Saturday, 12 December 2020

ವಿಡಿಯೋ ವೈರಲ್; ನಾಯಿ ಕುತ್ತಿಗೆಗೆ ಹಗ್ಗ ಕಟ್ಟಿ ಕಾರು ಓಡಿಸಿದ ವ್ಯಕ್ತಿ


 ವಿಡಿಯೋ ವೈರಲ್; ನಾಯಿ ಕುತ್ತಿಗೆಗೆ ಹಗ್ಗ ಕಟ್ಟಿ ಕಾರು ಓಡಿಸಿದ ವ್ಯಕ್ತಿ

ತಿರುವನಂತಪುರಂ, ಡಿಸೆಂಬರ್ 12: ಸಾಕು ನಾಯಿಯನ್ನು ಕಾರಿಗೆ ಕಟ್ಟಿ, ಜೋರಾಗಿ ಕಾರು ಓಡಿಸುತ್ತಾ ರಸ್ತೆಯಲ್ಲಿ ಎಳೆದುಕೊಂಡು ಹೋದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೇರಳದ ಎರ್ನಾಕುಲಂನಲ್ಲಿ ಈ ಘಟನೆ ನಡೆದಿದೆ. ಪ್ರಾಣಿಯನ್ನು ಈ ರೀತಿ ಕ್ರೂರವಾಗಿ ನಡೆಸಿಕೊಂಡಿರುವ 62 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಯೂಸುಫ್ ಎಂಬ ಈ ವ್ಯಕ್ಯಿಯು ಕಾರಿನ ಮಾಲೀಕನಾಗಿದ್ದು, ಈತನೇ ತಾನು ಸಾಕಿದ ನಾಯಿಯನ್ನು ಹೀಗೆ ಕಟ್ಟಿ ಹಾಕಿ ಕಾರು ಚಲಾಯಿಸಿದ್ದಾನೆ. ನಾಯಿಯ ಕುತ್ತಿಗೆಗೆ ಹಗ್ಗದಿಂದ ಬಿಗಿದು ಕಾರಿನ ಡಿಕ್ಕಿಗೆ ಕಟ್ಟಿ ಕಾರನ್ನು ಜೋರಾಗಿ ಓಡಿಸಿದ್ದಾನೆ. ತನ್ನ ಮನೆಯಲ್ಲಿ ನಾಯಿ ಕಿರಿಕಿರಿ ಮಾಡುತ್ತಿದ್ದು, ಅದನ್ನು ಬೇರೆಡೆಗೆ ಬಿಟ್ಟುಬರಲು ಈ ರೀತಿ ಕರೆದುಕೊಂಡು ಹೋಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.

ಕಾರಿನ ಹಿಂದೆ ಬೈಕ್ ನಲ್ಲಿ ಬರುತ್ತಿದ್ದ ಅಖಿಲ್ ಎಂಬಾತ ಈ ದೃಶ್ಯದ ವಿಡಿಯೋ ಮಾಡಿದ್ದಾನೆ. "ಮೊದಲು ಕಾರನ್ನು ನಾಯಿ ಅಟ್ಟಾಡಿಸಿಕೊಂಡು ಹೋಗುತ್ತಿರುವಂತೆ ಕಂಡಿತ್ತು. ಆ ನಂತರ ಕಾರಿನ ವೇಗವನ್ನೂ ಹೆಚ್ಚಿಸಿದ್ದು, ನಾಯಿ ರಸ್ತೆಯ ಮೇಲೆ ಎಳೆದಾಡುವಂತೆ ಕಾಣಿಸುತ್ತಿತ್ತು. ಸಮೀಪ ಹೋದಾಗ ನಾಯಿಯ ಕುತ್ತಿಗೆಗೆ ಹಗ್ಗ ಕಟ್ಟಿದ್ದು ಕಂಡುಬಂತು" ಎಂದು ಅಖಿಲ್ ವಿವರಿಸಿದ್ದಾರೆ.

ಶುಕ್ರವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಅಖಿಲ್ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಪ್ರಾಣಿಗಳ ಮೇಲೆ ಕ್ರೂರತ್ವ ತೋರಿದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಘಟನೆಗೆ ಪ್ರಾಣಿ ದಯಾ ಸಂಘದವರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.ನಾಯಿಗೆ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆಯನ್ನು ಕೊಡಿಸಿ ಆರೈಕೆ ಮಾಡಲಾಗುತ್ತಿದೆ.


SHARE THIS

Author:

0 التعليقات: