Monday, 28 December 2020

ಶಿಮ್ಲಾದಲ್ಲಿ ಹಿಮ ಮಳೆ...ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳ ಸುರಿಮಳೆ..!


ಶಿಮ್ಲಾದಲ್ಲಿ ಹಿಮ ಮಳೆ...ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳ ಸುರಿಮಳೆ..!

ಡಿಸೆಂಬರ್​ ಅಂದ್ರೆ ಸಾಕು. ಎಲ್ಲಿಲ್ಲದ ಚಳಿ ಶುರುವಾಗಿಬಿಡುತ್ತೆ. ಅದರಲ್ಲೂ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಂತೂ ಈ ಸಮಯದಲ್ಲಿ ಮಂಜಿನ ಮಳೆಯೇ ಶುರುವಾಗಿರುತ್ತೆ.

ಪ್ರತಿ ವರ್ಷದಂತೆ ಈ ವರ್ಷವೂ ಶಿಮ್ಲಾದ ಜನತೆ ಸೋಮವಾರ ಮಂಜಿನ ಮಳೆಗೆ ಸಾಕ್ಷಿಯಾಗಿದ್ದಾರೆ. ಹಿಮ ಮಳೆಯಿಂದಾಗಿ ಶಿಮ್ಲಾ ಹಾಗೂ ಮನಾಲಿಗೆ ತೆರಳುವ ಮಾರ್ಗಗಳು ಬ್ಲಾಕ್ ಆಗಿದ್ದು ಪ್ರವಾಸಿಗರು ಮುಂದಿನ ಸೂಚನೆವರೆಗೂ ಈ ಜಾಗಕ್ಕೆ ಬಾರದಂತೆ ಪೊಲೀಸರು ಸೂಚನೆ ನೀಡಿದ್ದಾರೆ.

ಹಿಮಾಚಲ ಪ್ರದೇಶದ ಪ್ರವಾಸಿ ತಾಣಗಳಾದ ಶಿಮ್ಲಾ, ಕುಫ್ರಿ, ಫಾಗು ಹಾಗೂ ನರ್​ಕಂದಾಗಳಲ್ಲಿ ಹಿಮ ಮಳೆ ಉಂಟಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಿಮ ಮಳೆಯ ಫೋಟೋಗಳು ಸಖತ್​ ವೈರಲ್​ಆಗಿವೆ.




SHARE THIS

Author:

0 التعليقات: