ಇಬ್ಬರು ಉಗ್ರರ ಬಂಧನ, ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ವಶ
ಜಮ್ಮು , ಡಿ.26- ಕಣಿವೆ ರಾಜ್ಯದಲ್ಲಿ ದ ರೆಸಿಸ್ಟೆನ್ಸ್ ಫೋರ್ಸ್ ಉಗ್ರಗಾಮಿ ಸಂಘಟನೆಯ ಇಬ್ಬರು ಉಗ್ರರನ್ನು ಬಂಧಿಸಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ರಿಯಾಜ್ ಅಹಮದ್ ದಾರ್ ಹಾಗೂ ಸುಬ್ಜರ್ ಅಹಮದ್ ಶೇಕ್ ಬಂಧಿತ ಉಗ್ರಗಾಮಿಗಳು.
ಇಬ್ಬರು ಉಗ್ರರು ಶ್ರೀನಗರದಲ್ಲಿ ಕಾರಿನಲ್ಲಿ ಸಂಚರಿಸುತ್ತಿದ್ದಾಗ ವಿಶೇಷ ಕಾರ್ಯಾಚರಣೆ ಪಡೆಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ ಎಂದು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಕಣಿವೆಯಲ್ಲಿ ಉಗ್ರರು ಆಟೋಮ್ಯಾಟಿಕ್ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯನ್ನಾದರಿಸಿ ವಿಶೇಷ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ನಾಕಾಬಂದಿ ಏರ್ಪಡಿಸಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾಗ ಆಲ್ಟೋ ಕಾರಿನಲ್ಲಿ ಬಂದ ಉಗ್ರರು ಪರಾರಿಯಾಗಲು ಯತ್ನಿಸಿದಾಗ ಸಿನಿಮೀಯ ಮಾದರಿಯಲ್ಲಿ ಕಾರನ್ನು ಚೇಸ್ ಮಾಡಿ ಉಗ್ರರನ್ನು ಬಂಧಿಸಿ ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉಗ್ರರ ಬಳಿ ಇದ್ದ ಬ್ಯಾಗ್ನಲ್ಲಿ ಎಕೆ-47 ರೈಫಲ್ , 60 ಮದ್ದು ಗುಂಡು, ಪಿಸ್ತೂಲು ಮತ್ತಿತರ ಸ್ಫೋಟಕಗಳು ಪತ್ತೆಯಾಗಿದ್ದು , ಉಗ್ರರ ವಿರುದ್ಧ ಶಸ್ತ್ರಾಸ್ತ್ರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪಾಕ್ ಮೂಲದ ಲಷ್ಕರ್-ಇ-ತೊಯ್ಬಾ ಸಂಘಟನೆಯ ಒಂದು ಬಣವಾಗಿರುವ ಟಿಆರ್ಎಫ್ ಸಂಘಟನೆಗೆ ಸೇರಿದ ಉಗ್ರರು ಎನ್ನಲಾಗಿದೆ.
0 التعليقات: