Wednesday, 16 December 2020

ಸತೀಶ್ ಜಾರಕಿಹೊಳಿ ಆಪ್ತ, 'ಕಾಂಗ್ರೆಸ್ ಕಾರ್ಯಕರ್ತರ' ಮೇಲೆ ಫೈರಿಂಗ್


  ಸತೀಶ್ ಜಾರಕಿಹೊಳಿ ಆಪ್ತ, 'ಕಾಂಗ್ರೆಸ್ ಕಾರ್ಯಕರ್ತರ' ಮೇಲೆ ಫೈರಿಂಗ್

ಹುಕ್ಕೇರಿ : ಗ್ರಾಮ ಪಂಚಾಯ್ತಿ ಚುನಾವಣೆಯ ವೈಷಮ್ಯದ ಹಿನ್ನಲೆಯಲ್ಲಿ ಶಾಸಕ ಸತೀಶ್ ಜಾರಕಿಹೊಳಿ ಆಪ್ತ ಹಾಗೂ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಅಪರಿಚಿತ ಇಬ್ಬರಿಂದ ಗುಂಡಿನ ದಾಳಿ ನಡೆದಿರುವ ಘಟನೆ ಯಮಕನಮರಡಿಯಲ್ಲಿ ನಡೆಸಿದೆ.

ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ಅಪರಿಚಿತ ಇಬ್ಬರಿಂದ ಸತೀಶ್ ಜಾರಕಿಹೊಳಿ ಆಪ್ತ ಹಾಗೂ ಕಾಂಗ್ರೆಸ್ ಕಾರ್ಯಕರ್ತರಾದಂತ ಕಿರಣ್, ಭರಮಾ ದೂಪದಾಳೆ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ.

ಗುಂಡಿನ ದಾಳಿಯಲ್ಲಿ ಭರಮ ದೂಪದಾಳೆ ಗಾಯಗೊಂಡಿದ್ದರೇ, ಕಿರಣ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾಸ್ಕ್ ಹಾಕಿಕೊಂಡು ಬಂದಂತ ಅಪರಿಚಿತ ಇಬ್ಬರಿಂದ, ದೇವಾಲಯದ ಕಟ್ಟೆಯ ಮೇಲೆ ಕುಳಿತಿದ್ದಾಗ ಗುಂಡಿನ ದಾಳಿ ನಡೆಸಲಾಗಿದೆ.SHARE THIS

Author:

0 التعليقات: