Friday, 18 December 2020

ಪ್ರಧಾನಿ ಮೋದಿ ಕಚೇರಿ OLXನಲ್ಲಿ ಮಾರಾಟಕ್ಕಿಟ್ಟ ನಾಲ್ವರ ಸೆರೆ


ಪ್ರಧಾನಿ ಮೋದಿ ಕಚೇರಿ OLXನಲ್ಲಿ ಮಾರಾಟಕ್ಕಿಟ್ಟ ನಾಲ್ವರ ಸೆರೆ

ಪ್ರಧಾನಿ ನರೇಂದ್ರ ಮೋದಿ ಅವರ ಕ್ಷೇತ್ರ ವಾರಣಾಸಿ ಕಚೇರಿಯನ್ನು ಒಎಲ್‌ಎಕ್ಸ್‌ನಲ್ಲಿ ಮಾರಾಟಕ್ಕಿಟ್ಟ ನಾಲ್ವರನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ವಾರಾಣಸಿಯ ಜವಾಹರ್‌ ನಗರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಜನ ಸಂಪರ್ಕ ಕಾರ್ಯಾಲಯವು ಮಾರಾಟಕ್ಕಿದೆ ಎಂದು ಒಎಲ್‌ಎಕ್ಸ್‌ ನಲ್ಲಿ ಜಾಹೀರಾತು ಪೋಸ್ಟ್‌ ಮಾಡಿದ್ದರು.

ವಿಷಯ ಗೊತ್ತಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಭೇಲ್‌ಪುರ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿ ನಾಲ್ವರನ್ನು ಬಂಧಿಸಿದ್ದಾರೆ. ಪ್ರಕರಣ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕೃತ್ಯ ಎಸಗಿದ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಆ ಪೈಕಿ ಒಬ್ಬ ಜನಸಂಪರ್ಕ ಕಾರ್ಯಾಲಯದ ಫೋಟೊ ತೆಗೆದಿದ್ದ ಎಂದು ತಿಳಿದುಬಂದಿದೆ.SHARE THIS

Author:

0 التعليقات: