ಫೇಸ್ಬುಕ್ ಕೈಯಿಂದ ವಾಟ್ಸ್ಆಯಪ್, ಇನ್ಸ್ಟಾಗ್ರಾಮ್ ಹೊರಕ್ಕೆ! ಮೊಕದ್ದಮೆ ಹೂಡಿದ FTC
ಮಣಿಪಾಲ: ಯುಎಸ್ ಫೆಡರಲ್ ಟ್ರೇಡ್ ಕಮಿಷನ್ (ಎಫ್ಟಿಸಿ) ದೈತ್ಯ ತಂತ್ರಜ್ಞಾನ ಕಂಪನಿ ಫೇಸ್ಬುಕ್ ವಿರುದ್ಧ ಸಮರ ಸಾರಿದೆ. ಫೇಸ್ಬುಕ್ ಸಂಸ್ಥೆಯಿಂದ ಇನ್ಸ್ಟಾಗ್ರಾಂ ಮತ್ತು ವಾಟ್ಸ್ಆಯಪ್ ಅನ್ನು ಬಲವಂತವಾಗಿ ಪ್ರತ್ಯೇಕಿಸಬೇಕು ಎಂದು ಅಮೆರಿಕದ ಫೆಡರಲ್ ಕೋರ್ಟ್ ಗೆ ಸಲ್ಲಿಸಲಾದ ಮೊಕದ್ದಮೆಯಲ್ಲಿ ಅದು ಹೇಳಿದೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ಏಕಸ್ವಾಮ್ಯ ಸಾಧಿಸಿ ಲಾಭವನ್ನು ಪಡೆದುಕೊಳ್ಳುವ ಮೂಲಕ ಫೇಸ್ಬುಕ್ ಸ್ಪರ್ಧೆಯನ್ನು ನಿಗ್ರಹಿಸುತ್ತದೆ ಎಂದು ಆರೋಪಿಸಿದೆ.
ಎಫ್ಟಿಸಿ ಮತ್ತು ಅದರ ಗುಂಪು ಇನ್ಸ್ಟಾಗ್ರಾಮ್ ಮತ್ತು ವಾಟ್ಸ್ಆಯಪ್ ಖರೀದಿಯತ್ತ ಗಮನ ಹರಿಸಿದೆ. ಫೇಸ್ಬುಕ್ 2012ರಲ್ಲಿ ಇನ್ಸ್ಟಾಗ್ರಾಮ್ ಅನ್ನು 715 ಮಿಲಿಯನ್ ಡಾಲರ್ಗೆ ಮತ್ತು ಎರಡು ವರ್ಷಗಳ ಬಳಿಕ ವಾಟ್ಸಾಪ್ ಅನ್ನು 22 ಬಿಲಿಯನ್ ಡಾಲರ್ಗೆ ಖರೀದಿಸಿತ್ತು. ಈ ಎರಡು ಕಂಪೆನಿಗಳನ್ನು ಖರೀದಿಸುವ ಮೂಲಕ ತನಗೆ ಭವಿಷ್ಯದಲ್ಲಿ ಎದುರಾಗಬಹುದಾದ ಸ್ಪರ್ಧೆಯನ್ನು ನಿಯಂತ್ರಿಸಲು ಫೇಸ್ಬುಕ್ ಬಯಸಿದೆ ಎಂದು ಬುಧವಾರ ಸಲ್ಲಿಸಲಾದ ದೂರಿನಲ್ಲಿ ಎಫ್ಟಿಸಿ ತಿಳಿಸಿದೆ.
ಆದಾಯಕ್ಕೆ ಕಡಿವಾಣ?
ಎಫ್ಟಿಸಿ ಫೇಸ್ಬುಕ್ ಸಂಸ್ಥೆಯನ್ನು ಎರಡು ಸಂಸ್ಥೆಯನ್ನಾಗಿ ಮಾಡಲು ಸೂಚಿಸಲಾಗಿದೆ. ಇದು ಸಾಧ್ಯವಾದರೆ ಸಿಇಒ ಮಾರ್ಕ್ ಜುಕರ್ಬರ್ಗ್ ಅವರ ಆದಾಯಕ್ಕೆ ಕೊಕ್ಕೆ ಬೀಳಲಿದೆ. ಕಂಪೆನಿಯ ಆದಾಯದ ಬೆಳವಣಿಗೆಗೆ ಇನ್ಸ್ಟಾಗ್ರಾಮ್ ಪ್ರಮುಖ ಕೊಡುಗೆ ನೀಡುತ್ತಿದೆ. ಡಿಜಿಟಲ್ ಕಾಮರ್ಸ್ ಗೆ ಫೇಸ್ಬುಕ್ ವಾಟ್ಸಾಪ್ ಅನ್ನು ಆವಲಂಭಿಸಿದೆ. ಹೀಗಾಗಿ ಈ ಎರಡು ಟೆಕ್ ಪ್ಲಾಟ್ಫಾರ್ಮ್ಗಳನ್ನು ಫೇಸ್ಬುಕ್ನಿಂದ ಪ್ರತ್ಯೇಕಿಸಬೇಕು ಎಂದು ಎಫ್ಟಿಎ ಹೇಳಿದೆ.
ವೆಡ್ಬುಷ್ ಸೆಕ್ಯುರಿಟೀಸ್ನ ವಿಶ್ಲೇಷಕ ಡಾನ್ ಐವಿಸ್ ಅವರು, ಫೇಸ್ಬುಕ್ ಅನ್ನು ವಿಭಜಿಸುವ ಕಲ್ಪನೆಯು ಕಾರ್ಯಗತವಾಗುವುದು ಕಷ್ಟ ಎಂದಿದ್ದಾರೆ. ಏಕೆಂದರೆ ಅದು ಕಂಪನಿಯ ಒಟ್ಟು ವ್ಯವಹಾರ ಮಾದರಿಯನ್ನು ಹಾಳು ಮಾಡುತ್ತದೆ. ಕಳೆದ 16 ವರ್ಷಗಳಲ್ಲಿ ಫೇಸ್ಬುಕ್ನ ಮೂರು ಪ್ರಮುಖ ಸ್ವಾಧೀನಗಳಲ್ಲಿ ಇನ್ಸ್ಟಾಗ್ರಾಮ್ ಒಂದಾಗಿದೆ. ಕೆಲವು ಕಾನೂನುಗಳಲ್ಲಿನ ಬದಲಾವಣೆಗಳಿಗೆ ಸಂಸತ್ತಿನ ಅನುಮೋದನೆ ಅಗತ್ಯವಿರುವುದರಿಂದ ಫೇಸ್ಬುಕ್ ಅನ್ನು ತುಂಡುಗಳಾಗಿ ವಿಭಜಿಸುವ ಸಾಧ್ಯತೆ ಕಡಿಮೆ. ಆದರೆ ನ್ಯಾಯಾಲಯದ ತೀರ್ಪಿನ ಮೇಲೆ ಇದು ಅವಲಂಭಿಸಿದೆ. ಆದರೆ ಇದು ಮುಂಬರುವ ದಿನಗಳಲ್ಲಿ ಫೇಸ್ಬುಕ್ ಷೇರುಗಳ ಮೇಲೆ ಒತ್ತಡವನ್ನುಂಟು ಮಾಡಲಿದೆ.
0 التعليقات: