Monday, 14 December 2020

ಸಾಲಗಾರರಿಗೆ `RBI' ನಿಂದ ಭರ್ಜರಿ ಸಿಹಿಸುದ್ದಿ


ಸಾಲಗಾರರಿಗೆ `RBI' ನಿಂದ ಭರ್ಜರಿ ಸಿಹಿಸುದ್ದಿ

ನವದೆಹಲಿ: ಕೋವಿಡ್-19 ರ ಕಾರಣದಿಂದ ಸಾಲ ಮರುಪಾವತಿಮಾಡಲು ತೊಂದರೆ ಎದುರಿಸುತ್ತಿರುವ ಸಾಲ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಸ್ಪಷ್ಟಪಡಿಸಿದೆ. ಕೋವಿಡ್-19 ನ ತೊಂದರೆಯ ಬಗ್ಗೆ ಪದೇ ಪದೇ ಕೇಳಿದ ಪ್ರಶ್ನೆಗಳಿಗೆ (FAQ) ವಿವರಣೆಯಲ್ಲಿ, ಸಾಲನೀಡುವ ಸಂಸ್ಥೆಗಳ ಮುಂದೆ ಅರ್ಜಿ ಯೊಂದನ್ನು ಭರ್ತಿ ಮಾಡುವ ಮೂಲಕ ಸಾಲಪಡೆಯುವವರು ಈ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು ಎಂದು ಕೇಂದ್ರ ಬ್ಯಾಂಕ್ ಹೇಳಿದೆ.

ಕೋವಿಡ್-19 ರ ಪರಿಸ್ಥಿತಿಗಳಲ್ಲಿ ಸಾಮಾನ್ಯ ವ್ಯಾಪಾರದ ಅಡಚಣೆಯಿಂದ ಾಗಿ ಸಾಲದ ಕಂತುಗಳನ್ನು ಮರುಪಾವತಿಸಲು ಸಾಧ್ಯವಾಗದ ವರಿಗೆ ನೆರವಾಗಲು ರಿಸರ್ವ್ ಬ್ಯಾಂಕ್ ಪ್ರತ್ಯೇಕ ಪರಿಹಾರ ಯೋಜನೆಯನ್ನು ಪ್ರಕಟಿಸಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದು. ಇಂತಹ ಪ್ರಕರಣಗಳಲ್ಲಿ ಯಾವುದೇ ಅರ್ಜಿ ಯೊಂದಿಗೆ ಪರಿಹಾರ ಯೋಜನೆಯನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ. ಇದಕ್ಕಾಗಿ, ಸಾಲದಾತ ಸಂಸ್ಥೆಗೆ ಒಂದು ಅರ್ಜಿಯನ್ನು ನೀಡಿದರೆ ಸಾಕು, ಅದರ ಆಧಾರದ ಮೇಲೆ ಸಾಲ ಇತ್ಯರ್ಥ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು ಅಂತ ತಿಳಿಸಿದೆ.



SHARE THIS

Author:

0 التعليقات: