ಡ್ರಗ್ಸ್ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಮಾದಕವಸ್ತು ನಿಯಂತ್ರಣ ಸಂಸ್ಥೆ ಬಂಧಿಸಿದೆ.
ದಾಳಿ ವೇಲೆ ₹ 2.5 ಕೋಟಿ ಮೌಲ್ಯದ 'ಮಲಾನಾ ಕ್ರೀಮ್' ವಶಪಡಿಸಿಕೊಳ್ಳಲಾಗಿದೆ. ಇನ್ನೂ ದಾಳಿ ಮುಂದುವರಿದಿದೆ. ಬಂಧಿತನನ್ನು ರೆಗಹಲ್ ಮಹಕಲ್ ಎಂದು ಗುರುತಿಸಲಾಗಿದೆ.
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಯಲ್ಲಿ ಈ ಆರೋಪಿಯ ಬಂಧನ ಪ್ರಮುಖವಾದುದಾಗಿದೆ' ಎಂದು ಎನ್ಸಿಬಿ ಅಧಿಕಾರಿ ಹೇಳಿದ್ದಾರೆ.
ಎನ್ಸಿಬಿ ತನಿಖಾ ಸಂಸ್ಥೆಯ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರ ನೇತೃತ್ವದ ತಂಡವು ಲೋಖಂಡ್ವಾಲಾ ಸೇರಿದಂತೆ ಮುಂಬೈನ ಕೆಲವು ಪ್ರದೇಶಗಳಲ್ಲಿ ಮಂಗಳವಾರ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ವಿವರ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ.
ಸುಶಾಂತ್ ಸಿಂಗ್ ಪ್ರಕರಣದ ತನಿಖೆ ವೇಳೆಗೆ ಕೆಲವು ಡ್ರಗ್ಸ್ ಪೆಡ್ಲರ್ಗಳು ಪ್ರಶ್ನಿಸುವಾಗ, ಅವರು ಮಹಕಲ್ ಹೆಸರು ಹೇಳಿದ್ದರು. ಮಹಕಲ್, ಈ ಪ್ರಕರಣದಲ್ಲಿ ಬಂಧಿತನಾಗಿರುವ ಅನುಜ್ ಕೇಶವಾನಿ ಮತ್ತಿತರರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಎಂದು ಅವರು ಹೇಳಿದ್ದರು.
0 التعليقات: