ರಾಜಕೀಯ ಪಕ್ಷಕ್ಕೆ ಜನವರಿಯಲ್ಲಿ ಚಾಲನೆ: ರಜನಿಕಾಂತ್
ಚೆನ್ನೈ: 2021ರ ಜನವರಿಯಲ್ಲಿ ತಮ್ಮ ರಾಜಕೀಯ ಪಕ್ಷವನ್ನು ಪ್ರಾರಂಭಿಸುವುದಾಗಿ ಸೂಪರ್ಸ್ಟಾರ್ ರಜನಿಕಾಂತ್ ಅವರು ತಿಳಿಸಿದ್ದಾರೆ.
2021ರಲ್ಲಿ ನಡೆಯಲಿರುವ ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸಿ, ಜನರ ಭಾರಿ ಬೆಂಬಲದೊಂದಿಗೆ ಗೆಲುವನ್ನು ಸಾಧಿಸಲಿದೆ ಎಂದು ರಜನಿಕಾಂತ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
2021 ಏಪ್ರಿಲ್- ಮೇ ತಿಂಗಳಲ್ಲಿ ತಮಿಳುನಾಡು ವಿಧಾನಭೆಗಾಗಿ ಚುನಾವಣೆ ನಡೆಯಲಿದೆ.
'ಮುಂದಿನ ವಿಧಾನಸಭಾ ಚುನಾವಣೆ ವೇಳೆ ತಮ್ಮ ಪಕ್ಷವು ಖಂಡಿತವಾಗಿಯೂ ಪದಾರ್ಪಣೆಗೊಳ್ಳಲಿದೆ. ಪಕ್ಷದ ಸ್ಥಾಪನೆ ಸಂಬಂಧಿಸಿದ ವಿಷಯಗಳ ಬಗ್ಗೆ ಡಿಸೆಂಬರ್ 31 ರಂದು ಪ್ರಕಟಿಸಲಾಗುವುದು' ಎಂದು ಅವರು ಟ್ವೀಟ್ ಮಾಡಿದ್ದಾರೆ.
0 التعليقات: