ಒಣಗಿಸಿದ್ದ ಬಟ್ಟೆ ತರಲು ಹೋದ ಯುವತಿಯನ್ನು ಅಪಹರಿಸಿ ರೇಪ್ ಮಾಡಿದ ಪಾಪಿಗಳು!
ಪಟನಾ: ತೊಳೆದು ಒಣೆಸಿದ್ದ ಬಟ್ಟೆಯನ್ನು ತರಲು ಮನೆಯಿಂದ ಹೊರನಡೆದ ಯುವತಿಯನ್ನು ಯುವಕರ ಗ್ಯಾಂಗ್ ಒಂದು ಅಪಹರಿಸಿ ಅತ್ಯಾಚಾರವೆಸಗಿರುವ ಘಟನೆ ಬಿಹಾರದ ಮುಜಾಫರ್ಪುರದಲ್ಲಿ ನಡೆದಿದೆ. ಯುವತಿ ಬುಧವಾರ ಬೆಳಗ್ಗೆ ಮನೆ ಹತ್ತಿರದ ಮೋರಿಯ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ಹೇಳಲಾಗಿದೆ.
ಮುಜಾಫರ್ಪುರದ ಕಾಂತಿ ಪೊಲೀಸ್ ಠಾಣಾ ವ್ಯಾಪ್ತಿಯ ಪುಟ್ಟ ಗ್ರಾಮವೊಂದರಲ್ಲಿ ವಾಸಿಸುವ ಕುಟುಂಬದ ಮಗಳು ಮಂಗಳವಾರ ರಾತ್ರಿ 10 ಗಂಟೆ ಹೊತ್ತಿಗೆ ಮನೆಯಿಂದ ಹೊರಗೆ ಬಂದಿದ್ದಾಳೆ. ಅಂಗಳದಲ್ಲಿ ಒಣಗಿಸಿದ್ದ ಬಟ್ಟೆ ತೆಗೆದುಕೊಂಡು ರೂಮಿಗೆ ಹೋಗಲು ಮುಂದಾಗಿದ್ದಾಳೆ. ಮೊದಲೇ ಹೊಂಚು ಹಾಕಿ ಕುಳಿತಿದ್ದ ಯುವಕರ ಗ್ಯಾಂಗ್ ಒಂದು ಹಿಂದಿನಿಂದ ಆಕೆಯ ಬಾಯಿಯನ್ನು ಒತ್ತಿ ಹಿಡಿದು ಎಳೆದುಕೊಂಡು ಹೋಗಿದೆ. ಎಷ್ಟು ಹೊತ್ತಾದರೂ ಮಗಳು ಮನೆ ಒಳಗೆ ಬಾರದಿರುವುದು ನೋಡಿ ತಂದೆ ತಾಯಿ ಎಲ್ಲೆಡೆ ಮಗಳಿಗಾಗಿ ಹುಡುಕಾಡಿದ್ದಾರೆ.
ಬುಧವಾರ ಬೆಳಗ್ಗೆ ಯುವತಿಯು ಪ್ರಜ್ಞಾಹೀನ ಸ್ಥಿತಿಯಲ್ಲಿ ಮನೆಯ ಹತ್ತಿರವಿದ್ದ ಮೋರಿಯ ಬಳಿ ಸಿಕ್ಕಿದ್ದಾಳೆ. ತಕ್ಷಣ ಪೊಲೀಸರಿಗೆ ವಿಚಾರ ಮುಟ್ಟಿಸಲಾಗಿದೆ. ಗ್ರಾಮಸ್ಥರ ಸಹಾಯದಿಂದ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ. ಈ ವಿಚಾರವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.
0 التعليقات: