Saturday, 26 December 2020

ಬಜ್ಪೆ ನಿವಾಸಿ ಸೌದಿಯಲ್ಲಿ ನಿಧನ: ಅಂತ್ಯಕ್ರಿಯೆಗೆ ಕೆಸಿಎಫ್ ನೆರವು


 ಬಜ್ಪೆ ನಿವಾಸಿ ಸೌದಿಯಲ್ಲಿ ನಿಧನ: ಅಂತ್ಯಕ್ರಿಯೆಗೆ ಕೆಸಿಎಫ್ ನೆರವು

ಅಲ್ ಕೋಬರ್ : ಸೌದಿ ಅರೇಬಿಯಾದ ಅಲ್ ಕೋಬರ್ ಅಬೂ ನಯನ್ ಗ್ರೂಪ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ  ಬಜ್ಪೆ ನಿವಾಸಿ ಹುಸೈನ್ ಮೋನು ಎಂಬುವವರು ಮಂಗಳವಾರ ತಾ: ಡಿಸಂಬರ್ 22 ರಂದು ತಮ್ಮ ರೂಮ್ ನಲ್ಲಿ ಇಶಾ ನಮಾಜಿನ ಸುಜೂದ್ ನಲ್ಲಿ ಮರಣಹೊಂದಿದ್ದರು ಅವರ ಮಯ್ಯತಿನ ದಫನ ಕಾರ್ಯಕ್ಕೆ ಸೌದಿ ಸರಕಾರದ ನಿಯಮಾವಳಿಗನ್ನು ಪಾಲಿಸಿ ಪೇಪರ್ ವರ್ಕ್ ಹಾಗು ಇನ್ನಿತರ ಕೆಲಸಗಳನ್ನು ಕೈಗೆತ್ತಿಕೊಂಡ ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆ.ಸಿ.ಎಫ್)ಇದರ ಸಾಂತ್ವನ ವಿಭಾಗ ನಾಯಕರಾದ ಮಹಮ್ಮದ್ ಮಲೆಬೆಟ್ಟು (ರಾಷ್ಟ್ರೀಯ ಸಾಂತ್ವನ ಚೇರ್ಮಾನ್) ಹಾಗು ಬಾಷಾ ಗಂಗಾವಳಿ ರೈಸ್ಕೋ (ಝೋನ್ ಸಾಂತ್ವನ ಕನ್ವೀನರ್) ಇವರು ಕೂಡಲೆ ಕಾರ್ಯ ಪ್ರವರ್ತರಾಗಿ ಕೇವಲ 2 ದಿನದಲ್ಲಿ ಎಲ್ಲಾ ಕೆಲಸ ಕಾರ್ಯವನ್ನು ಮುಗಿಸಿದರು ಅಲ್ ಹಂದುಲಿಲ್ಲಾಹ್ ನಿನ್ನೆ ಜುಮಾ ಬಳಿಕ ಕೋಬರ್ ಇಸ್ಕಾನ್ ಕಿಂಗ್ ಫಹದ್ ಮಸ್ಜಿದ್ ಬಳಿ ಮಯ್ಯತ್ ನಮಾಜ್ ನಿರ್ವಹಿಸಿ ದಫನ ಕಾರ್ಯ ನೆರೆವೇರಿಸಲಾಯಿತು.

ಮ್ರತರ ಕುಟುಂಬವು ಊರಿನಲ್ಲಿ ಇದ್ದು 3 ಹೆಣ್ಣು ಹಾಗು 1 ಗಂಡು ಮಕ್ಕಳನ್ನು ಅಗಲಿದ್ದಾರೆ. ಸಹೋದರ ಝಿಯಾ ಮತ್ತು ಮುಖ್ತಾರ್ ಬಜ್ಪೆ  ಎಂಬುವವರು ಕೋಬರ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಪೇಪರ್ ಕೆಲಸಕ್ಕೆ ಕೆ.ಸಿ.ಎಫ್ ತಂಡದೊಂದಿಗೆ ಸಂಪೂರ್ಣ ಸಹಕರಿಸಿದ್ದಾರೆ.

ದಫನ ಕಾರ್ಯದಲ್ಲಿ ಕುಟುಂಬದ ಸದಸ್ಯರು, ಸ್ನೇಹಿತರು ಹಾಗು ಕೆ.ಸಿ.ಎಫ್ ದಮ್ಮಾಮ್ ಝೋನ್, ಸೆಕ್ಟರ್ ನಾಯಕರು, ಅದೇ ರೀತಿ ಬಜ್ಪೆ ವಿದೇಶ ಸಮಿತಿಯಾದ "ಬಾಮಾ" ಇದರ ಅಧ್ಯಕ್ಷರಾದ ಸೈಯ್ಯದ್ ಬಾವ ಬಂಕಲ್   ಹಾಗು ಇನ್ನಿತರ ಸದಸ್ಯರು ಪಾಲ್ಗೊಂಡರು, ದಮ್ಮಾಮ್ ನಾರ್ತ್ ಸೆಕ್ಟರ್ ಅಧ್ಯಕ್ಷರಾದ ಶಿಹಾಬ್ ಹಿಮಮಿ ಸಖಾಫಿ ಮರವೂರು ದುಅ ನೆರೆವೇರಿಸಿದರು.






SHARE THIS

Author:

0 التعليقات: