ಎಲಿಮಲೆ ಮಾಜಿ ಮುದರ್ರಿಸ್, SYS ಕಳಂಜಿಬೈಲ್ ಬ್ರಾಂಚ್ ನಾಯಕರಾದ ಪಿ.ಕೆ ಅಬ್ದುಲ್ ರಝಾಕ್ ಸಖಾಫಿ ಕಲ್ಲಕಟ್ಟ ವಫಾತಾದರು
ಬದುಕೆಂಬುದು ಅನಶ್ವರ ಎಂಬುದನ್ನು ಮತ್ತೊಮ್ಮೆ ನಮ್ಮೆಡೆಗೆ ತಿಳಿಸಿ ಶೈಖುನಾ ಕಳಂಜಿಬೈಲು ಅಬ್ದುರ್ರಝಾಖ್ ಸಖಾಫಿ ಉಸ್ತಾದರು(ಎಲಿಮಲೆ ಉಸ್ತಾದ್) ನಮ್ಮನ್ನಗಲಿದ್ದಾರೆ. ಅಕ್ಷರಶ ತೆರೆಮರೆಯಲ್ಲಿದ್ದ ಅನರ್ಘ್ಯ ರತ್ನವೊಂದನ್ನು ನಾವು ಕಳೆದುಕೊಂಡಿದ್ದೇವೆ. ಸುಮಾರು ಮೂರೂವರೆ ದಶಕಗಳ ಕಾಲ ದರ್ಸ್ ರಂಗದಲ್ಲಿ ಮಿಂಚಿ ನಿಂತು ನೂರಾರು ಶಿಷ್ಯಪಡೆಯನ್ನು ಸಂಪಾದಿಸಿ, ಬದುಕನ್ನಿಡೀ ಆರಾಧನೆಯಲ್ಲಿ ಅದ್ದಿ ತೆಗೆದು ತನ್ನ ಇಷ್ಟದ ದರ್ಸಿನಿಂದಲೇ ಶಾಶ್ವತಲೋಕದೆಡೆಗೆ ಪಯಣಿಸಲು ಸಾಧ್ಯವಾಗಿರುವುದು ಅವರ ದರ್ಸ್ ಗೆ ಅಲ್ಲಾಹನ ಸಂತೃಪ್ತಿ ದೊರಕಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿದೆ. ಅಲ್ಲಾಹನು ಅವರ ಪಾರತ್ರಿಕ ಪದವಿಗಳನ್ನು ಉನ್ನತಗೊಳಿಸಲಿ.
ವರದಿ: ಸಲ್ಮಾನ್ ಎಲಿಮಲೆ
0 التعليقات: