರಲ್ ಆಗಿ ವಿಡಿಯೋಗಳು ಬಂದಿವೆ. ಅದನ್ನು ಡಿಲೀಟ್ ಮಾಡುತ್ತಿದ್ದೆ ಎಂದಿದ್ದಾರೆ.

ನಾನು ಅಶ್ಲೀಲ ವಿಡಿಯೋ ನೋಡಲೇ ಇಲ್ಲಾ. ಕೆಲವೊಂದು ಫೋಟೋ, ದೃಶ್ಯ ಬಂದಿರಬಹುದು. ಆದರೆ, ನಾನು ಅಂತಹ ವಿಡಿಯೋವನ್ನು ನೋಡಿಲ್ಲ ಎಂದು ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಹೇಳಿದರು.