Friday, 11 December 2020

ಮುಂದುವರೆದ ಸಾರಿಗೆ ನೌಕರರ ಮುಷ್ಕರ : KSRTC, BMTC ಪ್ರಯಾಣಿಕರ ಪರದಾಟ


ಮುಂದುವರೆದ ಸಾರಿಗೆ ನೌಕರರ ಮುಷ್ಕರ : KSRTC, BMTC ಪ್ರಯಾಣಿಕರ ಪರದಾಟ

ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಬೇಡಿಕೆ ಈಡೇರುವವರೆಗೂ ಮುಷ್ಕರ ಮುಂದುವರಿಸಲಿದ್ದಾರೆ ಎಂದು ಪ್ರತಿಭಟನಾ ನಿತರರು ತಿಳಿಸಿದ್ದಾರೆ.

ನಿನ್ನೆ ರಾತ್ರಿ ಪಾಳಿಯ ಬಿಎಂಟಿಸಿ ಬಸ್ ಗಳಾದರೂ ರಸ್ತೆಗೆ ಇಳಿದಿದ್ದವು. ಇಂದು ಯಾವುದೇ ಬಿಎಂಟಿಸಿ ಬಸ್ ಗಳು ರಸ್ತೆಗಿಳಿಯುವುದಿಲ್ಲ. ರಾಜ್ಯಾದ್ಯಂತ ಕೆಎಸ್‌ಆರ್ಟಿಸಿ ಬಸ್ ಗಳ ಸಂಚಾರ ಕೂಡ ಇರುವುದಿಲ್ಲ ಎನ್ನಲಾಗಿದೆ.

1.37 ಲಕ್ಷ ಸಿಬ್ಬಂದಿ ಮುಷ್ಕರ ಕೈಗೊಂಡಿದ್ದಾರೆ. ನಾಲ್ಕು ನಿಗಮಗಳ 18 ಸಾವಿರ ಬಸ್ ಗಳು ನಿಂತಲ್ಲೇ ನಿಂತಿವೆ. ಡಿಸೆಂಬರ್ 10 ರಂದು ಸಾರಿಗೆ ನೌಕರರು ಪ್ರತಿಭಟನಾ ಮೆರವಣಿಗೆ ನಡೆಸಿ, ರ್ಯಾಲಿ ನಡೆಸಿದರೂ ಸರ್ಕಾರ ಸ್ಪಂದಿಸಲಿಲ್ಲ. ಬೇಡಿಕೆ ಈಡೇರಿಸುವ ಸಂಬಂಧ ಧರಣಿ ನಿರತರನ್ನು ಕರೆಸಿ ಚರ್ಚೆ ಮಾಡದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಮುಂದುವರೆಸಿದ್ದಾರೆ.


SHARE THIS

Author:

0 التعليقات: